ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

Behind the raids on a spa in Shimoga is the story of a newly married couple who fell in love and got married! ಶಿವಮೊಗ್ಗದ ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

ಶಿವಮೊಗ್ಗದ  ಸ್ಪಾ ಮೇಲಿನ ರೇಡ್​ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ  ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?

KARNATAKA NEWS/ ONLINE / Malenadu today/ Jul 20, 2023 SHIVAMOGGA NEWS

ಶಿವಮೊಗ್ಗದಲ್ಲಿನ ಮಸಾಜ್ ಪಾರ್ಲರ್ ಗಳ ಮೇಲಿನ ಪೊಲೀಸ್ ದಾಳಿಯ ಹಿಂದೊಂದು ಸಂಚಿದೆ. ಅದರ ಹಿಂದೊಬ್ಬ ವ್ಯಕ್ತಿಯಿದ್ಧಾನೆ ಎಂಬುದು ಈ ಮೊದಲೇ ಗೊತ್ತಾಗಿತ್ತು! ಇದೀಗ ಪೊಲೀಸರ ಅರಿವಿಗೂ ಬಂದಿದೆ. ಪರಿಣಾಮವೆಂಬಂತೆ, ನೊಂದ ಯುವತಿಯೊಬ್ಬರು ನೀಡಿದ ದೂರಿನನ್ವಯ ಪತ್ರಕರ್ತನೊಬ್ಬನ ವಿರುದ್ಧ ಎಫ್​ಐಆರ್ ದಾಖಲಾಗಿದೆ.  ಆದರೆ  ಪತ್ರಕರ್ತನೊಬ್ಬನಿಂದ ನೊಂದಿರುವ ಯುವತಿಯರು, ಸ್ಪಾಗಳ ಮಾಲೀಕರು ಸಾಕಷ್ಟು ಮಂದಿ ಇದ್ದಾರೆ ಎಂಬ ಮಾಹಿತಿಯಿದೆ. ಅದಕ್ಕೆ ಸಂಬಂಧಿಸಿದಂತೆ ಪೊಲೀಸರೇ ಕ್ರಮ ಕೈಗೊಳ್ಳಬೇಕಿದೆ. ಆದರೆ, ಶಿವಮೊಗ್ಗದಲ್ಲಿ ಇತ್ತೀಚೆಗೆ ಸ್ಪಾಗಳ ಮೇಲೆ ನಡೆದ ಪೊಲೀಸ್ ರೇಡ್​ಗಳ ಪೈಕಿ ಕೆಲವು ಸಂತ್ರಸ್ತರು ಮಾಡುತ್ತಿರುವ ಆರೋಪಗಳು ನಿಜಕ್ಕೂ ಬೆಚ್ಚಿ ಬೀಳಿಸುತ್ತಿದೆ. 

ಸ್ಪಾ ಮೇಲಿನ ರೇಡ್ ಎಂಬ ಗುಮ್ಮಾ

ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಹೆಸರಿನಲ್ಲಿ ನಡೆದ ರೇಡ್​ನಲ್ಲಿ ಕುಟುಂಬವೊಂದು ತಮಗಾದ ಸಮಸ್ಯೆಯನ್ನು ಎಲ್ಲೆಡೆಯು ಹೇಳಿಕೊಂಡಿದ್ದು, ಎಲ್ಲಿಯು ನ್ಯಾಯ ಸಿಕ್ಕಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದೆ. ಅವರ ಪರವಾಗಿ ಹೋರಾಟ ನಡೆಸ್ತಿರುವ ಸಂಬಂಧಪಟ್ಟ ಸಂಘಟನೆಯ ಸದಸ್ಯರು ,  ಪತ್ರಕರ್ತ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಮಾಡುತ್ತಿದ್ದ ಕೆಲಸಗಳನ್ನು ಬಿಚ್ಚಿಟ್ಟಿದ್ಧಾರೆ.

ಏನದು ಆರೋಪ!?

ಗ್ರಾಹಕರ ಸೋಗಿನಲ್ಲಿ ಪಾರ್ಲರ್ ಗಳಿಗೆ ಬರುತ್ತಿದ್ದ ವಕ್ತಿಯೊಬ್ಬ  ತನಗಿಷ್ಟವಿರುವ ಯುವತಿಯನ್ನು ಮಸಾಜ್ ಸೆಂಟರ್ ಗೆ ಎಸ್ಕಾರ್ಟ್ ಗಳ ಮೂಲಕ ಕರೆಸಿಕೊಂಡು, ಆಕೆಯೊಂದಿಗಿನ ಖಾಸಗಿ ವಿಡಿಯೋ ತೋರಿಸಿ ಮಾಲೀಕರನ್ನ ಬ್ಲ್ಯಾಕ್​ ಮಾಡುತ್ತಿದ್ದ ಎನ್ನುತ್ತಾರೆ ಸಂತ್ರಸ್ತರು. ಇನ್ನೊಬ್ಬರು ಹೇಳುವ ಪ್ರಕಾರ,  ಪಾರ್ಲರ್ ಡಸ್ಟ್ ಬಿನ್ ನಲ್ಲಿ ಕಾಂಡೋಮ್ ಪ್ಯಾಕೇಟ್ ಗಳನ್ನು ಇಟ್ಟು, ಅದನ್ನ ವಿಡಿಯೋ ಮಾಡಿಕೊಂಡು ಟೆಕ್ನಿಕಲ್​ ಎವಿಡೆನ್ಸ್ ಎಂಬಂತೆ ಬಿಂಬಿಸುತ್ತಿದ್ದನಂತೆ. ಆನಂತರ ನಿಮ್ಮ ಪಾರ್ಲರ್ ಗಳಲ್ಲಿ ವೇಶ್ವವಾಟಿಕೆ ನಡೆಯುತ್ತಿದೆ.  ಹಣ ಕೊಟ್ಟರೆ ಒಕೆ ಇಲ್ಲವಾದರೆ..ಪೊಲೀಸರಿಗೆ ವಿಡಿಯೋ ಕೊಟ್ಟು ರೈಡ್ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದನಂತೆ. 

ಒಂದು ಲಕ್ಷ ಎರಡು ಲಕ್ಷ ಎಂಬಂತೆ ಡೀಲ್ ಇಡುತ್ತಿದ್ದ ಆತನ  ಟಾರ್ಚರ್ ಗೆ ನಲುಗಿ ಹೋದ ಮಸಾಜ್ ಪಾರ್ಲರ್ ಗಳ ಮಾಲೀಕರು ಸ್ಪಾ ಸಹವಾಸವೇ ಬೇಡ ಎನ್ನುವಷ್ಟರಮಟ್ಟಿಗೆ ಬೇಸರಗೊಂಡಿದ್ದಾರೆ. ಮರ್ಯಾದೆಗೆ ಅಂಜಿ ಕೆಲವರು ದುಡ್ಡುಕೊಟ್ಟಿದ್ದರು, ಮತ್ತೆ ಕೆಲವರು ವಿರೋಧಿಸಿದ್ದರು, ಇನ್ನು ಕೆಲವರು ಸಿಕ್ಕಸಿಕ್ಕವರ ಸಹಾಯ ಕೇಳಿ, ಆತನಿಂದ ಮುಕ್ತಿ ಪಡೆಯಲು ಮುಂದಾಗಿದ್ಧರು ಎನ್ನುತ್ತಾರೆ ಸಂತ್ರಸ್ತರು. 

ದಿಢೀರ್​ ರೇಡ್​ ನ ಹಿಂದೆ?

ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ವೇಶ್ವವಾಟಿಕೆ ಹೈಟೆಕ್ ಆಗಿ ನಡೆಯುತ್ತಿದ್ದರೂ, ಪೊಲೀಸರಿಂದ ಯಾವ ದಾಳಿಯೂ ನಡೆದಿರಲಿಲ್ಲ., ಆದರೆ ಕಳೆದ ತಿಂಗಳು ಸೀರಿಸ್ ರೈಡ್ ಗಳಾದವು. ದಾಳಿಯ ಹಿಂದೆ  ಈ ಪತ್ರಕರ್ತನ ನಂಟಿರುವುದು ನೊಂದ ಪಾರ್ಲರ್ ಮಾಲೀಕರು ಹೇಳಿದಾಗಲೇ ಬೆಳಕಿಗೆ ಬಂದಿದ್ದು. ಅವರುಗಳೇ ಹೇಳುವಂತೆ,  ಶಿವಮೊಗ್ಗದ ಕುವೆಂಪು ನಗರದ ರಾಯಲ್ ಆರ್ಚ್ ಮಸಾಜ್ ಪಾರ್ಲರ್ ಮೇಲಿನ ದಾಳಿ ಈ ಪತ್ರಕರ್ತನ ಪೂರ್ವಯೋಜಿತ ಸಂಚಾಗಿತ್ತು ಎಂಬ ಆರೋಪವಿದೆ.  ದಾಳಿಗೂ ಒಂದು ವಾರದ ಹಿಂದೆ ಇದೇ ಪಾರ್ಲರ್ ಗೆ ಮಸಾಜ್ ಮಾಡಿಸಿಕೊಳ್ಳಲು ಬಂದಿದ್ದ ವ್ಯಕ್ತಿ, ತನಗೆ ಬೇಕಾದ ಯುವತಿಯನ್ನು ಹೊರಗಿನಿಂದ ಕರೆಸಿಕೊಂಡು, ಆನಂತರ ಪೊಲೀಸರ ಮೂಲಕ ರೇಡ್ ಮಾಡಿಸಿದ್ದ ಎಂಬ ವಿಚಾರವಿದೆ. 

ಬದುಕು ಕಟ್ಟಿಕೊಳ್ಳಬೇಕಾದ ಸಂದರ್ಭದಲ್ಲಿ!

ರಾಯಲ್ ಆರ್ಚ್​​ನಲ್ಲಿದ್ದ ಸ್ಪಾಗೆ ಸಂಬಂಧಿಸಿದಂತೆ, ಅದನ್ನ ನಡೆಸ್ತಿದ್ದವರು ಗೋಪಾಲ್ ದಂಪತಿ.  ಈ ಪಾರ್ಲರ್ ಓಪನ್ ಆಗಿ ತಿಂಗಳಷ್ಟೆ ಆಗಿತ್ತು. ಪ್ರಧಾನ ಮಂತ್ರಿ ರೋಜ್ ಗಾರ್ ಯೋಜನೆಯಲ್ಲಿ ಹತ್ತು ಲಕ್ಷ ರೂಪಾಯಿ ಸಾಲ ಮತ್ತು ಕೈಗಡ 15 ಲಕ್ಷ ರೂಪಾಯಿ ಸಾಲ ಮಾಡಿ ಪಾರ್ಲರ್ ಓಪನ್ ಮಾಡಿದ್ದರು. ಕಟ್ಟಡದ ಬಾಡಿಗೆ ತಿಂಗಳಿಗೆ 45 ಸಾವಿರ ರೂಪಾಯಿ ಹಾಗು ನಾಲ್ಕು ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ರು,  ಆಗಷ್ಟೆ ಪ್ರೀತಿಸಿ ಮದುವೆಯಾದ ದಂಪತಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಕನಸು ಕಂಡು,  ಸಾಲ ಮಾಡಿ ಬ್ಯೂಟಿ ಪಾರ್ಲರ್ ತೆರೆದಿದ್ದರು. ಆದರೆ ನಡೆದಿದ್ದೇ ಬೇರೆ. ಆ ವ್ಯಕ್ತಿಯ ಡೀಲ್​ಗೆ ಬೇಸತ್ತು, ಗೋಪಾಲ್ ನನ್ನ ಬಳಿ ಹಣವಿಲ್ಲ ಎಂದು ಪರಿಪರಿಯಾಗಿ ಹೇಳಿದ್ದಾರೆ.  ಅಂತಿಮವಾಗಿ 30 ಸಾವಿರ ರೂಪಾಯಿಗೆ ಡೀಲ್ ರೆಡ್ಯೂಸ್ ಆದ್ರೂ..ಗೋಪಾಲ್ ಗೆ ಆ ಹಣವನ್ನು ಹೊಂದಿಸಲು ಕೂಡ ಸಾಧ್ಯವಾಗಲಿಲ್ಲ. ಕೊನೆದಾಗಿ ನಾನು ಯಾವ ದಂಧೆಯನ್ನು ಮಾಡುತ್ತಿಲ್ಲ ಪೊಲೀಸರಿಗೆ ಬೇಕಾದ್ರೆ ಫೋನ್ ಮಾಡು ಎಂದು ಹೇಳಿದ್ರು. ಇದೇ ಮಾತು ಗೋಪಾಲ್ ದಂಪತಿಗೆ ಮುಳುವಾಯಿತೇನೋ..ಕಾಕತಾಳೀಯ ಎಂಬಂತೆ ಒಂದು ವಾರದ ನಂತರ ಪಾರ್ಲರ್ ರೈಡ್ ಆಯ್ತು. ದಂಪತಿಗಳ ಬಂಧನವಾಯ್ತು. ಪಾರ್ಲರ್ ನ ಎನ್.ಓ.ಸಿ ರದ್ದಾಯಿತು. 

ತಿಂಗಳಿಗೆ ನಲ್ವತ್ತೈದು ಸಾವಿರ ಬಾಡಿಗೆ ಕಟ್ಟಲಾರದೆ ಇತ್ತ ಪಾರ್ಲರ್ ಕೂಡ ಓಪನ್ ಆಗದೆ, ಅಕ್ಷರ ಸಹ ಬೀದಿಯಲ್ಲಿ ನಿಂತಿದೆ ಸದ್ಯ ಗೋಪಾಲ್ ಕುಟುಂಬ. ಮಾಡಿದ ಸಾಲ ತೀರಿಸುವುದಾದರೂ ಹೇಗೆ..ಎಂದು ಯೋಚಿಸುತ್ತಿದೆ. ಯಾರದರೂ ತಮ್ಮ ಸಹಾಯಕ್ಕೆ ಬರಬಹುದು ಎಂದು ಗೊತ್ತಿರುವವರ ಬಳಿಯೆಲ್ಲಾ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿದ್ಧಾರೆ. ಎಸ್ಪಿ ಮಿಥುನ್ ಕುಮಾರ್ ರವರಿಗೂ ಸದ್ಯ ಈ ದಾಳಿಯ ಹಿಂದಿನ ಸತ್ಯಾಸತ್ಯೆಗಳು ಅರಿವಿಗೆ ಬಂದಿದೆ. ಗೋಪಾಲ್ ದಂಪತಿಗೆ ಪಾರ್ಲರ್ ತೆರೆಯಲು ಅನುಮತಿ ನೀಡಿದರೆ, ಹೇಗೋ ನವ ದಂಪತಿ ಬದುಕು ಕಟ್ಟಿಕೊಳ್ಳುವಂತಾಗುತ್ತದೆ. ಶಿವಮೊಗ್ಗದ ಕೆಲವು ಮಸಾಜ್ ಪಾರ್ಲರ್ ಗಳಲ್ಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಅಂತಹ ಪಾರ್ಲರ್ ಮಾಲೀಕರು ಹೇಗೆ ಬಚಾವ್ ಆಗುತ್ತಿದ್ದಾರೆ ಎಂಬುದು ಬಲ್ಲವನೇ ಬಲ್ಲ.ಸರಿಯಾದ ದಾಳಿ ನಡೆದರೆ, ಶಿವಮೊಗ್ಗದಲ್ಲಿ ನಡೆಯುತ್ತಿರುವ ಕರ್ಮಕಾಂಡಗಳು ಬೆಳಕಿಗೆ ಬರುತ್ತದೆ. 

Whatsapp ನಲ್ಲಿ ಡೆತ್ ನೋಟ್​ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING

ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?