BREAKING NEWS/ ಒಂದೇ ದಿನ ಶಿವಮೊಗ್ಗದಲ್ಲಿ ಭರ್ಜರಿ ಭೇಟೆ/ ಒಂದುವರೆ ಕೋಟಿ ಕ್ಯಾಶ್​/ ನಾಲ್ಕುವರೆ ಕೋಟಿ ಸೀರೆ ಜಪ್ತಿ! ಲೀಟರ್​ ಗಟ್ಲೇ ಲಿಕ್ಕರ್​, ಕ್ವಿಂಟಾಲ್​ಗಟ್ಲೇ ಅಕ್ಕಿ ಸಿಕ್ಕಿದ್ದೇಗೆ? ಡಿಟೇಲ್ಸ್ ಇಲ್ಲಿದೆ ನೋಡಿ

BREAKING NEWS/ Huge visit in Shivamogga on a single day/ Rs 1.5 crore cash/ 4.5 crore sarees seized details here/ shivamoggalive/ malenadutoday/ karnatakaelection

BREAKING NEWS/ ಒಂದೇ ದಿನ ಶಿವಮೊಗ್ಗದಲ್ಲಿ  ಭರ್ಜರಿ ಭೇಟೆ/ ಒಂದುವರೆ ಕೋಟಿ ಕ್ಯಾಶ್​/ ನಾಲ್ಕುವರೆ ಕೋಟಿ ಸೀರೆ ಜಪ್ತಿ! ಲೀಟರ್​ ಗಟ್ಲೇ ಲಿಕ್ಕರ್​, ಕ್ವಿಂಟಾಲ್​ಗಟ್ಲೇ ಅಕ್ಕಿ ಸಿಕ್ಕಿದ್ದೇಗೆ? ಡಿಟೇಲ್ಸ್ ಇಲ್ಲಿದೆ ನೋಡಿ
BREAKING NEWS/ ಒಂದೇ ದಿನ ಶಿವಮೊಗ್ಗದಲ್ಲಿ ಭರ್ಜರಿ ಭೇಟೆ/ ಒಂದುವರೆ ಕೋಟಿ ಕ್ಯಾಶ್​/ ನಾಲ್ಕುವರೆ ಕೋಟಿ ಸೀರೆ ಜಪ್ತಿ! ಲೀಟರ್​ ಗಟ್ಲೇ ಲಿಕ್ಕರ್​, ಕ್ವಿಂಟಾಲ್​ಗಟ್ಲೇ ಅಕ್ಕಿ ಸಿಕ್ಕಿದ್ದೇಗೆ? ಡಿಟೇಲ್ಸ್ ಇಲ್ಲಿದೆ ನೋಡಿ

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ  ಆರು ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ವಿವಿಧ ವಸ್ತುಗಳನ್ನು ಸೀಜ್ ಮಾಡಿದ್ದಾರೆ. 

ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ನಾಲ್ಕುವರೆ ಕೋಟಿ ಮೌಲ್ಯದ ಸೀರೆ ವಶ

ದಿನಾಂಕಃ 31-03-2023 ರಂದು ಅಂದರೆ ನಿನ್ನೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು ಮೌಲ್ಯ ರೂ 4,50,00,000/- ಗಳ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಶಿವಮೊಗ್ಗದ ಕೆಆರ್​ ಪುರಂ ರಸ್ತೆಯಲ್ಲಿರುವ ಗೋಡೌನ್​ನಲ್ಲಿ ಇಷ್ಟೊಂದು ಪ್ರಮಾಣದ ಸೀರೆಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎನ್ನಲಾಗಿದ್ದು, ಪೊಲೀಸರು ತಮಗೆ ಬಂದ ಮಾಹಿತಿ ಅನ್ವಯ ರೇಡ್ ನಡೆಸಿ ನಾಲ್ಕುವರೆ ಕೋಟಿ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಇಷ್ಟು ದೊಡ್ಡ ಮಟ್ಟದ ಸಂಗ್ರಹವನ್ನು ದಾಖಲೆ ಇಲ್ಲದೆ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಅರಕೆರೆ ಚೆಕ್​ಪೋಸ್ಟ್​ನಲ್ಲಿ 1.40 ಕೋಟಿ ರೂಪಾಯಿ ಸೀಜ್​

ಇನ್ನೂ  ದಿನಾಂಕಃ 31-03-2023  ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ರೂ 1,40,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಎಟಿಎಂಗೆ ಹಣ ಸಾಗಿಸುವ ವಾಹನದಲ್ಲಿ ಸಾಗಿಸಲಾಗ್ತಿದ್ದ ಹಣದ ಬಗ್ಗೆ ಅನುಮಾನಗೊಂಡ ಪೊಲೀಸರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೇ ದಾಖಲೆ ಸಮರ್ಪಕವಾಗಿರದ ಕಾರಣ ವಾಹನವನ್ನು  ಹಾಗೂ ಹಣವನ್ನು ಸೀಜ್​ ಮಾಡಲಾಗಿದೆ. 

ಸಾಗರ ಗ್ರಾಮಾಂತರ ಪೊಲೀಸರಿಂದ 20 ಲಕ್ಷ ರೂಪಾಯಿ ಜಪ್ತಿ

ಇನ್ನೊಂದೆಡೆ, ದಿನಾಂಕಃ 31-03-2023  ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ ರೂ 20,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಚೂರಿಕಟ್ಟೆಯ ಚೆಕ್​ಪೋಸ್ಟ್​ನಲ್ಲಿ ಟಾಟಾ  ಇಂಡಿಗೋ ವಾಹನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ಸೀಜ್ ಮಾಡಲಾಗಿದೆ. 

26 ಕ್ವಿಂಟಾಲ್​ ಅಕ್ಕಿ ಜಪ್ತಿ 

ದಿನಾಂಕಃ 31-03-2023 ರಂದು ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಒಟ್ಟು 100 ಬ್ಯಾಗ್ ಗಳಲ್ಲಿದ್ದ, ಅಂದಾಜು 1,56,000/- ರೂ ಮೌಲ್ಯದ 26 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಚೆಕ್​ಪೋಸ್ಟ್​ ಗಳಿಗೆ ಎಸ್​​​ಪಿ ಮಿಥುನ್​ ಕುಮಾರ್​ ದಿಢೀರ್ ಭೇಟಿ 

ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ Static Surveillance Team ( ಚೆಕ್ ಪೋಸ್ಟ್ ) ಗಳನ್ನು ತೆರೆದಿದ್ದು, ಈ ಚೆಕ್​ ಪೋಸ್ಟ್​ಗಳಿಗೆ ಎಸ್​ಪಿ ಮಿಥುನ್ ಕುಮಾರ್ ದಿಢೀರ್​ ಭೇಟಿಕೊಡುತ್ತಿದ್ದಾರೆ.

ಈ ವೇಳೆ  ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡುತ್ತಿರುವ ಅವರು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನೂ ಎಸ್​ಪಿಯವರ ಜೊತೆಯಲ್ಲಿ,  ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರುಗಳು ಸಹಾ ತಮ್ಮ ವ್ಯಾಪ್ತಿಯ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ, ವಾಹನಗಳ ತಪಾಸಣೆ ಮಾಡಿ ಪರಿಶೀಲನೆ ನಡೆಸ್ತಿದ್ದಾರೆ. 

ಮೂರು ಲಕ್ಷ ಮೌಲ್ಯದ ಲಿಕ್ಕರ್​ ವಶ

ದೇವಬಾಳ-ಯಡವಾಲದ ಕೆರೆ ಏರಿ ರಸ್ತೆಯಲ್ಲಿ ವ್ಯಾಗನಾರ್​ ಕಾರ್ ನಲ್ಲಿ ವಿವಿಧ ಬ್ರಾಂಡ್ ನ 20.790 ಲೀಟರ್ ಮಧ್ಯ ಮತ್ತು 56.270 ಲೀಟರ್ ಬಿಯರ್ ಹೊತ್ತೊಯ್ಯುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ದಾಳಿ ನಡೆಸಿದ್ದಾರೆ.  ಅಂದಾಜು 3,21,939 ರೂಪಾಯಿ ಮೌಲ್ಯದ ಲಿಕ್ಕರ್​ನ್ನು ಜಪ್ತಿ ಮಾಡಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. 

Read/ ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್  ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ 



read/ ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

 

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

 

Read/ BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

 

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

 

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru  #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga Shivamogga Police Raid, Tunganagar Police, Doddapet Police, Sagar Rural Police, Churikatte, Saree Seized, Arakere Check Post, K.R. Puram Road, Election Commission personnel, Seizure at Check Post, Check Post, Election Code of Conduct, Violation of Model Code of Conduct, Shivamogga Local News,ಶಿವಮೊಗ್ಗ ಪೊಲೀಸ್ ರೇಡ್, ತುಂಗಾನಗರ ಪೊಲೀಸ್ , ದೊಡ್ಡಪೇಟೆ ಪೊಲೀಸ್, ಸಾಗರ ಗ್ರಾಮಾಂತರ ಪೊಲೀಸ್​, ಚೂರಿಕಟ್ಟೆ, ಸೀರೆ ವಶ, ಅರಕೆರೆ ಚೆಕ್​ಪೋಸ್ಟ್, ಕೆ.ಆರ್​.ಪುರಂ ರಸ್ತೆ, ಚುನಾವಣಾ ಆಯೋಗದ ಸಿಬ್ಬಂದಿ, ಚೆಕ್​ ಪೋಸ್ಟ್​ನಲ್ಲಿ ಜಪ್ತಿ, ಚೆಕ್​ಪೋಸ್ಟ್​, ಚುನಾವಣಾ ನೀತಿ ಸಂಹಿತೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ , ಶಿವಮೊಗ್ಗ ಲೋಕಲ್ ನ್ಯೂಸ್​