ಹಳೆ ಸಿಟ್ಟಿಗೆ 6 ವರ್ಷದ ಬಾಲಕಿ ಫೋಟೋ ಮೇಲೆ ಅಶ್ಲೀಲ ವಿಕೃತಿ! ಮಹಿಳೆಗೆ ಕೋರ್ಟ್ ಶಿಕ್ಷೆ! ಸೋಶಿಯಲ್​ ಮೀಡಿಯಾದಲ್ಲಿ ಹೀಗೆಲ್ಲಾ ಮಾಡಬೇಡಿ ಹುಷಾರ್!

Court sentences woman for posting obscene deformation on 6-year-old girl's photo

ಹಳೆ ಸಿಟ್ಟಿಗೆ 6 ವರ್ಷದ ಬಾಲಕಿ ಫೋಟೋ ಮೇಲೆ ಅಶ್ಲೀಲ ವಿಕೃತಿ! ಮಹಿಳೆಗೆ ಕೋರ್ಟ್ ಶಿಕ್ಷೆ!  ಸೋಶಿಯಲ್​ ಮೀಡಿಯಾದಲ್ಲಿ ಹೀಗೆಲ್ಲಾ ಮಾಡಬೇಡಿ ಹುಷಾರ್!

KARNATAKA NEWS/ ONLINE / Malenadu today/ May 20, 2023 SHIVAMOGGA NEWS

ಭದ್ರಾವತಿ /  ಹಳೇ ದ್ವೇಷಕ್ಕೆ 6 ವರ್ಷ ಬಾಲಕಿ ಹಾಗೂ ಅವರ ಕುಟುಂಬಸ್ಥರ ಫೋಟೋಗಳ ಮೇಲೆ ಅಶ್ಲೀಲವಾದ ಬರವಣಿಗೆ ಬರೆದು ಸೋಶೀಯಲ್ ಮೀಡಿಯ (social media) ದಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ Addl District and Sessions Judge, FTSC–I (POCSO) Shivamogga  ಮಹತ್ವದ ತೀರ್ಪು ನೀಡಿದೆ. 

2022 ನೇ ಸಾಲಿನಲ್ಲಿ ಈ ಘಟನೆ ನಡೆದಿತ್ತು.  ಭದ್ರಾವತಿ  ತಾಲ್ಲೂಕಿನ  30 ವರ್ಷದ ಮಹಿಳೆಯೊಬ್ಬಳು ಹಳೇ ದ್ವೇಷದ ಹಿನ್ನೆಲೆಯಲ್ಲಿ, 06 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಅವರ ಮನೆಯ ಸದಸ್ಯರ ಫೋಟೋಗಳ ಮೇಲೆ ಅಶ್ಲೀಲ ಪದಗಳನ್ನು ಬರೆದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ  ನೊಂದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ  ಭದ್ರಾವತಿ ಪೊಲೀಸ್ ಸ್ಟೇಷನ್​ ಒಂದರಲ್ಲಿ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಚಾರ್ಜ್​ ಶೀಟ್ ಸಲ್ಲಿಸಿದ್ರು.  

ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ರವರು ಸರ್ಕಾರದ ಪರವಾಗಿ ಪ್ರಕರಣದ ವಾದ ಮಂಡಿಸಿದ್ದು,  ಘನ Addl District and Sessions Judge, FTSC–I (POCSO) Shivamogga ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತಳ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರು ದಿನಾಂಕ:19-05-2023 ರಂದು ಆರೋಪಿತಳಿಗೆ 10 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು 60,000 /- ರೂ ದಂಡ ವಿಧಿಸಿ  ಆದೇಶ ನೀಡಿದೆ. 

8 ಗ್ರಾಂ ಚಿನ್ನ ಕದ್ದಿದ್ದಕ್ಕೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ? ಭದ್ರಾವತಿ ಕೇಸ್ ಫೈಲ್​!

ಭದ್ರಾವತಿ / ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಹಂಚು ತೆಗೆದು ಬಂಗಾರದ ಒಡವೆ, ನಗದು ಹಣವನ್ನು ಕಳ್ಳತನ ಮಾಡಿದ ಆರೋಪಿಗೆ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಲಯ ಸಾದಾ ಸಜೆ ಮತ್ತು ದಂಡ, ದಂಡ ತುಂಬಲು ತಪ್ಪಿದಲ್ಲಿ ಹೆಚ್ಚುವರಿ ಸಾದಾ ಸಜೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದೆ. 

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

ಏನಿದು ಪ್ರಕರಣ

ತಾಲೂಕಿನ ನಾಗತಿಬೆಳಗಲು ನಿವಾಸಿ ಮಹೇಶ್ ನಾಯ್ಕ ಯಾನೆ ಮಹೇಶ ಶಿಕ್ಷೆಗೊಳಗಾದ ಆರೋಪಿ

ಮೇ 1ರ 2019 ರಂದು ರಾತ್ರಿ ನಾಗತಿಬೆಳಗಲು ನಿವಾಸಿ ಗಣೇಶನಾಯ್ಕ ತಮ್ಮ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋಗಿದ್ದರು. 

ಬಳಿಕ ಮೇ 3 ರಂದು ಮನೆಗೆ ಬಂದು ನೋಡಿದಾಗ  ಹಂಚು ತೆಗೆದು ಕಳ್ಳರು ನುಗ್ಗಿರುವುದು ಗೊತ್ತಾಗಿದೆ.  ಬೀರುವಿನಲ್ಲಿ 8 ಗ್ರಾಂ ಬಂಗಾರದ ಕಿವಿ ಓಲೆ, 8 ಸಾವಿರ ನಗದು ಹಣ ಕಳ್ಳತನವಾಗಿತ್ತು. ಈ ಹಿನ್ನೆಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ  (bhadravati rural poilice station)ದೂರು ನೀಡಿದ್ದರು.

ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ2 ವರ್ಷ ಶಿಕ್ಷೆ!

ದೂರು ಸ್ವೀಕರಿಸಿ ತನಿಖೆ ಕೈಗೊಂಡ ಪೊಲೀಸರು ಮಹೇಶ್‌ನಾಯ್ಕ ಯಾನೆ ಮಹೇಶ ಎಂಬಾತನನ್ನ ಬಂದಿಸಿ ಕೇಸ್ ಮಾಡಿ, ಚಾರ್ಜ್ ಶೀಟ್ ಹಾಕಿದ್ದರು. ಇದೀಗ  ಆರೋಪ ಸಾಭೀತಾದ ಮೇರೆಗೆ ಭಾರತೀಯ ದಂಡ ಸಂಹಿತೆ ಕಲಂ 457 ರ ಅಪರಾಧಕ್ಕೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡ, ದಂಡ ತುಂಬಲು ತಪ್ಪಿದಲ್ಲಿ ತಿಂಗಳ ಸಾದಾ ಸಜೆ, ಹಾಗೂ ಕಲಂ 380 ರ ಅಪರಾಧಕ್ಕೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡ, ದಂಡ ತುಂಬಲು ತಪ್ಪಿದಲ್ಲಿ 2 ತಿಂಗಳು ಸಜೆ ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ತಿಪ್ಪೇಶರಾವ್ ವಾದ ಮಂಡಿಸಿದ್ದರು.