ಮಧು ಬಂಗಾರಪ್ಪ & ಸಂಗಮೇಶ್​ ನಡುವೆ ಹೆಚ್ಚಿದ ಪೈಪೋಟಿ! ಮೂರನೇ ಆಯ್ಕೆಗೂ ನಡೆಯುತ್ತಿದೆಯಾ ಕಸರತ್ತು! ಶಿವ-ರಾಮಯ್ಯ ಸರ್ಕಾರದಲ್ಲಿ ಶಿವಮೊಗ್ಗಕ್ಕೆ ಯಾರು ಮಿನಿಸ್ಟರ್​

Fight between Madhu Bangarappa & Sangamesh and Belur Gopala Krishna for ministerial berth, who is the minister for Shivamogga in Shiva-Ramayya government

ಮಧು ಬಂಗಾರಪ್ಪ & ಸಂಗಮೇಶ್​ ನಡುವೆ ಹೆಚ್ಚಿದ ಪೈಪೋಟಿ! ಮೂರನೇ ಆಯ್ಕೆಗೂ ನಡೆಯುತ್ತಿದೆಯಾ ಕಸರತ್ತು! ಶಿವ-ರಾಮಯ್ಯ ಸರ್ಕಾರದಲ್ಲಿ ಶಿವಮೊಗ್ಗಕ್ಕೆ ಯಾರು ಮಿನಿಸ್ಟರ್​

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಶಿವಮೊಗ್ಗದಿಂದ ಮಿನಿಸ್ಟರ್ ಯಾರು? ಮಧು ಬಂಗಾರಪ್ಪರವರಾ? ಬಿಕೆ ಸಂಗಮೇಶ್ವರ್​ರವರಾ? ಸದ್ಯ ಇವರಿಬ್ಬರ ನಡುವೆ ತೀವ್ರ ಪೈಪೋಟಿ ಎದ್ದಿದೆ. ಸಿಎಂ , ಡಿಸಿಎಂ ಪ್ರಮಾಣದ ವೇಳೆಯಲ್ಲಿಯೇ ತಮಗೂ ಅವಕಾಶ ಸಿಗುತ್ತದೆ ಎಂದುಕೊಂಡಿದ್ದ ಮಧುಬಂಗಾರಪ್ಪನವರ ನಿರೀಕ್ಷೆ ಸುಳ್ಳಾಗಿದೆ. ಹೀಗಾಗಿ ಅವರು ಸಮಾರಂಭಕ್ಕೂ ಗೈರಾಗಿದ್ದರು. ಅಲ್ಲದೆ ನಟ ಶಿವಣ್ಣರ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು

ಮಧು ಬಂಗಾರಪ್ಪರಿಗೆ ಸಂಗಮೇಶ್ ಪೈಪೋಟಿ

ಈ ಮಧ್ಯೆ ಮಧು ಬಂಗಾರಪ್ಪರಿಗೆ ಬಿಕೆ ಸಂಗಮೇಶ್ ನೇರಾನೇರ ಸ್ಪರ್ಧೆಯನ್ನು ಒಡ್ಡುತ್ತಿದ್ದಾರೆ. ಹಿರಿತನದಲ್ಲಿ ಕಾಗೋಡು ತಿಮ್ಮಪ್ಪರವರು ಬಿಟ್ಟರೇ ಶಿವಮೊಗ್ಗದಲ್ಲಿ ನಾನೇ ಸೀನಿಯರ್ ಎನ್ನುತ್ತಿರುವ ಬಿಕೆ ಸಂಗಮೇಶ್​, ಕಾಂಗ್ರೆಸ್​ನಲ್ಲಿ ಪದೇ ಪದೇ ಮಿನಿಸ್ಟರ್​ ಗಿರಿ ಅನುಭವಿಸಿದ ನಾಯಕರಿಗೂ ಸಹ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಸಲಹೆ ನೀಡಿದ್ಧಾರೆ. 

ಆರ್​ಎಂಎಂ ಮತ್ತು ಬೇಳೂರು ಗೋಪಾಲಕೃಷ್ಣ

ಅತ್ತ ಡಿಕೆ ಶಿವಕುಮಾರ್ ತಮ್ಮ ಹಾಗೂ ಸಿದ್ದರಾಮಯ್ಯರ ಬಳಿಗೆ ಚೀಟಿ ಹಿಡಿದುಕೊಂಡು ಬರಬೇಡಿ ಎಂದಿದ್ದರು ಸಹ ಶಿವಮೊಗ್ಗದ ಇಬ್ಬರು ನಾಯಕರು ತಮ್ಮದೇ ತಂತ್ರಗಾರಿಕೆ ಮೂಲಕ ಸಿಎಂ ಹಾಗೂ ಡಿಸಿಎಂ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇವರಿಬ್ಬರ ಕಾರ್ಯತಂತ್ರಗಳ ನಡುವೆ ಡಿಕೆಶಿ ಆಪ್ತ ವಲಯದಲ್ಲಿಯೇ ಗುರುತಿಸಿಕೊಂಡಿದ್ದ ಆರ್​ಎಂ ಮಂಜುನಾಥ್ ಗೌಡರು ಮತ್ತು ಇವರೊಂದಿಗೆ ಬೇಳೂರು ಗೋಪಾಲಕೃಷ್ಣರು ಸಹ ಡಿಕೆಶಿ ಹಿಂದೆ ಓಡಾಡುತ್ತಿದ್ದಾರೆ. ಇಲ್ಲಿ ಸಚಿವರು ಯಾರು ಆಗುತ್ತಾರೆ ಎಂಬುದೇ ಕುತೂಹಲ ಮೂಡಿಸಿದ್ದು, ಜಿಲ್ಲೆಯ ನಾಯಕರ ಪೈಪೋಟಿ ಜೋರಾಗಿ ನಡೆಯುತ್ತಿದೆ. 

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಗ್ಗೆ ಮತ್ತೊಂದು ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ

ಬೆಂಗಳೂರು/ ರಾಜ್ಯದಲ್ಲಿ ಬಹುಮತದ ಸರ್ಕಾರ ಬರುತ್ತದೆ ಸಮ್ರಿಶ್ರ ಸರ್ಕಾರ ಬರುವುದಿಲ್ಲೆ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಸ್ವಾಮೀಜಿಯವರು ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. 

ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಐದು ವರ್ಷ ಪೂರ್ಣಗೊಳಿಸಲಿದೆ ಎಂದಿರುವ ಟಅವರು. ಡಿಕೆ ಶಿವಕುಮಾರ್ ಅವರಿಗೂ ಸಿಎಂ ಆಗುವ ರಾಜಯೋಗವಿದೆ ಎಂದಿದ್ಧಾರೆ. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು,  ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶ್ರೀಗಳು ಸಂಪುಟದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದ್ಧಾರಂತೆ. ಅಲ್ಲದೆ, ಲೋಕಸಭಾ ಚುನಾವಣೆ ಬಳಿಕ ಸಣ್ಣಪುಟ್ಟ ಸಮಸ್ಯೆಗಳು ಸರ್ಕಾರಕ್ಕೆ ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.  

ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ: ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

ಪುತ್ತೂರು/ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ನಿನ್ನೆ ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಹಾಗೂ ಅವರ ತಾಯಿ ಭೇಟಿಕೊಟ್ಟಿದ್ಧಾರೆ.  ಪೊಲೀಸ್ ಸ್ಟೇಷನ್​ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಘಟನೆಯನ್ನು ಅವರು ಖಂಡಿಸಿದ್ದಾರೆ. 

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಂದ ಏಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ  ಅಶ್ವಿನಿ  ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ ಎಂದಿದ್ಧಾರೆ. 

ಹಿಂದೂ ಕಾರ್ಯಕರ್ತರು‌ ಸಮಾಜಕ್ಕೆ ದ್ರೋಹ ಮಾಡುತ್ತಿಲ್ಲ. ಈ ರೀತಿಯ ದೌರ್ಜನ್ಯ ಮಾಡೋದು ಸರಿಯಲ್ಲೆ ಎಂದು ಅಭಿಪ್ರಾಯ ಪಟ್ಟರು. ಈ ರೀತಿ ಹಲ್ಲೆ ಮಾಡಿದವರಿಗೂ ಮಕ್ಕಳು ಇರುತ್ತಾರೆ, ಹಲ್ಲೆ ಮಾಡಿಸಲು‌ ಕುಮ್ಮಕ್ಕು ಕೊಟ್ಟವರಿಗೂ ಮಕ್ಕಳು ಇದ್ದಾರೆ ಎಂಬುದು ನೆನಪಿರಲಿ. ಇನ್ಮುಂದೆಯಾದರೂ ಅರ್ಥಮಾಡಿಕೊಳ್ಳಲಿ ಎಂದ ಅವರು, ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ, ಅದನ್ನ‌ ಬುದ್ಧಿಯಲ್ಲಿಟ್ಟುಕೊಂಡು  ಹಿಂದುತ್ವಕ್ಕಾಗಿ  ಕೆಲಸ ಮಾಡಿ ಎಂದಿದ್ಧಾರೆ.