ಶಿವಮೊಗ್ಗದಲ್ಲಿ ಆಫಿಸರ್ಸ್ ವರ್ಕಿಂಗ್ ಅಂಡರ್ ಸ್ಕೇರ್ ಎಂದು ಮಧು ಬಂಗಾರಪ್ಪ ಹೇಳಿದ್ದರ ಮರ್ಮವೇನು! ಅಧಿಕಾರಿಗಳಿನ್ನೂ ಬಿಜೆಪಿ ಮುಖಂಡರ ಹಿಡಿತದಲ್ಲೇ ಇದ್ದಾರಾ?  JP STORY

What is the secret of what Madhu Bangarappa said that officers are working under fear in Shimoga!ಶಿವಮೊಗ್ಗದಲ್ಲಿ ಆಫಿಸರ್ಸ್ ವರ್ಕಿಂಗ್ ಅಂಡರ್ ಸ್ಕೇರ್ ಎಂದು ಮಧು ಬಂಗಾರಪ್ಪ ಹೇಳಿದ್ದರ ಮರ್ಮವೇನು!

ಶಿವಮೊಗ್ಗದಲ್ಲಿ ಆಫಿಸರ್ಸ್ ವರ್ಕಿಂಗ್ ಅಂಡರ್ ಸ್ಕೇರ್ ಎಂದು  ಮಧು ಬಂಗಾರಪ್ಪ ಹೇಳಿದ್ದರ ಮರ್ಮವೇನು! ಅಧಿಕಾರಿಗಳಿನ್ನೂ ಬಿಜೆಪಿ ಮುಖಂಡರ ಹಿಡಿತದಲ್ಲೇ ಇದ್ದಾರಾ?  JP STORY

 

KARNATAKA NEWS/ ONLINE / Malenadu today/ Sep 19, 2023 SHIVAMOGGA NEWS

ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. ಅವರು ಹೀಗೇ ಅಸಮಾಧಾನ ಹೊರಹಾಕುವ ಸಂದರ್ಭದಲ್ಲಿ ನಡೆದ ಪ್ರಸಂಗವೊಂದು ಅಧಿಕಾರಿಗಳು ಆತಂಕದಡಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಎಂಬ ಶಂಕೆಯೊಂದು ಮೂಡಿದೆ. ಅಲ್ಲದೆ ಈ ಮಾತನ್ನು ಸ್ವತಃ ಮಧು ಬಂಗಾರಪ್ಪ ರವರೇ ಹೇಳಿದ್ದು, ವಿಚಾರವೂ ಗಂಭೀರವಾಗುವಂತೆ ಮಾಡಿದೆ. 

ಅಂದಿನ ಸಭೆಯಲ್ಲಿ ಮುದ್ದಣ್ಣನ ಕೆರೆ ವಿಚಾರ ಪ್ರಸ್ಥಾಪಿಸಿದ ಮಧು ಬಂಗಾರಪ್ಪ ಕೆರೆಯ ಮಣ್ಣು  ಯಾವ ಲೇ ಔಟ್ ಗೆ ಹೋಯ್ತು ಎಂದು ಕೇಳಿದಾಗ ಅಧಿಕಾರಿಯು ಈಶ್ವರಿ ಬಿಲ್ಡರ್ಸ್ ಗೆ ಕೆರೆ ಮಣ್ಣು ತೆಗೆಯಲು ರಾಯಲ್ಟಿ ಅಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ಹೇಳಿದ್ರು. ಆದ್ರೆ ಇದಕ್ಕೆ ಸಮಾಧಾನವಾಗದ ಸಚಿವರು. ಗುತ್ತಿಗೆ ಆ ಕಂಪನಿ  ಪಡೆದಿದೆ ನಿಜ. ಆ ಕಂಪನಿಯವರು ಯಾರಿಗೆ ಮಣ್ಣು ಪೂರೈಸಿದ್ದಾರೆ. ಆ ಲೇಔಟ್ ಯಾರಿಗೆ ಸೇರಿದ್ದು ಎಂದಾಗ ಆರಂಭದಲ್ಲಿ ಸಂಬಂಧಿಸಿದ ಅಧಿಕಾರಿ ಉತ್ತರಿಸಲು ಹಿಂದೇಟು ಹಾಕಿದ್ರು.

ಸಚಿವರ ಪ್ರಶ್ನೆಗೆ ಅಧಿಕಾರಿಯು  ಸಮರ್ಪಕ ಉತ್ತರ ನೀಡಲಿಲ್ಲ. ಇದು ಮಧು ಬಂಗಾರಪ್ಪರನ್ನು ಕೆರಳಿಸಿತು. ನೀವು ವಿಚಾರಗಳನ್ನು ಹೀಗೆ ಹೈಡ್ ಮಾಡಿದರೆ ಹೇಗೆ. ನಾನು ನಿಮ್ಮಿಂದ ಕೆಲಸ ಹೇಗೆ ನಿರೀಕ್ಷೆ ಮಾಡೋದು ಎಂದು ಹೇಳಿದ್ರು. ಸಚಿವರ ಮಾತಿಗೆ ಪ್ರತಿಯಾಗಿ ಅಧಿಕಾರಿ ಎಲ್ಲವನ್ನು ಬಹಿರಂಗವಾಗಿ ಹೇಳೋದಕ್ಕೆ ಸಾಧ್ಯವಿಲ್ಲ. ಭಯವಾಗುತ್ತೆ ಎಂದು ಹೇಳಿದ್ರು. ಅಧಿಕಾರಿಯ ಮಾತು ಕೇಳಿ ಕ್ಷಣಕಾಲ ಮದು ಬಂಗಾರಪ್ಪ ಅಚ್ಚರಿ ಪಟ್ಟರು. 

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರಿಗಳು ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಾಸ್ತವ ಅರಿಯಲು ಅವರಿಗೆ ಬಹಳ ಸಮಯ ಬೇಕಾಲಿಲ್ಲ. ಆ ವಿಚಾರವನ್ನು ಕಡತದಲ್ಲಿ ದಾಖಲಿಸುವಂತೆ ಸೂಚಿಸಿದ್ರು. ಅಂದಿನ ಈ ಸನ್ನಿವೇಶ ಶಿವಮೊಗ್ಗದಲ್ಲಿ ಅಧಿಕಾರಿಗಳು ಆತಂಕದಡಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನಕ್ಕೆ ರೆಕ್ಕೆಪುಕ್ಕ ಕಟ್ಟಿಕೊಟ್ಟಿದೆ. 

ಈ ಹಿಂದೆ ಬಿಜೆಪಿ ಆಡಳಿತವಿತ್ತು. ಪೂರಕವಾಗಿಯೇ ಅಧಿಕಾರಿ ವರ್ಗ, ಕೇಸರಿ ಪಾಳಯದ ಜನಪ್ರತಿನಿಧಿಗಳ ಸೂಚನೆಯನ್ನು ಪಾಲಿಸುತ್ತಿತ್ತು. ಇದೀಗ ಅಧಿಕಾರ ಬದಲಾಗಿದೆ, ಸರ್ಕಾರ ಕಾಂಗ್ರೆಸ್​ ಕೈನಲ್ಲಿದೆ. ಆದರೆ, ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಶಿವಮೊಗ್ಗದಲ್ಲಿ ಅಧಿಕಾರಿ ವಲಯದಲ್ಲಿ ಬದಲಾವಣೆ ಆಗಲಿಲ್ಲ. ಮೇಲಾಗಿ ಒಂದು ರೀತಿಯಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳು ಬಿಜೆಪಿ ಕಾಂಗ್ರೆಸ್  ಜೆಡಿಎಸ್ ರಾಜಕೀಯ ನಾಯಕರಿಗೆ ಅನಿವಾರ್ಯವಾಗಿ ಮಣೆ ಹಾಕಿ ಕರ್ತವ್ಯ ನಿರ್ವಹಿಸುವಂತಹ ವಾತಾವರಣ ನಿರ್ಮಾಣವಾಗಿದೆ. 

ಬಿಜೆಪಿ ಆಡಳಿತದಲ್ಲಿದ್ದ ಅಧಿಕಾರಿಗಳೇ ಈಗಲೂ ಕರ್ತವ್ಯ ನಿರ್ವಹಿಸುತ್ತಿರುವುದು ಒಂದು ಕಡೆಯಾದರೆ,  ಬಿಜೆಪಿ ರಾಜಕೀಯ ಕಪಿಮುಷ್ಠಿಯಲ್ಲಿ ಕೆಲಸ ಮಾಡುತ್ತಿದ್ದಾರಾ ಎಂಬುದಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಳಿ ಬಂದ ಅಂಡರ್​ ಸ್ಕೇರ್ ವಿಚಾರ ಪೂರಕವಾಗಿ ಚರ್ಚೆಯಾಗುತ್ತಿದೆ. 

ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲ್ಲಿ ಅಂಡರ್​ ಸ್ಕೇರ್​ ಎಂಬ ಪರಿಸ್ಥಿತಿ ತುಸು ಜಾಸ್ತಿಯಿದೆ. ಹಿಂದಿನ ಆಡಳಿತದಲ್ಲಿನ ಜನಪ್ರತಿನಿಧಿಗಳ ಮಾತನ್ನು ಪಾಲಿಸಬೇಕಾದ ಅನಿವಾರ್ಯತೆ ಅಧಿಕಾರಿಗಳ ಮೇಲಿದೆ.  ಇನ್ನೊಂದೆಡೆ  ಕಾಂಗ್ರೆಸ್ ಆಡಳಿತದಲ್ಲಿದ್ರೂ, ಜಿಲ್ಲೆಯನ್ನು ನಿಯಂತ್ರಣಕ್ಕೆ ತೆಗದುಕೊಳ್ಳಲು ಜನಪ್ರತಿನಿಧಿಗಳಿಗೆ ಕಷ್ಟವಾಗುತ್ತಿದೆ. ಇನ್ನೊಂದೆಡೆ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಅಧಿಕಾರಿಗಳ ಪರಿಸ್ಥಿತಿ. ಜಿಲ್ಲೆಯಲ್ಲಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಕಾರಣ ಮತ್ತದೇ ರಾಜಕೀಯ ವ್ಯವಸ್ಥೆ. 



ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನನಗೂ ಕೂಡ ಭಯಪಡಬೇಡಿ ಕಾನೂನಿಗೆ ಅಷ್ಟೆ ಗೌರವಕೊಡಿ ನಿಮಗೆ ರಕ್ಷಣೆ ಕೊಡುವ ಜವಬ್ದಾರಿ ನಮ್ಮದು ಎಂದು ಹೇಳಿರುವುದು ಅಧಿಕಾರಿಗಳಲ್ಲಿ ಕೊಂಚ ಧೈರ್ಯ ಮೂಡುವಂತೆ ಮಾಡಿದೆ.

.




ಇನ್ನಷ್ಟು ಸುದ್ದಿಗಳು