ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ ನಾಗರಾಜ್ ಗೌಡ ಹೇಳಿದ್ದೇನು?

What did Shikaripura rebel candidate Nagaraj Gowda say during an interaction at patrika bhavan?

ವಿಜಯೇಂದ್ರ ವಿಜಯಕ್ಕೆ ಹೊರಗಿನಿಂದ ಬಂದಿದ್ಧಾರೆ ಸಾವಿರಾರು ಜನ/ ಶಿಕಾರಿಪುರದಲ್ಲಿ ಸ್ವಾಭಿಮಾನದ ಸವಾಲು! ಸಂವಾದದಲ್ಲಿ  ನಾಗರಾಜ್ ಗೌಡ ಹೇಳಿದ್ದೇನು?

KARNATAKA NEWS/ ONLINE / Malenadu today/ May 7, 2023 GOOGLE NEWS

ಶಿವಮೊಗ್ಗ / ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಇವತ್ತು  ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ್ರು.

ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರರವರ ಪರವಾಗಿ ಕೆಲಸ ಮಾಡಲು ಹೊರಗಿನಿಂದ ಸಾವಿರಾರು ಮಂದಿ ಬಂದಿದ್ಧಾರೆ. ಆಯಕಟ್ಟಿನ ಜಾಗದಲ್ಲಿ  ಮತದಾರರ ಮೇಲೆ ಪರಿಣಾಮ ಬೀರಲು ಸಿದ್ಧರಾಗಿದ್ಧಾರೆ. ಅಲ್ಲದೆ, ಹಣದ ಹೊಳೆ ಹರಿಸಲು ಸಿದ್ಧತೆ ನಡೆದಿದೆ ಎಂದು ಆರೋಪಿಸಿದ್ದಾರೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

ಅವರಿಗೆ ಕ್ಷೇತ್ರದ ಪರಿಚಯವಿಲ್ಲ

ಶಿಕಾರಿಪುರದಲ್ಲಿ ಜನರ ಕೈಗೆ ಸಿಗುವ  ಜನಪ್ರತಿನಿಧಿ ಬೇಕಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಈತನಕ ಸತತವಾಗಿ ಒಂದು ವಾರವೂ ಕ್ಷೇತ್ರದಲ್ಲಿ ಇದ್ದ ಉದಾಹರಣೆ ಇಲ್ಲ. ಮೇಲಾಗಿ ಅವರಿಗೆ ಕ್ಷೇತ್ರದ ಪರಿಚಯವಿಲ್ಲ.

ರೈತರು, ಭೂಮಿ, ಬೆಳೆ, ಕಳೆ, ನೀರು ನೀರಾವರಿ, ಒಕ್ಕಲುತನದ ಅರಿವಿಲ್ಲ. ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಅವರಲ್ಲಿ ಪರಿಹಾರವೂ ಇಲ್ಲ ಎಂದು ದೂರಿದರು. ನಾನು  ಟ್ರಾಕ್ಟರ್‌ನಲ್ಲಿ ಭೂಮಿಯ ಕೆಲಸ ಮಾಡಿಕೊಂಡು ಇಡೀ ಕ್ಷೇತ್ರದಲ್ಲಿ ಪರಿಚಿತನಾಗಿದ್ದೇನೆ ಎಂದಿದ್ಧಾರೆ. 

ಯಡಿಯೂರಪ್ಪನವರ ಪರವಾಗಿ ಕೆಲಸ ಮಾಡಿದ್ದೆ  

ಈ ಹಿಂದೆ ಯಡಿಯೂರಪ್ಪ ಅವರ ಪರವಾಗಿ ನನ್ನ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದೆ. ಕಾಂಗ್ರೆಸ್‌ಗೆ ಬಂದ ಮೇಲೆ ಇಡೀ ಕ್ಷೇತ್ರದಲ್ಲಿ ಬೂತ್‌ಕಮಿಟಿ ಮಾಡಿ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈಗ ಟಿಕೆಟ್ ಕೊಟ್ಟಿಲ್ಲ ಎಂದು ಬೇಸರ ಮಾಡಿಕೊಂಡಿಲ್ಲ. ಸ್ವಾಭಿಮಾನಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಈಗ ಮತ್ತು ಮುಂದೆ ನಾನು ಕಾಂಗ್ರೆಸ್ ಮನುಷ್ಯನೇ ಹೊರತು ಅನ್ಯ ಪಕ್ಷದವನಲ್ಲ. ಕ್ಷೇತ್ರದ ಜನರ ಪ್ರೀತಿಗೆ ತಕ್ಕ ಹಾಗೆ ಅವರ ಸೇವೆ ಮಾಡುತ್ತೇನೆ ಎಂದಿದ್ಧಾರೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

ಚುನಾವಣೆಯಲ್ಲ ಸ್ವಾಭಿಮಾನದ ಹೋರಾಟ 

ಶಿಕಾರಿಪುರದಲ್ಲಿ ನಡೆಯುತ್ತಿರುವುದು ಬರೀ ಚುನಾವಣೆಯಲ್ಲ ಸ್ವಾಭಿಮಾನದ ಹೋರಾಟ.  ಕ್ಷೇತ್ರದ ಜನರೇ ನನ್ನನ್ನು ಅಭ್ಯರ್ಥಿ ಮಾಡಿದ್ಧಾರೆ.  ಗೆಲ್ಲಿಸುವ ಹೊಣೆ ಅವರೇ ಹೊತ್ತುಕೊಂಡಿದ್ದಾರೆ.  ಜನ ತಮ್ಮ ಖರ್ಚನ್ನು ತಾವೇ ನೋಡಿಕೊಂಡು, ಮುಖಂಡರ ಪ್ರವಾಸಕ್ಕೆ ದೇಣಿಗೆನೂ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ನಾವು ಯಾರಿಗೂ ಒಂದು ಪೈಸೆ ಹಣ ಕೊಟ್ಟಿಲ್ಲ. ಶಿಕಾರಿಪುರ ಕ್ಷೇತ್ರದ ಜನ ಹಣಕ್ಕೆ ಬೆಲೆಕೊಡದೆ ಗುಣಕ್ಕೆ ಬೆಲೆ ನೀಡಿ ನನ್ನನ್ನು ಗೆಲ್ಲಿಸುವ ವಿಶ್ವಾಸ ನನಗಿದೆ ಎಂದಿದ್ದಾರೆ. 

ಬಗರ್​ ಹುಕುಂಗೆ ಸಿಕ್ಕಿಲ್ಲ ಪರಿಹಾರ

ಶಿಕಾರಿಪುರದದಲ್ಲಿ ಜೀತವಿಮುಕ್ತಿ ಹಾಗೂ ಬಗರ್‌ಹುಕುಂ ಹೋರಾಟದ ಮೂಲಕ ಯಡಿಯೂರಪ್ಪರವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾದರು.  ಜನತೆ ಅವರಿಗೆ ಎಲ್ಲಾ ಅಧಿಕಾರ ಕೊಟ್ಟಿದ್ದಾರೆ. ಆದರೆ ಶಿಕಾರಿಪುರದಲ್ಲಿ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರ ಕಂಡಿಲ್ಲ.   ಬಿಜೆಪಿ ಸರಕಾರ  ಒಂದೂ ಹಕ್ಕುಪತ್ರ ಕೊಟ್ಟಿಲ್ಲ. ಶಿಕಾರಿಪುರದಲ್ಲಿ ನೀರಾವರಿ ಯೋಜನೆ ಮಾಡಿದ್ದಾರೆ. ಆದರೆ ಕೆರೆಗಳ ಹೂಳೆತ್ತುವ ಕೆಲಸ ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆ ಮಾಡಿಕೊಂಡಿದ್ದಾರೆ. ಬಡವರ ಮಕ್ಕಳು ಅಲ್ಲಿ ದುಬಾರಿ ಹಣ ಕೊಟ್ಟು ಶಿಕ್ಷಣ ಪಡೆಯಲಾಗಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

ಕೋಟೆ ದಾಟುವುದು ಸುಲಭವಲ್ಲ

ಅಧಿಕಾರಕ್ಕೆ ಬಂದ ಬಿಎಸ್​ವೈ ಹಾಗೂ ಸಂಸದರನ್ನು ಅವರ ಸುತ್ತಲಿನ  ಕೋಟೆ ದಾಟಿಕೊಂಡು  ತಲುಪುವುದು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ.  ನಾನು ಸರಳ ಹಾಗೂ ಪ್ರಾಮಾಣಿಕವಾಗಿ ಜನ ಸೇವೆ ಮಾಡಿಕೊಂಡು ಬಂದಿದ್ದೇನೆ. ಜನರ ನಡುವೆಯೇ ಇದ್ದು, ಜನರ ಸೇವೆ ಮಾಡುತ್ತೇನೆ ಎಂದಿದ್ದೇನೆ. ಆ ಕಾರಣವಾಗಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.  ಸರ್ವ ಜಾತಿಯ ಜನರೂ ನನ್ನೊಂದಿಗೆ ಇದ್ದಾರೆ. ಹಳ್ಳಿಗಳಿಗೆ ಹೋದಾಗ ಮನೆ ಮಗನಂತೆ ಕರೆದು ಸ್ವಾಗತಿಸಿದ್ದಾರೆ 

ಕಾಂಗ್ರೆಸ್​ ಜೊತೆಯಲ್ಲಿದೆ, ಬಿಜೆಪಿ ಅಂತರಂಗದಲ್ಲಿದೆ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಂದಿಗೆ ಇದ್ದ ಅನೇಕ ಮುಖಂಡರು ಪದಾಧಿಕಾರಿಗಳು ನನ್ನೊಂದಿಗೆ ಇದ್ದಾರೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಅಂತರಂಗದಲ್ಲಿ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ ಮಾತ್ರವಲ್ಲದೆ ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಬಯಸಿದ್ದಾರೆ ಎಂದು ವಿವರಿಸಿದ್ದಾರೆ. 


Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್

Accident news/  ಕುಂದಾಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಇನ್ನೋವ್ಹಾ 

ಕಾರು -ಲಾರಿ ನಡುವೆ ಡಿಕ್ಕಿ!  



ರಿಪ್ಪನ್ ಪೇಟೆ/ ಶಿವಮೊಗ್ಗ/ ಹೊಸನಗರ ತಾಲ್ಲೂಕಿನ ಸೂಡೂರು ಗೇಟ್​ ಬಳಿಯಲ್ಲಿ ನಿನ್ನೆ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಇನ್ನೋವ್ಹಾ ಕಾರಿನ ನಡುವೆ ಡಿಕ್ಕಿಯಾಗಿದ್ದು.ಕಾರಿನ ಮುಂಭಾಗ ಜಖಂ ಆಗಿದೆ. 

ಏನಾಯ್ತು?

ಕುಂದಾಪುರ ದಿಂದ ಶಿವಮೊಗ್ಗಕ್ಕೆ  ತೆರಳುತ್ತಿದ್ದ ಇನ್ನೋವ್ಹಾ ಕಾರು ಸೂಡೂರು ಗೇಟ್ ಬಳಿಯಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುತ್ತಿದ್ದ ಕ್ಯಾಂಟರ್​ ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. 

ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿದ್ದು ಕಾರು ಒಂದು ಕಡೆ ತಿರುಗಿನಿಂತಿದೆ. ಅದೃಷ್ಟವಶಾತ್ ಘಟನೆಯಲ್ಲಿ, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.  ರಿಪ್ಪನ್​ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಕಾರನ್ನ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media