ಹರ್ಷನ ಟ್ರಸ್ಟ್​ ಅಧ್ಯಕ್ಷರು ಯಾರು? ಎಸ್​ಪಿ, ಡಿಸಿಯಿಂದ ಗಲಾಟೆ ತಣ್ಣಗಾಯ್ತು! ಬ್ಯಾರಿ ಮಾಲ್​ ಡೀಲ್! ಮತ್ತೆ ಆಯನೂರು ಮಂಜುನಾಥ್​ ‘ಮಾತು’ ಸ್ಫೋಟ

Who is the president of Harsha's Trust? Ayanur Manjunath's words explodes again

ಹರ್ಷನ ಟ್ರಸ್ಟ್​ ಅಧ್ಯಕ್ಷರು ಯಾರು? ಎಸ್​ಪಿ, ಡಿಸಿಯಿಂದ ಗಲಾಟೆ ತಣ್ಣಗಾಯ್ತು! ಬ್ಯಾರಿ ಮಾಲ್​ ಡೀಲ್! ಮತ್ತೆ ಆಯನೂರು ಮಂಜುನಾಥ್​  ‘ಮಾತು’ ಸ್ಫೋಟ

KARNATAKA NEWS/ ONLINE / Malenadu today/ May 4, 2023 GOOGLE NEWS


ಶಿವಮೊಗ್ಗ/ ನಿನ್ನೆ ಎನ್​ಇಎಸ್​ ಮೈದಾನದಲ್ಲಿ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಶಿವಮೊಗ್ಗ ಜೆಡಿಎಸ್​ ಅಭ್ಯರ್ಥಿ ಆಯನೂರು ಮಂಜುನಾಥ್ ಬಿಜೆಪಿ ವಿರುದ್ಧ ಕಠಿಣ ಪದಗಳನ್ನೆ ಬಳಸಿ ಹರಿಹಾಯ್ದರು.. 

ಎಸ್​ಪಿ ಡಿಸಿಯಿಂದ ತಣ್ಣಗಾಯಿತು

ಶಿವಮೊಗ್ಗದ ಜನ ಬದಲಾವಣೆ ಬಯಸುತ್ತಿದ್ದಾರೆ 33 ವರ್ಷದ ಏಕತಾನತೆ ಆಡಳಿತವಿತ್ತು ಎಂದ ಆಯನೂರು ಮಂಜುನಾಥ್​,  ಮಂಗಳೂರಿನ ಕಾವೂರಿನಲ್ಲಿ ಈಶ್ವರಪ್ಪ ಮಾತನಾಡುತ್ತಿದ್ದ ವೇಳೆ ಆಜಾನ್ ಕೂಗಲಾಯಿತು. ಆಜಾನ್ ಕೂಗಿದರೆ ಈಶ್ವರಪ್ಪ ದೇವರಿಗೆ ಕಿವಿ ಕೇಳೊಲ್ವಾ ಎಂಬ ಹೇಳಿಕೆ ಕೊಟ್ರು.ಅದು ಶಿವಮೊಗ್ಗದ ಮುಸ್ಲೀಂರನ್ನ ಕೆರಳಿಸಿತ್ತು. ಆದರೆ, ಎಸ್ಪಿ ಡಿಸಿ ಚಾಣಾಕ್ಯರಿದ್ದ ಕಾರಣ ಗಲಾಟೆ ತಣ್ಣಗಾಯಿತು ಎಂದರು

ರಾತ್ರಿ ಮೂಳೆ ಕಡಿತ, ಬೆಳಗ್ಗೆ ಜಟ್ಕಾ ಕಟ್ 

ಈಶ್ವರಪ್ಪನವರಿಂದಲೇ ಶಿವಮೊಗ್ಗ ಹೊತ್ತಿ ಉರಿದಿತ್ತು. ಇದೇ ಕಾರಣಕ್ಕಾಗಿಯೇ ನಾನು ಹರಕುಬಾಯಿಗೆ ಹೊಲಿಗೆ ಬೀಳಲಿ ಎಂಬ ಫ್ಲೆಕ್ಸ್ ಹಾಕಿಸಿದ್ದೆ ಎಂದಿದ್ದಾರೆ.  ರಾತ್ರಿ ಮುಸ್ಲೀಂಮರ ಮನೆಯಲ್ಲಿ ನಲ್ಲಿ ಮೂಳೆ ತಿಂದು ಬೆಳಿಗ್ಗೆ ಜಟ್ಕಾ ಕಟ್ ಮಾತನಾಡುತ್ತಿದ್ದರು ಎಂದು ಈಶ್ವರಪ್ಪನವರ ವಿರುದ್ಧ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ರು. 

ಹರ್ಷನ ಟ್ರಸ್ಟ್​ಗೆ ಅಧ್ಯಕ್ಷರು ಯಾರು?

ಹುಬ್ಬಳ್ಳಿಯಲ್ಲಿ ಪತ್ರಕರ್ತರು ಹರ್ಷನ ಸಹೋದರಿಗೆ ಶಿವಮೊಗ್ಗದಲ್ಲಿ ಬಿಜೆಪಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕಿತ್ತು ಎಂಬ ಪ್ರಶ್ನಿಸಿದಾಗ ಅವರ ಅಮ್ಮನಿಗೂ ಟಿಕೇಟ್ ಕೊಡ್ತೀವಿ ಎಂದು ಹಗುರವಾಗಿ ಮಾತನಾಡಿದರು. ಆದರೆ ಹರ್ಷ ಸತ್ತಾಗ ರಾಜಕೀಯ ಲಾಭ ಪಡೆದವರು ಯಾರು? ಹರ್ಷನ ಹೆಸರಿನಲ್ಲಿ ಟ್ರಸ್ಟ್ ರಚಿಸಿದಾಗ ಹಣದ ಹೊಳೆಯೇ ಹರಿಯಿತಲ್ಲ ಟ್ರಸ್ಟ್ ಗೆ ಅಧ್ಯಕ್ಷರಾದವರು ಯಾರು ಎಂದು ಆಯನೂರು ಪ್ರಶ್ನಿಸಿದ್ದಾರೆ. 

ಬ್ಯಾರಿ ಮಾಲ್​ ಲೀಜ್​

ತಮ್ಮನ್ನ ಕೊಳಚೆ ನೀರಿಗೆ ಹೋಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ ಆಯನೂರು ಮಂಜುನಾಥ್​  ,  40% ಭ್ರಷ್ಠಾಚಾರ ನಡೆಸಿದವರು, ಬ್ಯಾರಿ ಮಾಲ್ ಗೆ 99 ವರ್ಷ ಲೀಜ್ ನೀಡಲು ಮುಂದಾದವರು ಇವರಿಗೆ ಶುದ್ಧ ಹಸ್ತರಾಗಿ ಕಾಣ್ತಾರಾ ಎಂದು ಪ್ರಶ್ನಿಸಿದ್ದಾರೆ. 




ಬ್ರಾಹ್ಮಣ ನಿಗಮಕ್ಕೆ 100 ಕೋಟಿ !  ಜೆಡಿಎಸ್​ ಇಲ್ಲದೇ ಅಧಿಕಾರವಿಲ್ಲ!  ಶಿವಮೊಗ್ಗದಲ್ಲಿ ಮಾಜಿ ಸಿಎಂ ಸ್ಫೋಟಕ ಭವಿಷ್ಯ! 

ನಿನ್ನೆ ಎನ್​ಇಎಸ್ ಮೈದಾನದಲ್ಲಿ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಈ ಸಲ ತಮ್ಮನ್ನು ಬಿಟ್ಟು ಯಾವ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ನಿನ್ನೆ ಆಡಿದ ಮಾತುಗಳ ಪ್ರಮುಖ ಅಂಶಗಳನ್ನು ನೋಡೋದಾದ್ರೆ 

ನನ್ನ ಬಿಟ್ಟು ಅಧಿಕಾರಕ್ಕೆ ಯಾರು ಬರಲ್ಲ

ಈ ಸಲವೂ ಸ್ಪಷ್ಟ ಬಹುಮತ ಕಾಂಗ್ರೆಸ್ ಗಾಗಲಿ, ಬಿಜೆಪಿಗಾಗಲಿ ಬರುವುದಿಲ್ಲ. ಸಮೀಕ್ಷೆಯನ್ನು ನಂಬಬೇಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಹವಾ ಹೇಗಿದೆ ಎಂಬುದನ್ನೂ ಊಹಿಸುವುದಕ್ಕೂ ಆಗೋದಿಲ್ಲ ಎಂದ ಮಾಜಿ ಸಿಎಂ ನನ್ನನ್ನು ಬಿಟ್ಟು ಈ ಸಲ ರಾಷ್ಟ್ರೀಯ ಪಕ್ಷಗಳು ಅಧಿಕಾರ ಹಿಡಿಯೋದಕ್ಕೆ ಆಗೋದಿಲ್ಲ ಎಂದಿದ್ದಾರೆ. 

 

ಓದಿ : BREAKING NEWS /  ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ 

ಒಕ್ಕಲಿಗ ಲಿಂಗಾಯತರಿಗಾಗಿ ಮುಸ್ಲಿಮ ಮೀಸಲಾತಿ ರದ್ದು

ಒಕ್ಕಲಿಗ ಮತ್ತು ಲಿಂಗಾಯಿತರ ಮತಬ್ಯಾಂಕ್ ಗಾಗಿ ಮುಸ್ಲೀಂ ಮೀಸಲಾತಿಯನ್ನ ತೆಗೆಯುವ ಕೆಲಸವನ್ನು  ಬಿಜೆಪಿ ಮಾಡಿದೆ. ಆದರೆ ಸುಪ್ರೀಂ‌ಕೋರ್ಟ್ ನಲ್ಲಿ ನಾವು ಇದನ್ನ ಜಾರಿಗೆ ತರಲೇ ಇಲ್ಲ ಎಂದು ಅಫಿಡೆವಿಟ್ ಹಾಕಿ ಜನರ ಕಣ್ಣಿಗೆ ಮಣ್ಣು ಎರಚಿವೆ ಅಂತಾ ಟೀಕಿಸಿದ್ರು. 

ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ

ಜೆಡಿಎಸ್​ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಹಣ ಅನುದಾನ ನೀಡುವುದಾಗಿ ಮಾಜಿ ಸಿಎಂ  ಘೋಷಿಸಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಸಮುದಾಯಕ್ಕೆ ಜಾಗ ನೀಡಿದ್ದೆ. 

ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದರೆ ಬಿಜೆಪಿ ನಿಗಮಕ್ಕೆ ಹಣವೇ ಬಿಡುಗಡೆ ಮಾಡಲಿಲ್ಲ. ನಾನು ನಾಳೆ ಸ್ವಂತಬಲದಿಂದ ಸಿಎಂ ಆದರೆ 100 ಕೋಟಿ ಹಣ ತೆಗೆದಿಡುವುದಾಗಿ ಘೋಷಿಸಿದರು.

ಇಬ್ಬರು ಜಿಲ್ಲೆಯಿಂದ ಮಂತ್ರಿಗಳು

ಜೆಡಿಎಸ್ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಾಗಲಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಆ ಇಬ್ಬರು ಯಾರು ಎಂಬುದನ್ನ ಹೇಳದ ಕುಮಾರಸ್ವಾಮಿ,  ಆಯನೂರು ಮಂಜುನಾಥ್ ಮತ್ತು ಶಾರದಾ ಪೂರ್ಯನಾಯ್ಕ್ ಮುಖವನ್ನ ನೋಡಿ ನಕ್ಕರು

 


 

Malenadutoday.com Social media