112 ಪೊಲೀಸ್ ಸಿಬ್ಬಂದಿ ಜೊತೆ ನಿತ್ಯ ಫುಲ್​ ಟೈಟ್ ಪಾರ್ಟಿಗಳ ಕಿರಿಕ್! ಹೆಚ್ಚಾಗುತ್ತಿದೆ ಹಾವಳಿ!

The problem of managing the daily drunken brawl is increasing for 112 police personnel,

112 ಪೊಲೀಸ್ ಸಿಬ್ಬಂದಿ ಜೊತೆ  ನಿತ್ಯ  ಫುಲ್​ ಟೈಟ್ ಪಾರ್ಟಿಗಳ ಕಿರಿಕ್!  ಹೆಚ್ಚಾಗುತ್ತಿದೆ ಹಾವಳಿ!

KARNATAKA NEWS/ ONLINE / Malenadu today/ May 21, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಪೊಲೀಸರಿಗೆ ಎಣ್ಣೆ ಪಾರ್ಟಿಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಾತಿನ ಅರಿವಿರದ,  ನಶೆಯಲ್ಲಿರುವ ವ್ಯಕ್ತಿಗಳು ಪ್ರತಿರಾತ್ರಿ ನಡೆಸ್ತಿರುವ ಕಿರಿಕ್ ಪಾರ್ಟಿಗೆ ನಿತ್ಯ ಪೊಲೀಸರು ಪೆಟ್ರೋಲ್ ಖರ್ಚು ಮಾಡಿಕೊಂಡು ಮದ್ಯಪಾನಿಗಳ ಮನೆ ಬಾಗಿಲಿಗೆ ಹೋಗಬೇಕಾದ ಸನ್ನಿವೇಶ ಪ್ರತಿದಿನವೂ ಸೃಷ್ಟಿಯಾಗುತ್ತಿದೆ. 

ಯಾಕ್ರಿ ಏನಕ್ಕೆ ನಾನ್ಯಾರು ಗೊತ್ತಾ ಎನ್ನುವಂತಹ ಘನ ಜನಗಳ ಪೊಲೀಸ್ ಇಲಾಖೆಯ ಕೆಲಸವೂ ಸುಲಭದ್ದಲ್ಲ! ಇಲ್ಲಿ ಎಸ್​ಹೆಚ್​ಒಗಳು ಎಫ್​ಐಆರ್​ಗಳನ್ನು ದರ್ಜು ಮಾಡುವುದೇ ದೊಡ್ಡ ವಿಷಯ. ಅಂತಹದ್ದರಲ್ಲಿ ದಾಖಲಾಗುವ ಎಫ್​ಐಆರ್​ಗಳನ್ನ ಒಂದು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಷ್ಟರಲ್ಲಿ ಪೊಲೀಸ್ ಸಿಬ್ಬಂದಿಯ ಶೂಗಳು ಅದೆಷ್ಟು  ಸವೆದಿರುತ್ತದೆಯೋ ಹೇಳೋಕಾಗಲ್ಲ . 112 ಇಆರ್​ಎಸ್​ಎಸ್​ ಎನ್ನುವ ಸಹಾಯವಾಣಿಯು,ಇಲಾಖೆಯ ಅರ್ಧಕರ್ಧ ಕೆಲಸವನ್ನು ಕಡಿಮೆ ಮಾಡುತ್ತಿದೆ. ಏಕೆಂದರೆ  ಸಿಂಗಲ್​ ವ್ಯಾನ್​ನಲ್ಲಿ ಹೋಗುವ 112 ಸಿಬ್ಬಂದಿ ಆನ್​ ದೀ ಸ್ಪಾಟ್​ನಲ್ಲಿ ಪೊಲೀಸ್ ಭಾಷೆಯಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಿರುತ್ತಾರೆ.  ಹಾಗಾಗಿ ದೂರು ಹೇಳಿಕೊಂಡು ಎಲ್ಲದಕ್ಕೂ ಸ್ಠೇಷನ್​ಗೆ ಬರುವ ಅಗತ್ಯವಿರುವುದಿಲ್ಲ! 


ಪ್ರಯಾಣಿಕರ ಗಮನಕ್ಕೆ! 23 ನೇ ತಾರೀಖು , ತಾಳಗುಪ್ಪ ಟ್ರೈನ್​ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ! ರೈಲ್ವೆ ಇಲಾಖೆ ಪ್ರಕಟಣೆ ತಿಳಿಯಿರಿ

ಆಕ್ಸಿಡೆಂಟ್​ ಆದ ಸಂದರ್ಭದಲ್ಲಿ ಸ್ಥಳಕ್ಕೆ ಬಂದು ಗಾಯಾಳುಗಳನ್ನ ಆಸ್ಪತ್ರೆ ಸೇರಿಸುತ್ತಾರೆ. ಮನೆ ಬದಿಯಲ್ಲಿ ಪುಂಡರ ಕಾಟ ಹೆಚ್ಚಾಗಿದ್ರೆ ಬಂದು ಅವರನ್ನ ರಿಪೇರಿ ಮಾಡ್ತಾರೆ!  ಬೇಲಿ ಸಮಸ್ಯೆ, ಮನೆಯೊಳಗಿನ ವ್ಯಾಜ್ಯ! ಬೀದಿ ಕಾಳಗ! ಸರ್ಕಲ್​ಗಳಲ್ಲಿನ ಕಿರಿಕ್ಕು! ಎಲ್ಲವನ್ನೂ ಸ್ಥಳದಲ್ಲಿಯೇ ಸರಿಮಾಡಲು ಯತ್ನಿಸುತ್ತಾರೆ..!  ಏ ಸುಮ್ಮನಿರಿ ಅಂತಾ ಗದರಿಸಿ ,  ಪ್ರಾಬ್ಲಮ್​ ಸೃಷ್ಟಿಕರ್ತರನ್ನು ಸುಮ್ಮನಾಗಿಸುವ ತಾಕತ್ತು 112 ಗೆ ಇದೆ..ಆದರೆ ಈ ಮದ್ಯಪಾನಿಗಳ ಸಮಸ್ಯೆ ಮಾತ್ರ 112 ಸಿಬ್ಬಂದಿಗೆ ಕಷ್ಟ ಕಷ್ಟ ಎನಿಸುತ್ತಿದೆ. 

₹2000 ರೂಪಾಯಿ ನಿರ್ಬಂಧದ ನಡುವೆ ವೈರಲ್​ ಆಗುತ್ತಿದೆ ಈ ಗುಲಾಬಿ ನೋಟು! ಕಾರಣವೇನು ಗೊತ್ತಾ?

ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರತಿನಿತ್ಯ ಕನಿಷ್ಟ 10 ಕೇಸ್​ಗಳು ಎಣ್ಣೆಪಾರ್ಟಿಗಳದ್ದೇ 112 ಗೆ ಎದುರಾಗಿರುತ್ತದೆ. ಸಾರ್ ಅಣ್ಣಾ ಕುಡ್ದು ಬಂದು ಹೊಡೆಯೋಕೆ ಬರ್ತಿದ್ಧಾನೆ ಬಾಗ್ಲಕ್ಕೊಂಡು ಒಳಗೀದ್ದೀವಿ ಬನ್ನಿ ಸಾರ್ ಅಂತಾ ಯಾವುದೋ ಹೆಣ್ಣುಮಗಳು ಕಾಲ್ ಮಾಡುತ್ತಾರೆ! ಇನ್ನೆಲ್ಲೋ ಮಗ ಕುಡಿದು ಬಂದ ಅಂತಾ ಅಪ್ಪ! ಅಪ್ಪಾ ಕುಡಿದು ಬಂದು ಗಲಾಟೆ ಮಾಡ್ತಿದ್ಧಾನೆ ಅಂತಾ ಮಗ ಕರೆ ಮಾಡಿರುತ್ತಾನೆ.. ಇನ್ನೂ ಗಂಡ ಕುಡಿದು ಹೊಡೆಯುವ ಪ್ರಕರಣಗಳಂತೂ ಲೆಕ್ಕಕ್ಕೆ ಸಿಗೋದಿಲ್ಲ. 

ನಿನ್ನೆ ಹರಿಹರದಲ್ಲಿ ಒಂದು ರೈಲಿನ ಬೋಗಿ ಮೇಲೆ ಹತ್ತಿ ಇನ್ನೊಂದು ಬೋಗಿ! ಏನಿದು ಘಟನೆ

ಉದಾಹರಣೆಗೆ ಹೇಳುವುದಾದರೆ, ದಿನಾಂಕ:20.05.2023 ರಂದು ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯ ಒಂದು ಊರಲ್ಲಿ,  ಪಕ್ಕದ ಮನೆಯವರು ಎಣ್ಣೆ ಹೊಡೆದುಕೊಂಡು, ಕೆಟ್ಟಕೊಳಕ ಬೈತಿದ್ದಾರೆ ಎಂಬ ಕರೆಯೊಂದು 112 ಗೆ ಬಂದಿತ್ತು ಪೊಲೀಸರು ಸ್ಥಳಕ್ಕೆ ಸೈರನ್ ಹಾಕ್ಕೊಂಡು ಹೋಗಿ, ಹಾಗೂ ಹೀಗೂ ಮಾಡಿ ಬುದ್ದಿ ಹೇಳಿ ಬಂದಿದ್ದಾರೆ. 

ಇದೇ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯಲ್ಲಿ ಬಂದ ಇನ್ನೊಂದು ಕರೆಯಲ್ಲಿ ಸಾರ್, ಗಂಡ ಕುಡಿದು ಬಂದು ಬಾರಿಸ್ತಿದ್ಧಾನೆ ಎಂಬ ದೂರೊಂದು ಬಂದಿತ್ತು! ಅದನ್ನು ಅಟೆಂಡ್ ಮಾಡಿದ ಪೊಲೀಸರು, ಅವರ ಮನೆಗೆ ಹೋಗಿ ಕುಡುಕ ಗಂಡನ ನಿಶೆ ಇಳಿಸಿ ಬಂದಿದ್ದರು.

ಇವೆರಡು ಸ್ಟೇಷನ್​ವೊಂದರ ಎಕ್ಸಾಂಪಲ್​ ಅಷ್ಟೆ ವಿನೋಬನಗರದಲ್ಲಿ ಕುಡುಕನ ಗಲಾಟೆ ಎನ್ನುವುದರಿಂದ ಹಿಡಿದು ತೀರ್ಥಹಳ್ಳಿಯ ಯಾವುದೋ ಮೂಲೆಯಲ್ಲಿ ಅಪ್ಪ-ಗಂಡನ ಎಣ್ಣೇ ಅವಾಂತರದವರೆಗೂ 112 ಸಿಬ್ಬಂದಿಗೆ ನಶೆಯ ಗಿರಾಕಿಗಳ ಕಾಟ ಅತಿಯಾಗಿದೆ. ಖಾಕಿ ಡ್ರೆಸ್ ನೋಡಿ, ಆಸಾಮಿಗಳು ಸಮಾಧಾನ ಗೊಂಡರೆ ಹೆಚ್ಚು ಅಡ್ಡಿಯಾಗಲ್ಲ. 

ತವರು ಮನೆ ಆಸ್ತಿಗಾಗಿ ಕೊಲೆಯಾಗುತ್ತಿವೆ ಕರುಳ ಸಂಬಂಧಗಳು! ಅಕ್ಕನನ್ನೆ ಕೊಂದ ತಮ್ಮ! ಏನಿದು ಪ್ರಕರಣ!

ಆದರೆ ಕೆಲವರು ಅಮಲಲ್ಲಿ ತಮ್ಮನ್ನೇ  ದೇಶದ ಮುಖ್ಯಸ್ಥರು ಅಂದ್ಕೊಂಡು ವಾಲಾಡುತ್ತಿರುತ್ತಾರೆ ಅಂತವರನ್ನ ಸಮಾಧಾನ ಮಾಡುವುದೇ ಪೊಲೀಸರಿಗೆ ದೊಡ್ಡ ಕಷ್ಟ! ಒಂದು  ಪೆಟ್ಟು ಕೊಟ್ಟು ನೋಡೋಣ ಎನ್ನುವುದಕ್ಕೂ ಸಹ,  ಆತ ಹೊಡೆದಿರುವ ಎಣ್ಣೆ ಅವಕಾಶ ಮಾಡಿಕೊಡುವುದಿಲ್ಲ! ಸ್ಟೇಷನ್​ಗೆ ಕರೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುವುದಿಲ್ಲ! 

ಹಾಗಾಗಿ ಹು ಕಣ್​.. ಹು ಕಣ್…ನೀನೇ ಇಂದ್ರ ಚಂದ್ರ ಅನ್ನತ್ತಾ ಮದ್ಯಪಾನಿಗಳನ್ನ ಸಮಾಧಾನ ಮಾಡುತ್ತಾರೆ! ತೀರಾ ಕಿರಿಕ್ ಮಾಡಿದ್ರೆ ಶಿಸ್ತು ಕ್ರಮ ಅನಿವಾರ್ಯವೇ ಆದರೆ ಎಲ್ಲದಕ್ಕೂ ಲಾಠಿ ತೆಗೆದುಕೊಳ್ಳಲಾಗಲ್ಲ. 112 ಸಿಬ್ಬಂದಿಯ ಅನುಭವವೇ ಇಲ್ಲಿ ಜಾಸ್ತಿ ವರ್ಕೌಟ್ ಆಗುತ್ತದೆ!. 

ಬೆಳಗ್ಗೆ ಬೆಳಗ್ಗೆನೇ ಕೆಲವೊಮ್ಮೆ ಇಂತಹ ನಶೆಯ ಗಿರಾಕಿಗಳು 112 ಗೆ ಎದುರಾಗಿಬಿಟ್ಟಿರ್ತಾರೆ.. ಬುಹುತೇಕ ಸಿಬ್ಬಂದಿ ಡ್ಯೂಟಿ ಟೈಮು, ಮಾತಿನ ಶ್ರಮ ವ್ಯರ್ಥವಾಗಿರುತ್ತದೆ. ಇನ್ನೂ ರಾತ್ರಿಗಳಲ್ಲಿ ಇಂತಹ ಕೇಸ್​ಗಳೇ ಸಿಕ್ಕಿದರೇ, ಉಳಿದವರ ಕಂಪ್ಲೆಂಟ್​ಗಳನ್ನು ಸಹ ಅಟೆಂಡ್ ಮಾಡುವುದು ತಡವಾಗಿಬಿಡುತ್ತದೆ. ಹೀಗಿದ್ದರೂ ಎಲ್ಲವನ್ನೂ ನಿಭಾಯಿಸ್ತಿರುವ 112 ಸಿಬ್ಬಂದಿಗೆ ನಿಜಕ್ಕೂ ಥ್ಯಾಂಕ್ಸ್​ ಹೇಳಲೇಬೇಕು.

ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡ್ತಿದ್ದ ಕಾಡಾನೆ ಸೆರೆ

ಒಟ್ಟಾರೆ, ಪ್ರತಿದಿನ 112 ಸಿಬ್ಬಂದಿ ತಮ್ಮದೆ ಆದ ರೀತಿಯಲ್ಲಿ ಮದ್ಯಪಾನಿಗಳನ್ನ ಹಾಗೂ ಅವರ ಕಿರಿಕ್​ ಪಾರ್ಟಿಯನ್ನ ಎದುರುಗೊಳ್ಳುತ್ತಿದ್ದಾರೆ.. ಅನುಭವವನ್ನೆಲ್ಲಾ ಹಾಕಿ, ನಶೆ ಗಿರಾಕಿಗಳನ್ನ ತಣ್ಣಗೆ ಮಾಡುತ್ತಿದ್ದಾರೆ. ಆದರೆ ನಿತ್ಯ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ 112 ಸಿಬ್ಬಂದಿಗೂ ಅವಶ್ಯಕತೆಗೆ ತಕ್ಕಂತೆ ವಿಶ್ರಾಂತಿ ಒದಗಿಸಬೇಕಿದೆ.