ನಾಳೆಯಿಂದ ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಆರಂಭ! ಭಕ್ತರಿಗೆ ಇಲ್ಲಿದೆ ಮೂರು ಮುಖ್ಯ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram

shivamogga Mar 11, 2024   ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ನಾಳೆಯಿಂದ ಆರಂಭವಾಗಲಿದೆ. ಗಾಂಧಿ ಬಜಾರ್​ನಲ್ಲಿ ನಾಳೆ ದೇವಿ ದರ್ಶನ ಆರಂಭವಾಗಲಿದ್ದು ಸಾವಿರಾರು ಮಂದಿ ಬೆಳಗ್ಗೆಯೇ ಪೂಜೆ ಸಲ್ಲಿಸಲು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಕಲಚೇತನರು  ಹಾಗೂ ಗರ್ಭಿಣಿಯರಿಗೆ ಉಚಿತ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದೆ 

ಅಲ್ಲದೆ ವಿಶೇಷ ದರ್ಶನಕ್ಕಾಗಿ ಗಾಂಧಿ ಬಜಾರ್ ಮುಖ್ಯ ದ್ವಾರ ಹಾಗೂ ದೇವಸ್ಥಾನದ ಬಳಿ ವಿಶೇಷ ಟಿಕೆಟ್ ಕೌಂಟರ್ ತೆರೆಯಲಾಗಿದೆ. ದರ್ಶನಕ್ಕೆ 200ರೂ. ಟಿಕೇಟ್ ದರ ನಿಗದಿಪಡಿಸಲಾಗಿದೆ. 

ಅಲ್ಲದೆ ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು,  ಕಳ್ಳತನ ಹಾಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಕಟ್ಟೆಚ್ಚರವಹಿಸಲಾಗುತ್ತಿದೆ. ಈ ಸಂಬಂಧ ಇವತ್ತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾರಿಕಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್​.ಮಂಜುನಾಥ್​  ಹಿಂದೆಲ್ಲಾ ಜಾತ್ರೆ ನಡೆದಾಗ ಕಳ್ಳತನ ಪ್ರಕರಣ ಹೆಚ್ಚು ದಾಖಲಾಗುತ್ತಿದ್ದವು. ಅದೇ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ಸಹಕಾರದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor