ನಿನ್ನೆ ಹರಿಹರದಲ್ಲಿ ಒಂದು ರೈಲಿನ ಬೋಗಿ ಮೇಲೆ ಹತ್ತಿ ಇನ್ನೊಂದು ಬೋಗಿ! ಏನಿದು ಘಟನೆ

Yesterday at Harihar, one of the coaches of the train climbed on top of the other. What is the incident?

ನಿನ್ನೆ ಹರಿಹರದಲ್ಲಿ ಒಂದು ರೈಲಿನ ಬೋಗಿ ಮೇಲೆ ಹತ್ತಿ ಇನ್ನೊಂದು ಬೋಗಿ! ಏನಿದು ಘಟನೆ

KARNATAKA NEWS/ ONLINE / Malenadu today/ May 21, 2023 SHIVAMOGGA NEWS

ನಿನ್ನೆ ದಾವಣಗೆರೆಯ ಹರಿಹರದಲ್ಲಿ ರೈಲು ಅಪಘಾತ(Train accident)ಸಂಭವಿಸಿತ್ತಾ? ಹೀಗೊಂದು ಅನುಮಾನ ಇವತ್ತು ಹಲವರಲ್ಲಿ ಕಾಡತೊಡಗಿತ್ತು. ಅದಕ್ಕೆ ಕಾರಣ ಟ್ರೈನ್ಸ್​ ಆಕ್ಸಿಡೆಂಟ್​ ನ ಫೋಟೋಗಳು! 

ಹಳೆ ಸಿಟ್ಟಿಗೆ 6 ವರ್ಷದ ಬಾಲಕಿ ಫೋಟೋ ಮೇಲೆ ಅಶ್ಲೀಲ ವಿಕೃತಿ! ಮಹಿಳೆಗೆ ಕೋರ್ಟ್ ಶಿಕ್ಷೆ! ಸೋಶಿಯಲ್​ ಮೀಡಿಯಾದಲ್ಲಿ ಹೀಗೆಲ್ಲಾ ಮಾಡಬೇಡಿ ಹುಷಾರ್!

ಇವತ್ತು ಹಲವೆಡೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿ ಟ್ರೈನ್​ನ ಬೋಗಿಗಳು ಒಂದರ ಮೇಲೊಂದು ಬಿದ್ದಿದ್ದರ ಫೋಟೋವನ್ನ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಅಸಲಿಗೆ ಆಕ್ಸಿಡೆಂಟ್ ಅಲ್ಲ, ನಕಲಿ ಅಪಘಾತ! ಆದರೆ ರಿಯಲ್​ ಪಾಠ ಕಲಿಸುವ ಪ್ರಯತ್ನ

ಏನು ನಡೆದಿದ್ದು ? 

ರೈಲು ಆಕ್ಸಿಡೆಂಟ್ ಆದ ಸಂದರ್ಭದಲ್ಲಿ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕು ಎನ್ನುವದರ ಅಣಕು ಪ್ರದರ್ಶನ ಇದಾಗಿತ್ತು.  ಹರಿಹರ ರೈಲ್ವೆ ನಿಲ್ದಾಣದಲ್ಲಿ  ನಿನ್ನೆ ವಿವಿಧ ಇಲಾಖೆಗಳು ಇಂತಹದ್ದೊಂದು ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.  

ಮೈಸೂರು ವಿಭಾಗ ರೈಲ್ವೆ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಹಯೋಗದೊಂದಿಗೆ ಹರಿಹರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಆಪತ್ಕಾಲದಲ್ಲಿ ಸಕ್ರಿಯಗೊಳಿಸಲು   ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅರಸಿಕೆರೆಯಿಂದ ಹಾವೇರಿಗೆ ಹೋಗುತ್ತಿದ್ದ ವಿಶೇಷ ರೈಲಿನ ಎರಡು ಸಾಮಾನ್ಯ ದರ್ಜೆಯ ಪ್ಯಾಸೆಂಜರ್ ಬೋಗಿಗಳು ಹರಿಹರ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಮಗುಚಿಬಿದ್ದಿರುವ ಸನ್ನಿವೇಶವನ್ನು ಕ್ರಿಯೇಟ್ ಮಾಡಲಾಗಿತ್ತು. 

ಈ ಸನ್ನಿವೇಶದಲ್ಲಿ  ಘಟನೆಯ ಸಂದೇಶ ಅಧಿಕಾರಿಗಳಿಗೆ ತಲುಪುವುದರೊಂದಿಗೆ ಆರಂಭವಾಗಿ, ಕಾರ್ಯಾಚರಣೆ ಹೇಗೆ ಸಾಗುತ್ತದೆ ಎಂಬುದರ ವಿವರವನ್ನು ಪ್ರದರ್ಶನದಲ್ಲಿ ತೋರಿಸಲಾಯ್ತು.  


ಪ್ರಮುಖ ಸುದ್ದಿ- ಪ್ರಯಾಣಿಕರ ಗಮನಕ್ಕೆ! 23 ನೇ ತಾರೀಖು , ತಾಳಗುಪ್ಪ ಟ್ರೈನ್​ ಸೇರಿದಂತೆ ಪ್ರಮುಖ ರೈಲುಗಳ ಸಂಚಾರದಲ್ಲಿ ಬದಲಾವಣೆ! ರೈಲ್ವೆ ಇಲಾಖೆ ಪ್ರಕಟಣೆ ತಿಳಿಯಿರಿ

ಪ್ರಯಾಣಿಕರ ಗಮನಕ್ಕೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯೊಂದನ್ನ ಹೊರಡಿಸಿದೆ. ಈ ಪ್ರಕಟಣೆಯಲ್ಲಿ  ತಾಳಗುಪ್ಪ- ಬೆಂಗಳೂರು(ನಂ.20652)  ಎಕ್ಸ್‌ಪ್ರೆಸ್ ರೈಲು ತುಮಕೂರುವರೆಗೆ ಮಾತ್ರ ಸಂಚರಿಸಲಿದೆ ಎಂದು ತಿಳಿಸಲಾಗಿದೆ. 

ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡ್ತಿದ್ದ ಕಾಡಾನೆ ಸೆರೆ

23ರಂದು ರೈಲು ಸಂಚಾರದಲ್ಲಿ ವ್ಯತ್ಯಯ

ಶಿವಮೊಗ್ಗ ತುಮಕೂರಿನ ಕ್ಯಾತಸಂದ್ರ ಬಳಿ ಮೇಲು ಸೇತುವೆ ನಿರ್ಮಾಣ ಮಾಡಲಾಗ್ತಿದೆ. ಅದರ ಪ್ರಮುಖ ಕಾಮಗಾರಿಯ ಕಾರಣಕ್ಕಾಗಿ ಮೇ 23ರಂದು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಕೆರೆಗೆ ಹಾರಿದ ನಾಲ್ಕು ಅವಳಿ ಜವಳಿ ಮಕ್ಕಳ ತಾಯಿ! ಘಟನೆಗೆ ಕಾರಣವಾಗಿದ್ದೇನು?

ಯಾವ್ಯಾವ ರೈಲುಗಳು ?.

ಯಶವಂತಪುರ-ಚಿಕ್ಕಮಗಳೂರು ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ. ತಾಳಗುಪ್ಪ- ಬೆಂಗಳೂರು(ನಂ.20652) (20652/Talguppa - KSR Bengaluru InterCity Express - Railway Enquiry) ಎಕ್ಸ್‌ಪ್ರೆಸ್ ರೈಲು ತುಮಕೂರುವರೆಗೆ ಮಾತ್ರ ಸಂಚರಿಸಲಿದೆ. ಬೆಂಗಳೂರು- ಧಾರವಾಡ ಸಿದ್ಧಗಂಗ ಎಕ್ಸ್‌ಪ್ರೆಸ್ ಬೆಂಗಳೂರು ಬದಲಿಗೆ ತುಮಕೂರಿನಿಂದ ಹೊರಡಲಿದೆ. ಧಾರವಾಡದಿಂದ ಬೆಂಗಳೂರಿಗೆ ತೆರಳುವ ಬದಲು ಅರಸೀಕೆರೆಯಲ್ಲಿ ನಿಲ್ಲಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ತುಮಕೂರು ಮತ್ತು ಚಾಮರಾಜನಗರದ ನಡುವೆ ಸಂಚರಿಸುವ 07346 ಕ್ರಮ ಸಂಖ್ಯೆಯ ರೈಲು 45 ನಿಮಿಷ ತಡವಾಗಿ ಸಂಚರಿಸಲಿದೆ

17309 ಸಂಖ್ಯೆಯ ಯಶವಂತಪುರ-ವಾಸ್ಕೋಡಿಗಾಮ ರೈಲು ಸಹ 60 ನಿಮಿಷ ತಡವಾಗಿ ಸಂಚರಿಸಲಿದೆ ಎಂದು ತಿಳಿಸಲಾಗಿದೆ. 


ಸಾರ್ವಜನಿಕರಿಗೆ ಮಾಹಿತಿ! ನಾಳೆ ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!