‘ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು!’ ನೂತನ ಶಾಸಕ ಚೆನ್ನಬಸಪ್ಪನವರ ಉತ್ತರವೇನು?

New MLA SN Chennabasappa's statement in Shivamogga city

‘ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು!’ ನೂತನ ಶಾಸಕ ಚೆನ್ನಬಸಪ್ಪನವರ ಉತ್ತರವೇನು?

KARNATAKA NEWS/ ONLINE / Malenadu today/ May 18, 2023 SHIVAMOGGA NEWS PAPER ONLINE

ಶಿವಮೊಗ್ಗ ಚುನಾವಣೆಯಲ್ಲಿ ಬಿಜೆಪಿ ಸೋಲಿಗಾಗಿ, ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್.ಸಂತೋಷ್  ಅವರನ್ನ  ಟೀಕಿಸುತ್ತಿರುವುದನ್ನ  ಸರಿಯಲ್ಲ ಎಂದು ಶಿವಮೊಗ್ಗದ (shivamogga news ) ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ. 

ರೈಲಿಗೆ ಕಾಡುಕೋಣ ಡಿಕ್ಕಿ/ ಚರಂಡಿಗೆ ಬಿದ್ದು ಕಾಡು ಪ್ರಾಣಿಯ ನರಳಾಟ

ನಿನ್ನೆ  ನಗರದ ಬಿಜೆಪಿ ಕಚೇರಿಯಲ್ಲಿಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅವರನ್ನು ಟೀಕಿಸಿ ಸಂಘಟನೆಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿಸಿದರೆ ಸೂಕ್ತ ಕ್ರಮ ಅನಿವಾರ್ಯವಾಗಲಿದೆ. ಎಂದು ಎಚ್ಚರಿಸಿದರು.

ಬಿ.ಎಲ್.ಸಂತೋಷ್ ದೇಶಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದಾರೆ. ಅವರ ಬದುಕನ್ನು ನೋಡಬೇಕು. ಆವರು ನಡೆದು ಬಂದ ದಾರಿಯನ್ನು ಅರಿತುಕೊಳ್ಳಬೇಕು. ಅವರನ್ನು ಟೀಕಿಸಿದ್ದಕ್ಕೆ ಇಡೀ ಸಂಘಟನೆಗೆ ನೋವಾಗಿದೆ. ಟೀಕೆಯನ್ನು ಪಕ್ಷದವರೇ ಮಾಡಲಿ ಅಥವಾ ಬೇರೆಯವರೇ ಮಾಡಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ ಪಕ್ಷದ ಸೋಲಿಗೆ ಸಂತೋಷ್ ಕಾರಣರಲ್ಲ, ಜನ ನಮ್ಮನ್ನು ಸೋಲಿಸಿದ್ದಾರೆ. ಕುರಿತು ಮಾತನಾಡುವವರು ಪಕ್ಷದಲ್ಲಿ ಇರಲು ಅವರನ್ನು ಅಲ್ಲಾಡಿಸಿ ಬೇಯಿಸಿಕೊಳ್ಳಬೇಕೆಂದು ಕೊಂಡರೆ ಬೇಳೆ ಅವರ ಮಾನಸಿಕ ದಾರಿದ್ಯ ಎಂದು ತೀಕ್ಷ್ಯವಾಗಿ ಟೀಕಿಸಿದರು.

ರೈಲಿಗೆ ಕಾಡುಕೋಣ ಡಿಕ್ಕಿ/ ಚರಂಡಿಗೆ ಬಿದ್ದು ಕಾಡು ಪ್ರಾಣಿಯ ನರಳಾಟ

ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು. ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ. ಹೋಗುವುದೂ ಇಲ್ಲ. ಒಟ್ಟಾರೆ ಮತದಾರರ ಋಣ ತೀರಿಸುವಂತಹ ಕೆಲಸ ಮಾಡುತ್ತೇನೆ. ಅವರು ನನಗೆ ಮತದಾನ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.  

ಆಯನೂರು ಮಂಜುನಾಥ್ ಅವರ ಹೇಳಿಕೆಗಳಿಗೆ ಉತ್ತರಿಸಿದ ಚನ್ನಿ, 'ವಯಸ್ಸು 70-75 ದಾಟಿದ ಮೇಲೆ ಶಾಂತಿ ಬೇಕೆನಿಸುತ್ತದೆ. ಅದು ಸಾಮಾನ್ಯ. ನಗರದಲ್ಲಿ ಶಾಂತಿ ಸುವ್ಯವಸ್ಥೆನಮ ಕರ್ತವ್ಯ. ಶಾಂತಿ ನೆಲೆಸಲು ಏನು ಮಾಡಬೇಕೆಂದು ಅವರ ಜತೆ ಕುಳಿತು ಮಾತನಾಡುವೆ ಎಂದಿದ್ಧಾರೆ. 


Accident / ಎಗ್​ ರೈಸ್ಗೆ ಆರ್ಡರ್​ ಹೇಳಿ , ಬೈಕ್​ ಬಳಿ ನಿಂತಾಗ ಸಂಭವಿಸಿತು ದುರಂತ

ಶಿವಮೊಗ್ಗ ಎಗ್​​ರೈಸ್ ತಿನ್ನಲು ಬೈಕ್​ ಸೈಡ್​ಹಾಕಿ ನಿಂತಿದ್ದಾಗ ಟ್ರ್ಯಾಕ್ಟರ್​ ಗುದ್ದಿ, ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಶಿವಮೊಗ್ಗದ ಹೊಳಲೂರಿನ ಕೆಇಬಿ ಕಚೇರಿ ಬಳಿ ಈ ಘಟನೆ ಸಂಭವಿಸಿದೆ. 

ರೈಲಿಗೆ ಕಾಡುಕೋಣ ಡಿಕ್ಕಿ/ ಚರಂಡಿಗೆ ಬಿದ್ದು ಕಾಡು ಪ್ರಾಣಿಯ ನರಳಾಟ

ಹೇಗಾಯ್ತು! 

ಹೊಳಲೂರಿನ ಕೆಇಬಿ ಮುಂಭಾಗ ಎಗ್ ರೈಸ್ ತಿನ್ನಲು ಆಕಾಶ್ (20) ಮತ್ತು ಸೋಮಿಕೊಪ್ಪದ ನವೀನ (23) ತೆರಳಿದ್ರು. ಬೈಕ್ ಸೈಡ್​ಗೆ ಹಾಕಿ  ಎಗ್ ರೈಸ್ ಆರ್ಡರ್ ಹೇಳಿ, ಬೈಕ್​ ಬಳಿಯಲ್ಲಿಯೇ ಮೊಬೈಲ್ ನೋಡುತ್ತಾ ನಿಂತಿದ್ದರು.

ಶಿವಮೊಗ್ಗದಲ್ಲಿ ಎಲೆಕ್ಷನ್ ಡ್ಯೂಟಿ ಮುಗಿಸಿ ಊರಿಗೆ ಹೋದ ಅಧಿಕಾರಿಗೆ ಕಾದಿತ್ತು ಶಾಕ್

ಈ ವೇಳೆ ಮೇಲಿನ ಹನಸವಾಡಿಯಿಂದ ಇಟ್ಟಿಗೆ ತುಂಬಿಸಿಕೊಂಡು ಬರುತ್ತಿದ್ದ  ಟ್ರ್ಯಾಕ್ಟರ್​ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನವೀನ್​ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ (shivamogga hospital) ಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Viral video/ ಕಾರಿನಲ್ಲಿ ಬಂದು ಸರಗಳ್ಳತನ! ! ವೈರಲ್ ಆಗ್ತಿದೆ ಈ ಸಿಸಿ ಟಿವಿ ದೃಶ್ಯ

Malenadutoday.com Social media