ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!

Money.. Money.. Money..! Candidates asking for money back!

ದುಡ್ಡು..ದುಡ್ಡು..ದುಡ್ಡು..! ಕೊಟ್ಟ ಹಣ ವಾಪಸ್ ಕೇಳುತ್ತಿರುವ ಪರಾಚಿತ ಅಭ್ಯರ್ಥಿಗಳು!

KARNATAKA NEWS/ ONLINE / Malenadu today/ May 20, 2023 SHIVAMOGGA NEWS

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದರ ನಡುವೆ ಚುನಾವಣೆಯಲ್ಲಿ ಮತದಾರರಿಗೆ ಕೋಟ್ಯಾಂತರ ರೂಪಾಯಿಯನ್ನು ಹಂಚಲಾಗಿದೆ ಎಂಬುದು ಅಂತರಂಗ ಸತ್ಯ. ಈ ಸಲ ವಿಶೇಷ ಅಂದರೆ, ಮತದಾರನಿಗೆ ಕೊಟ್ಟ ದುಡ್ಡನ್ನು ಅಭ್ಯರ್ಥಿಗಳು ವಾಪಸ್ ಕೇಳುತ್ತಿದ್ದಾರೆ. 

ಯಾರೇನು ಪುಗಸಟ್ಟೆ ಕೊಡಲ್ಲ , ಬಂದಷ್ಟು ಬರಲಿ ಎಂಬಂತಹ ಧೋರಣೆಗಳು ಈ ಸಲು ತುಸು ಜಾಸ್ತಿಯೇ ಇದ್ದವು! ಆಯ್ದ ಸ್ಲಂಗಳಲ್ಲಷ್ಟೆ ಅಲ್ಲದೆ, ಘನಂದಾರಿ ವ್ಯಕ್ತಿಗಳು ಸಹ ರಾತ್ರಿ ಖರ್ಚಿಗಾಗುತ್ತೆ ಎಂದು ಹಣ ಪಡೆದುಕೊಂಡಿದ್ದರು. ಇದೀಗ ಚುನಾವಣೆ ಮುಗಿದಿದೆ. ಸೋತ ಅಭ್ಯರ್ಥಿಗಳು ಕೊಟ್ಟ ಹಣ ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ. 

ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ

ಇದಕ್ಕೆ ಸಾಕ್ಷಿ ಎಂಬಂಥೆ,  ಚುನಾವಣೆಯಲ್ಲಿ ಕೊಟ್ಟಿದ್ದ ಹಣವನ್ನು ಜನರಿಗೆ ಹಂಚದಿದ್ದರೆ ವಾಪಸ್‌ ತಂದುಕೊಡಬೇಕು ಎಂದು ಶಿವಮೊಗ್ಗ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಮನವಿ ಮಾಡಿದ್ದಾರಂತೆ. 

ಈ ಬಗ್ಗೆ ಮಾಧ್ಯಮವೊಂದರಲ್ಲಿ ವರದಿ ಪ್ರಕಟವಾಗಿದ್ದು,  ಕೆ.ಆರ್.ಪೇಟೆಯಲ್ಲಿ ಚುನಾವಣೆಯಲ್ಲಿ ಯಾರು ಯಾರು ಹಣ ಹಂಚಿಲ್ಲವೋ ಅವರೆಲ್ಲಾ ವಾಪಸ್ ತಂದು ಕೊಡಿ ಎಂದು ಕೆಳಿದ್ದಾರೆ ಎನ್ನಲಾಗಿದೆ. 

ಇನ್ನೊಂದು ಕಡೆ, ಅಬ್ಬರದ ಸದ್ದು ಮಾಡಿದ್ದ ಕೆಜಿಎಫ್ ಬಾಬು ಸಹ ತಾವು ಕೊಟ್ಟ ಚಕ್​ಗಳನ್ನು ವಾಪಸ್ ಕೊಡಿ ಎಂದು ಮಸೀದಿಗಳಿಗೆ ಜಾಹಿರಾತು ಮೂಲಕ ತಿಳಿಸಿದ್ದಾರಂತೆ. ಚುನಾವಣೆ ಹಿನ್ನೆಲೆಯಲ್ಲಿ ಅವು 17 ಕೋಟಿಗೂ ಅಧಿಕ ಮೌಲ್ಯದ ಹಣವನ್ನು ವಿವಿಧ ಮಸೀದಿಗಳಿಗೆ ನೀಡಿದ್ದರು ಎನ್ನಲಾಗಿದೆ. ಇದೀಗ ಚುನಾವಣೆಯಲ್ಲಿ ಸೋತಿದ್ದರಿಂದ ಅವರು ನನ್ನ ಹಣ ಸ್ವೀಕಾರ್ಹವಲ್ಲದ ಹಣವಾಗಿದ್ದು, ಚೆಕ್​ಗಳನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ.  

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!