ಇವತ್ತೆ ಬಿಜೆಪಿ ಟಿಕೆಟ್ ಪಟ್ಟಿ ರಿಲೀಸ್? ಶಿವಮೊಗ್ಗ ಜಿಲ್ಲೆಯಲ್ಲಿ ಯಾರಿಗೆ ಅವಕಾಶ!? ಹೈಕಮಾಂಡ್ ಶಾಕ್ ಯಾರಿಗೆ? @Malenadutoday.com

BJP's ticket list to be released today? Who will get a chance in Shimoga district? Who is shocked by the high command?karnataka election 2023

ಇವತ್ತೆ ಬಿಜೆಪಿ ಟಿಕೆಟ್ ಪಟ್ಟಿ ರಿಲೀಸ್? ಶಿವಮೊಗ್ಗ ಜಿಲ್ಲೆಯಲ್ಲಿ ಯಾರಿಗೆ ಅವಕಾಶ!? ಹೈಕಮಾಂಡ್ ಶಾಕ್ ಯಾರಿಗೆ? @Malenadutoday.com
ಇವತ್ತೆ ಬಿಜೆಪಿ ಟಿಕೆಟ್ ಪಟ್ಟಿ ರಿಲೀಸ್? ಶಿವಮೊಗ್ಗ ಜಿಲ್ಲೆಯಲ್ಲಿ ಯಾರಿಗೆ ಅವಕಾಶ!? ಹೈಕಮಾಂಡ್ ಶಾಕ್ ಯಾರಿಗೆ? @Malenadutoday.com

ಅಂದುಕೊಂಡಂತೆ ಆದರೆ ಇವತ್ತು ಸಂಜೆ ಹೊತ್ತಿಗೆ ಬಿಜೆಪಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸಂಬಂಧ ನಿನ್ನೆ  ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಮಾತನಾಡಿದ್ದು,   ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುಮಾರು 2 ಗಂಟೆ ಕಾಲ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ. 




170ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ



ಇನ್ನೂ ಸಭೆಯಲ್ಲಿ ಕೆಲವು ಕ್ಷೇತ್ರಗಳ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು ಬಹುತೇಕ ಇವತ್ತು ಮೊದಲ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಳಿವು ನೀಡಿದ್ದು, ಇವತ್ತ ಮೊದಲ ಪಟ್ಟಿ ಪ್ರಕಟಿಸುತ್ತೇವೆ ಎಂದಿದ್ದಾರಷ್ಟೆ ಅಲ್ಲದೆ ಬರೋಬ್ಬರಿ 170 ಮಂದಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.



ಹೈವೋಲ್ಟೇಜ್ ಸಭೆಯಲ್ಲಿ ಬಿಎಸ್​ ಯಡಿಯೂರಪ್ಪ 

ಇನ್ನೂ ದೆಹಲಿಯಲ್ಲಿ ಸುಮಾರು 2 ಗಂಟೆ ಕಾಲ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಎಸ್​  ಯಡಿಯೂರಪ್ಪ ಕೂಡ ಪಾಲ್ಗೊಂಡಿದ್ದರು,  ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,

ಕೇಂದ್ರ ಸಚಿವ ಅಮಿತ್ ಶಾರಿದ್ದ ಸಭೆಯಲ್ಲಿ ರಾಜ್ಯದ  ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಧಾನ್​ ಭಾಗಿಯಾಗಿದ್ದರು. 





ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಭಿನ್ನರಾಗ



ಈ ಹಿಂದೆ ಭದ್ರಕೋಟೆ ಎಂದು ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾಕಿದ್ದ ಬಿಜೆಪಿಯಲ್ಲಿ ಈ ಸಲ ಹೌ ಇಸ್ ದೀ ಜೋಶ್ ಎಂಬ ವಾಕ್ಯ ಇನ್ನಷ್ಟೆ ಕೇಳಿಬರಬೇಕಿದೆ.  ಆಯನೂರು ಮಂಜುನಾಥ್​ರ ರಂಗಪ್ರವೇಶದಿಂದ ಶಿವಮೊಗ್ಗ ನಗರ ಹೈವೋಲ್ಟೇಜ್​ ಕ್ಷೆತ್ರವಾದರೆ, ಶಿಕಾರಿಪುರದಲ್ಲಿ ಬಿ.ವೈವಿಜಯೇಂದ್ರರವರ ಚುನಾವಣಾ ಬದುಕಿನ ಎಂಟ್ರಿ ಸೆಂಟರ್ ಆಫ್​ ಅಟ್ರ್ಯಾಕ್ಷನ್ ಆಗ್ತಿದೆ. ಉಳಿದಂತೆ ಹಾಲಿ ಶಾಸಕರುಗಳಿಗೂ ತಾವೆ ಅಭ್ಯರ್ಥಿ ಎಂದು ಹೇಳಿಕೊಳ್ಳುವಂತಹ ಸನ್ನಿವೇಶಗಳು ಕಾಣುತ್ತಿಲ್ಲ. ಇದಕ್ಕೆ ಕಾರಣ ಅಚ್ಚರಿಯ ಶಾಕ್ ಕೊಡುವಂತಹ ಬಿಜೆಪಿ ಹೈಕಮಾಂಡ್ 

ಯ್ಯಾವಾವ ಕ್ಷೇತ್ರದಲ್ಲಿ ಯಾರಿಗೆ ಚಾನ್ಸ್​? 



ಇನ್ನೂ ಕ್ಷೇತ್ರವಾರು ಗಮನಿಸುವುದಾದರೆ, ಶಿವಮೊಗ್ಗ ನಗರ ಕ್ಷೇತ್ರ  ದಲ್ಲಿ ಈಗಾಗಲೇ ಕೆ.ಎಸ್​.ಈಶ್ವರಪ್ಪನವರಿಗೆ ಟಿಕೆಟ್ ನಿಕ್ಕಿಯಾಗಿದೆ ಎಂದು ವಾಟ್ಸ್ಯಾಪ್​ ಗ್ರೂಪ್​ಗಳಲ್ಲಿ ಮೆಸೇಜ್​ಗಳು, ಅಭಿನಂದನೆಯ ಸ್ಟಿಕ್ಟರ್​ಗಳು ಹರಿದಾಡುತ್ತಿವೆ. ಹಾಗಿದ್ದರೂ ಟಿಕೆಟ್ ಅವರಿಗೆನಾ ಎಂಬ ಗೊಂದಲ ನಿವಾರಣೆಯಾಗಿಲ್ಲ. ಈಶ್ವರಪ್ಪನವರ ಬೆನ್ನಲ್ಲೆ ಡಾ.ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್​, ರುದ್ರೇಗೌಡರು ಸೇರಿದಂತೆ ಹಲವು ಹೆಸರುಗಳು ದೆಹಲಿ ನಾಯಕರ ಪಟ್ಟಿಯಲ್ಲಿದೆ. ಫೈನಲ್ ಯಾರಾಗುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಮೇಲಾಗಿ ಆಯನೂರು ಮಂಜುನಾಥ್ ರ ಬಂಡಾಯ! ನಗರ ಕ್ಷೇತ್ರದ ಚುನಾವಣೆಯ ದಿಕ್ಕನ್ನ ಬದಲಾಯಿಸುವ ಸಾಧ್ಯತೆ ಇದೆ. 



ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ದಲ್ಲಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಎನ್ನಲಾಗುತ್ತಿದೆ. ಆದರು ಜೊತೆಯಲ್ಲಿಯೇ ಧೀರರಾಜ್​ ಹೊನ್ನವಿಲೆ ಶತಾಯಗತಾಯ ಟಿಕೆಟ್ ತರುತ್ತೇನೆ ಎಂದು ಕಸರತ್ತು ನಡೆಸಿದ್ದಾರೆ. ಇವರಷ್ಟೆ ಅಲ್ಲದೆ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಹಾಗೂ  ವೀರಭದ್ರಪ್ಪ ಪೂಜಾರಿ ಸೇರಿದಂತೆ ಇನ್ನೂ ಕೆಲವೊಂದು ಹೆಸರು ಮುಂಚೂಣಿಯಲ್ಲಿದೆ. 



ಅತ್ತ ಶಿಕಾರಿಪುರ ಕ್ಷೇತ್ರ ದಲ್ಲಿ ಬಿಎಸ್​ ಯಡಿಯೂರಪ್ಪ ಬಿ.ವೈ.ವಿಜಯೇಂದ್ರರ ಹೆಸರನ್ನ ಘೋಷಿಸಿಯಾಗಿದೆ. ಇದಕ್ಕೆ ಹೈಕಮಾಂಡ್​ನ ಟಿಕೆಟ್ ಮುದ್ರೆ ಸಿಗಬೇಕಿದೆ. ಟಿಕೆಟ್ ನಿರ್ಧಾರಕ ಸಭೆಯಲ್ಲಿಯೇ ಬಿಎಸ್​ವೈರವರು ಪುತ್ರನಿಗೆ ಟಿಕೆಟ್ ಫೈನಲ್​ ಮಾಡಿರುವ ಸಾಧ್ಯತೆ ಇದೆ. 



ಸೊರಬ ಕ್ಷೇತ್ರ ದಲ್ಲಿಯು ಹಾಲಿ ಶಾಸಕರಿಗೆ ಟಿಕೆಟ್​ ಎನ್ನಲಾಗುತ್ತಿದೆಯಾದರೂ ಕುಮಾರ್ ಬಂಗಾರಪ್ಪನವರಿಗೆ ಹೈಕಮಾಂಡ್ ಶಾಕ್ ಕೊಟ್ಟರೂ ಅಚ್ಚರಿಯಿಲ್ಲ. ನಮೋ ವೇದಿಕೆ ಹಾಗೂ ಸಂಘ ಪರಿವಾರದ ವಿರೋಧ ಹಾಲಿ ಶಾಸಕರಿಗೆ ಕಗ್ಗಂಟಾದರೂ ಆಗಬಹುದು ಡಾ.ಜ್ಞಾನೇಶ್​, ಗೀತಾ ಮಲ್ಲಿಕಾರ್ಜುನ್​ ಸೇರಿದಂತೆ ಇಲ್ಲಿಯು ಹಲವು ಆಕಾಂಕ್ಷಿಗಳು ತಮ್ಮದೆ ಆದ ಪ್ರಭಾವ ಹೊಂದಿದ್ದಾರೆ. 



ಸಾಗರ ಕ್ಷೇತ್ರ ದಲ್ಲಿ ಬಹುತೇಕ ಹರತಾಳು ಹಾಲಪ್ಪರಿಗೆ ಟಿಕೆಟ್ ಎನ್ನುತ್ತಿದೆ ಅವರ ಆಪ್ತ ಬಳಗ ಹಾಗಿದ್ದರೂ ಇಲ್ಲಿಯು ಸಹ ಒಳಪೆಟ್ಟಿನ ಆಟ ಜೋರಾಗಿ ನಡೆಯಯತ್ತಿದೆ. ಹಲವರು ಬಿಜೆಪಿ ಟಿಕೆಟ್​ಗೆ ಕಾಯುತ್ತಿದ್ದು ಅಚ್ಚರಿಯ ಹೆಸರುಗಳು ಹೊರಬಂದರೆ ಅದು ಬಿಜೆಪಿ ಹೈಕಮಾಂಡ್​ ನೀಡುವ ಶಾಕ್ ಆಗುತ್ತದೆ. 



ತೀರ್ಥಹಳ್ಳಿ ಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರರವರೇ ಟಿಕೆಟ್ ಪಡೆಯುವುದು ಫೈನಲ್ ಆಗಿದ್ದು, ಅಲ್ಲಿ ಆಕಾಂಕ್ಷಿಗಳ ಪೈಪೋಟೀ ಸಹ ಪ್ರಭಾವಯುತವಾಗಿ ಕಂಡಿಲ್ಲ. ಮೇಲಾಗಿ ಬಿಎಸ್​ ಯಡಿಯೂರಪ್ಪನವರು ಆರಗ ಪರವಾಗಿ ಈಗಾಗಲೇ ತೀರ್ಥಹಳ್ಳಿಯಲ್ಲಿ ಬೆಂಬಲಿಸಿ ಪ್ರಚಾರವೂ ನಡೆಸಿದ್ದಾರೆ. 

ವಿಐಎಸ್​ಎಲ್​ ಫ್ಯಾಕ್ಟರಿಗೆ ಭೀಗ ಬಿದ್ದಿದ್ದು, ಭದ್ರಾವತಿ ಯಲ್ಲಿ ನೆಲೆ ಕಾಣುವ ಬಿಜೆಪಿ ಆಸೆಗೆ ಹಿನ್ನಡೆ ಮೂಡಿಸಿದೆಯಾದರೂ, ಇಲ್ಲಿಯು ಅಭ್ಯರ್ಥಿಯಾಗಲು ಹಲವರು ಪೈಪೋಟಿ ನಡೆಸ್ತಿದ್ದಾರೆ.  ಭದ್ರಾವತಿಯಲ್ಲಿ ಮಂಗೋಟೆ ರುದ್ರೇಶ್, ಪವಿತ್ರಾ ರಾಮಯ್ಯ, ತೀರ್ಥಯ್ಯ, ಧರ್ಮಪ್ರಸಾದ್, ಎಸ್‍.ಕುಮಾರ್, ಕೂಡ್ಲಿಗೆರೆ ಹಾಲೇಶ್‍ ಅವರು ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆ 



ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga

#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada karnataka election 2023,karnataka assembly election 2023,karnataka elections 2023,karnataka assembly elections 2023,karnataka election,karnataka elections,karnataka election news,karnataka assembly election,karnataka politics,karnataka election date,karnataka vidhan sabha election 2023,karnataka,karnataka assembly elections,karnataka election 2023 opinion poll,karnataka polls 2023,2023 assembly election,karnataka news,karnataka election 2023 date