ಆ ತಪ್ಪು ಮಾಡದಿದ್ದರೇ ಈ ಜೀವ ಉಳಿಯುತ್ತಿತ್ತು!! ಸೀಕ್ರೆಟ್ ಎಲಿಫೆಂಟ್​ನ ಮೂರನೇ ಕೊಲೆಗೆ ಕಾರಣವಾದವರು ಯಾರು!? JP ಬರೆಯುತ್ತಾರೆ

Who is responsible for the loss of lives in the ongoing anti-wild elephant operation at Mudigere in Chikkamagaluru district? JP writes

ಆ ತಪ್ಪು ಮಾಡದಿದ್ದರೇ ಈ ಜೀವ ಉಳಿಯುತ್ತಿತ್ತು!! ಸೀಕ್ರೆಟ್ ಎಲಿಫೆಂಟ್​ನ ಮೂರನೇ ಕೊಲೆಗೆ ಕಾರಣವಾದವರು ಯಾರು!?  JP  ಬರೆಯುತ್ತಾರೆ

SHIVAMOGGA NEWS / ONLINE / Malenadu today/ Nov 23, 2023 NEWS KANNADA

chikkamagaluru |  Malnenadutoday.com | ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಿಂದ ಸಕ್ರೆಬೈಲು ಸಾಕಾನೆಗಳು ವಾಪಸ್ಸಾದ  ಬೆನ್ನಲ್ಲೆ ನಡೆದ ಆನೆ ನಿಗ್ರಹ ಪಡೆಯ ಸಿಬ್ಬಂದಿ ಸಾವಿಗೆ ಹೊಣೆ ಯಾರು? ಜೆಪಿ ಬರೆಯುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಕಾಡಾನೆಗಳ ಹಾವಳಿ ತಡೆಯಲು ಸಕ್ರೆಬೈಲು ಆನೆ ಬಿಡಾರದ ಕುಮ್ಕಿ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕರೆದೊಯ್ಯಲಾಗಿತ್ತು. ಒಂದು ಆನೆಯನ್ನು ಸೆರೆಹಿಡಿಯುವ ಹಾಗು ಮತ್ತೊಂದು ಆನೆಯನ್ನು ಹಿಮ್ಮೆಟ್ಟಿಸುವ ಎರಡು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. 

ಆರಂಭದಲ್ಲಿ ಆನೆ ಕಾರ್ಯಾಚರಣೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮೂಡಿಗೆರೆ ತಾಲೂಕಿನ ಸುತ್ತಮುತ್ತ ಓಡಾಡುತ್ತ ಬೆಳೆಹಾನಿ ಹಾಗು ಜೀವಹಾನಿ ಮಾಡುತ್ತಿದ್ದ  ನರಹಂತಕ ಆನೆ ಯಾವಾಗ ಕಾಡಾನೆಗಳ ಹಿಂಡು ಸೇರಿಕೊಂಡಿತೋ, ಆಗ ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗಳಿಗೆ ಗೊಂದಲ ಸೃಷ್ಟಿಯಾಯ್ತು. 

READ :ಹೊಟ್ಟೆನೋವಿಗೆ ಆಸ್ಪತ್ರೆ ಸೇರಿದ ಬಾಲಕಿಯಿಂದ ಮಗುವಿಗೆ ಜನ್ಮ! ಕುಡಿಯನ್ನ ಕೊಂದು ಪರಾರಿ! ವೈದ್ಯರ ನಿರ್ಲಕ್ಷ್ಯ!?

ಏಕೆಂದರೆ ಚಿನ್ನಿ ಹಾಗು ವೀಣಾ ಎಂಬುವರನ್ನು  ಬಲಿ ಪಡೆದಿದ್ದ ಕಾಡಾನೆy ನಿಖರತೆ ಯಾರಿಗೂ ಗೊತ್ತಿರಲಿಲ್ಲ. ಸಡನ್ ಚಾರ್ಚಿಂಗ್ ಮಾಡುವ ಕುಖ್ಯಾತಿ ಪಡೆದಿದ್ದ ಈ ಕಾಡಾನೆ ಸೆರೆಗಾಗಿಯೇ ಸಕ್ರೆಬೈಲು ಹಾಗು ದುಬಾರೆ ಕ್ಯಾಂಪ್ ನಿಂದ ಆನೆಗಳನ್ನು ಕರೆಸಿಕೊಳ್ಳಲಾಗಿತ್ತು. ಹಿಂಡಿನಿಂದ ಹೊರಬಂದಿದ್ದ ಒಂಟಿ ಸಲಗವನ್ನೇ ನರ ಹಂತಕ ಆನೆ ಎಂದು ಅಂದಾಜಿನ ಮೇಲೆ ಡಾರ್ಟ್ ಮಾಡಿ ಸೆರೆ ಹಿಡಿಯಲಾಗಿತ್ತು. ನಂತರ ಸಕ್ರೆಬೈಲಿಗೆ ಸ್ಥಳಾಂತರಿಸಲಾಗಿತ್ತು.  

ಮತ್ತೊಂದೆಡೆ ಬೈರಾಪುರ ಸುತ್ತಮುತ್ತ ಓಡಾಡುತ್ತಿದ್ದ ಕಾಡಾನೆಯನ್ನು ಹಿಮ್ಮೆಟ್ಟಿಸುವ ಕಾರ್ಯಾರಣೆ ಕೈಗೊಳ್ಳಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಆನೆ ನಿಗ್ರಹ ಪಡೆಯಲ್ಲಿದ್ದ 26 ವರ್ಷದ ಕಾರ್ತಿಕ್ ಗೌಡ ಸೇರಿದಂತೆ ಸ್ಥಳೀಯ ಯುವಕರು ಪಾಲ್ಗೊಂಡಿದ್ದರು. ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ. 

ಹೇಗಿದ್ರೂ ಒಂದು ಕಾಡಾನೆಯನ್ನು ಸೆರೆ ಹಿಡಿದು ಆಗಿದೆ. ಮತ್ತೊಂದು ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯ ತಾನೆ..ಆನೆ ನಿಗ್ರಹ ಪಡೆಯ ಸಿಬ್ಬಂದಿಗಳು ಮಾಡುತ್ತಾರೆ ಎಂದು ಭಾವಿಸಿ, ಸಕ್ರೆಬೈಲು ಆನೆ ಬಿಡಾರದ ಸಾಕಾನೆಗಳನ್ನು ಕಾರ್ಯಾಚರಣೆಯಿಂದ ಕೈಬಿಡಲಾಯಿತು. ಆ ಆನೆಗಳು ಮೊನ್ನೆ ಸಕ್ರೆಬೈಲು ಬಿಡಾರ ತಲುಪಿದವು. ಇತ್ತ ಆನೆ ನಿಗ್ರಹ ಪಡೆಯ ಪಡೆ ಸಿಬ್ಬಂದಿಗಳು ಜೀವ ಪಣಕ್ಕಿಟ್ಟು ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಯಿತು. 

ನರಹಂತಕ ಆನೆಯಿಂದಲೇ ಮೂರನೇ ಬಲಿ 

ಹೀಗೊಂದು ಪ್ರಶ್ನೆ ಸ್ಥಳೀಯವಾಗಿ ದಟ್ಟವಾಗಿ ಕೇಳಿಬರುತ್ತಿದೆ. ಯಾವ ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತೋ..ಆ ಕಾಡನೆಯೇ ಕಾರ್ತಿಕ್ ಗೌಡನ ಮೇಲೆ ಹಲ್ಲೆ ನಡೆಸಿ ಜೀವ ತೆಗೆದಿದೆ ಎಂದು ನಂಬಲರ್ಹ ಮೂಲಗಳು ತಿಳಿಸುತ್ತಿದೆ. ಈ ಅನುಮಾನ ಆನೆ ಸಿಬ್ಬಂದಿಗಳಿಗೂ ಇತ್ತು.

ಯಾವ ಬೆಳೆ ಹಾನಿ ಮಾಡದ ಜನರಿಗೆ ತೊಂದರೆ ಕೊಡದ ಸೌಮ್ಯ ಸ್ವಭಾವದ ಕಾಡಾನೆಯನ್ನು ಸೆರೆ ಹಿಡಿದು,ಸಕ್ರೆಬೈಲಿಗೆ ಸ್ಥಳಾಂತರಿಸಿ ಅರಣ್ಯಾಧಿಕಾರಿಗಳು ಮಾಡಿದ ಕಣ್ಣೊರಿಸುವ ತಂತ್ರಕ್ಕೆ ಈಗ ಮತ್ತೋರ್ವ ಸಿಬ್ಬಂದಿ ಬಲಿಯಾದಂತಾಗಿದೆ. ಬೈರಾಪುರದ ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಕುಮ್ಕಿ ಆನೆಗಳು ಇದ್ದಿದ್ದರೆ ಕಾರ್ತಿಕ್ ಗೌಡ ಉಸಿರು ಚೆಲ್ಲುತ್ತಿರಲಿಲ್ಲ. 

ವಾರಗಟ್ಟಲೆ ಕ್ಯಾಂಪ್ ಹಾಕಿದ್ದ ಆನೆಗಳನ್ನು ತರಾತುರಿಯಲ್ಲಿ ಬಿಡಾರಗಳಿಗೆ ಸ್ಥಳಾಂತರಿಸಿದ್ದರ ಹಿಂದಿನ ಉದ್ದೇಶವೇನು. ಖರ್ಚು ವೆಚ್ಚದ ಆರ್ಥಿಕ ಹೊರೆ ಏನಾದ್ರು ಅಧಿಕಾರಿಗಳಿಗಿತ್ತಾ...ಆನೆ ನಿಗ್ರಹ ಪಡೆಗೆ ಹಾಗು ವನ್ಯಜೀವಿಯಿಂದಾಗುವ ಹಾನಿಗೆ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ.ಅಂತದ್ದರಲ್ಲಿ ಬಿಡಾರದ ಆನೆಗಳನ್ನು ಇನ್ನು ವಾರಗಟ್ಟಲೆ ಕಾರ್ಯಾಚರಣೆ ಸ್ಥಳದಲ್ಲಿರಿಸಿದ್ದರೆ, ಸರ್ಕಾರಕ್ಕೆ ಯಾವ ಹೊರೆಯೂ ಆಗುತ್ತಿರಲಿಲ್ಲ. ಕುಮ್ಕಿ ಆನೆಗಳ ಸಹಾಯದಿಂದಲೇ ಕಾಡಾನೆಯನ್ನು ಹಿಮ್ಮೆಟ್ಟಿಸಬಹುದಿತ್ತು. ಕಾಲ್ನಡಿಗೆಯ ಮೂಲಕ ಕಾಡಾನೆಯನ್ನು ಓಡಿಸಲು ಹೋಗಿ ಜೀವ ಕಳೆದು ಕೊಂಡ ಕಾರ್ತಿಕ್ ಗೌಡ ಸಾವಿಗೆ ನಿಜಕ್ಕೂ ಹೊಣೆಯಾರು..ಆ ಕುಟುಂಬದ ಪರಿಸ್ಥಿತಿ ಅರಣ್ಯ ರೋಧನವಾಗಿದೆ.