ಸೋಲಾರ್ ಪವರ್​ನಿಂದಲೂ ಹುಲ್ಲು ಕಟಾವ್ ಮಾಡಬಹುದು! ಹೊಸನಗರ ಹುಡುಗನ ಹೊಸ ಆವಿಷ್ಕಾರ!

Abhishek, a class 9 student of Chikkajeni Government High School in Hosanagara taluk of Shivamogga district, has made a grass cutting machine that runs on solar power

ಸೋಲಾರ್ ಪವರ್​ನಿಂದಲೂ ಹುಲ್ಲು ಕಟಾವ್ ಮಾಡಬಹುದು! ಹೊಸನಗರ ಹುಡುಗನ ಹೊಸ ಆವಿಷ್ಕಾರ!

SHIVAMOGGA NEWS / ONLINE / Malenadu today/ Nov 23, 2023 NEWS KANNADA

Shivamogga  |  Malnenadutoday.com |  ಈಗೀನ ಮಕ್ಕಳ ಬುದ್ದಿವಂತಿಕೆ ಬಗ್ಗೆ ಹೇಳುವುದೇ ಬೇಡ.. ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಬೇಕಷ್ಟೆ…ಇದಕ್ಕೆ ಉದಾಹರಣೆ ಎಂಬಂತಹ ಸಾಧನೆಯೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಸರಕಾರಿ ಪ್ರೌಡಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಮಾಡಿದ್ದಾರೆ. 

ಇವರು  ಸೌರಶಕ್ತಿಯಿಂದ ಓಡುವ ಹುಲ್ಲು ಕಟಾವ್ ಯಂತ್ರ ಆವಿಷ್ಕಾರ ಮಾಡಿದ್ದಾರೆ. ಇದು  ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.  ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 

ಮನೆಯಲ್ಲಿಯೇ ಲಭ್ಯವಿದ್ದ ಸೋಲಾರ್ ಪ್ಲೇಟ್,ಕಟ್ ಪೀಸ್ ಕಬ್ಬಿಣದ   ಸಹಾಯದಿಂದ ಒಂದು ಸಾವಿರ ರೂ. ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇವರ ಸಾಧನೆಗೆ ವಿಜ್ಞಾನದ ಶಿಕ್ಷಕ ಮಹೇಶ್ ವಿದ್ಯಾರ್ಥಿ ಅಭಿಷೇಕ್ ಗೆ ಮಾರ್ಗದರ್ಶನ ನೀಡಿದ್ದಾರೆ.ಮನೆಯ ಸುತ್ತಮುತ್ತ ಬೆಳೆದಂತಹ ಹುಲ್ಲುಗಳನ್ನು ಕಡಿಮೆ ವೆಚ್ಚದ ಈ ಸೋಲಾರ್ ಯಂತ್ರದ ಮೂಲಕ ಕಟಾವ್ ಕಾರ್ಯಕ್ಕೆ ಬಳಸಬಹುದಾಗಿದೆ.

READ :ಆ ತಪ್ಪು ಮಾಡದಿದ್ದರೇ ಈ ಜೀವ ಉಳಿಯುತ್ತಿತ್ತು!! ಸೀಕ್ರೆಟ್ ಎಲಿಫೆಂಟ್​ನ ಮೂರನೇ ಕೊಲೆಗೆ ಕಾರಣವಾದವರು ಯಾರು!? JP ಬರೆಯುತ್ತಾರೆ

ಕಾರಕ್ಕಿ ನಿವಾಸಿಗಳಾದ ಸತೀಶ್ ಹಾಗೂ ಆಶಾ ದಂಪತಿಗಳ ಪುತ್ರನಾದ ಅಭಿಷೇಕ್ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತಿದ್ದಾನೆ. ಇವರ ಸಾಧನೆ ಬಗ್ಗೆ ಮಾತನಾಡಿರುವ  ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕ ಮಹೇಶ್  ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಎಂತಹದನ್ನು ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ನನ್ನ ವಿದ್ಯಾರ್ಥಿ ಅಭಿಷೇಕ್ ಸಾಕ್ಶಿಯಾಗಿದ್ದಾನೆ,ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸೋಲಾರ್ ಹುಲ್ಲು ಕಟಾವ್ ಯಂತ್ರ ಎಲ್ಲಾ ತೀರ್ಪುಗಾರರ,ವೀಕ್ಷಕರ ಗಮನ ಸೆಳೆದು ಪ್ರಥಮ ಸ್ಥಾನ ಗಳಿಸಿದೆ. ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಈ ಯಂತ್ರವನ್ನು ಇನ್ನಷ್ಟೂ ಅಭಿವೃದ್ಧಿ ಪಡಿಸಲು ವಿದ್ಯಾರ್ಥಿ ಅಭಿಷೇಕ್ ಇಂಗಿತ ವ್ಯಕ್ತಪಡಿಸಿದ್ದು ಅಗತ್ಯ ಸಲಹೆ ನೀಡುತ್ತೇನೆ ಎಂದರು.