KARNATAKA NEWS/ ONLINE / Malenadu today/ Apr 26, 2023 GOOGLE NEWS
ಬಾಗಲಕೋಟೆ / ಕರ್ನಾಟಕ ವಿಧಾನಸಭಾ ಚುನಾವಣೆ / ಚುನಾವಣಾ ನಿವೃತ್ತಿ ಘೋಷಣೆ ಮಾಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪನವರಿಗೆ (KS Eshwarappa) ಎಲ್ಲೆ ಹೋಗಲಿ ಅವರಿಗೆ ಹಿಂದುತ್ವಕ್ಕಾಗಿ ಮಡಿದವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿಲ್ಲವೇಕೆ ಎಂಬ ಪ್ರಶ್ನೆಯೊಂದು ಎದುರಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ದಲ್ಲಿಯು ಅವರಿಗೆ ಇದೆ ಪ್ರಶ್ನೆ ಎದುರಾಗಿತ್ತು. ಹಿಂದೂ ಹರ್ಷ ನ ಕುಟುಂಬಕ್ಕೆ ಟಿಕೆಟ್ ನೀಡದಿರುವ ಬಗ್ಗೆ ಪ್ರಶ್ನಿಸಲಾಗ ಮಾಜಿ ಸಚಿವರು ಸಿಟ್ಟಾಗಿದ್ದರು. ಅಲ್ಲದೆ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೆ ಗೊತ್ತಿದೆ ಎಂದಿದ್ದರು.
ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್ ಸ್ಟಂಟ್/ ಸೈಲೆಂಟ್ ಆಗಿ ಪುಂಡರಿಗೆ ವಾರ್ನಿಂಗ್ ಕೊಟ್ಟ ಪೊಲೀಸ್
ಇದೀಗ ಅಂತಹುದ್ದೆ ಸನ್ನಿವೇಶ ನಿನ್ನೆ ಬಾಗಲಕೋಟೆಯಲ್ಲಿ ಈಶ್ವರಪ್ಪನವರಿಗೆ ಎದುರಾಗಿತ್ತು. ಹಿಂದೂತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡದಿರುವ ಬಗ್ಗೆ ಪ್ರಶ್ನೆ ಕೇಳಿಬಂದಾಗ ಅವರು, ಹಿಂದುತ್ವಕ್ಕಾಗಿ ಮಡಿದವರಿಗೆ ಟಿಕೆಟ್ ನೀಡುತ್ತಾ ಹೋದ್ರೆ, ಬಹಳ ಜನರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂದಿದ್ಧಾರೆ.
ಓದಿ / ಡಿಪ್ಲೋಮೋ ಕೋರ್ಸ್ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 % ಉದ್ಯೋಗಾವಕಾಶ/ ವಿವರ ಇಲ್ಲಿದೆ
ಪ್ರಾಣ ಕಳೆದುಕೊಂಡ ಹಿಂದು ಹೋರಾಟಗಾರರಿಗೆ ಟಿಕೆಟ್ ಕೊಡೋದು ಅಂತಾದರೆ, ಬಹಳಷ್ಟು ಜನರಿಗೆ ಟಿಕೆಟ್ ಕೊಡಬೇಕಾಗುತ್ತದೆ. ಅದು ಆಗದ ಮಾತು.
ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ
ಹಾಗಂತ, ಹೋರಾಟಕ್ಕೆ ಬೆಲೆ ಇಲ್ಲ ಎಂದಲ್ಲ. ಟಿಕೆಟ್ ಕೊಡಬೇಕಾದರೆ ಅವರ ಗೆಲುವಿನ ಸಾಧ್ಯತೆ ಹಾಗೂ ಸಂಘಟನೆಗೆ ಅವರು ಮಾಡಿದ ಕೆಲಸಗಳನ್ನು ಗಮನಿಸಬೇಕಾಗುತ್ತದೆ ಎಂದಿದ್ದಾರೆ.
