ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ: ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

Just wearing a saffron shawl is not Hindutva: Why did Harsha's sister Ashwini go to Puttur?

ಕೇಸರಿ ಶಾಲು ಹಾಕಿದ ಮಾತ್ರಕ್ಕೆ ಹಿಂದುತ್ವವಲ್ಲ:  ಹರ್ಷ ಸಹೋದರಿ ಅಶ್ವಿನಿ ಪುತ್ತೂರಿಗೆ ಹೋಗಿದ್ದೇಕೆ?

KARNATAKA NEWS/ ONLINE / Malenadu today/ May 22, 2023 SHIVAMOGGA NEWS

ಪುತ್ತೂರು/ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ,    ಶಿವಮೊಗ್ಗದಲ್ಲಿ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಹಾಗೂ ಅವರ ತಾಯಿ ಭೇಟಿಕೊಟ್ಟಿದ್ಧಾರೆ.  ಪೊಲೀಸ್ ಸ್ಟೇಷನ್​ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆಸಿದ ಹಲ್ಲೆ ಘಟನೆಯನ್ನು ಅವರು ಖಂಡಿಸಿದ್ದಾರೆ. 

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರಿಂದ ಏಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ  ಅಶ್ವಿನಿ  ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ ಎಂದಿದ್ಧಾರೆ. 

ಹಿಂದೂ ಕಾರ್ಯಕರ್ತರು‌ ಸಮಾಜಕ್ಕೆ ದ್ರೋಹ ಮಾಡುತ್ತಿಲ್ಲ. ಈ ರೀತಿಯ ದೌರ್ಜನ್ಯ ಮಾಡೋದು ಸರಿಯಲ್ಲೆ ಎಂದು ಅಭಿಪ್ರಾಯ ಪಟ್ಟರು. ಈ ರೀತಿ ಹಲ್ಲೆ ಮಾಡಿದವರಿಗೂ ಮಕ್ಕಳು ಇರುತ್ತಾರೆ, ಹಲ್ಲೆ ಮಾಡಿಸಲು‌ ಕುಮ್ಮಕ್ಕು ಕೊಟ್ಟವರಿಗೂ ಮಕ್ಕಳು ಇದ್ದಾರೆ ಎಂಬುದು ನೆನಪಿರಲಿ. ಇನ್ಮುಂದೆಯಾದರೂ ಅರ್ಥಮಾಡಿಕೊಳ್ಳಲಿ ಎಂದ ಅವರು, ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ, ಅದನ್ನ‌ ಬುದ್ಧಿಯಲ್ಲಿಟ್ಟುಕೊಂಡು  ಹಿಂದುತ್ವಕ್ಕಾಗಿ  ಕೆಲಸ ಮಾಡಿ ಎಂದಿದ್ಧಾರೆ.