KARNATAKA NEWS/ ONLINE / Malenadu today/ Jul 20, 2023 SHIVAMOGGA NEWS
ಶಿವಮೊಗ್ಗ/ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕ್ರೈಸ್ತ ಸಮುದಾಯದಲ್ಲಿ ಫಾದರ್ ರೊಬ್ಬರ ಮೇಲೆ ಪೋಕ್ಸೋ ಕಾಯ್ದೆ ಅಡಿ ಕೇಸು ದಾಖಲಾಗಿದೆ. ಕಾಲೇಜೊಂದರ ಪ್ರಾಂಶುಪಾಲರು ಸಹ ಆಗಿರುವ ಈ ಪಾಧರ್ ಪಾಠ ಕೂಡ ಮಾಡುತ್ತಿದ್ದರು. ಇದೀಗ ಅವರ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಈ ಸಂಬಂಧ ಶಿವಮೊಗ್ಗದ ಪೊಲೀಸ್ ಸ್ಟೇಷನ್ ಒಂದರಲ್ಲಿ ಕೇಸ್ ದಾಖಲಾಗಿದ್ದು, ನೊಂದವರು ನೀಡಿದ ದೂರಿನಡಿಯಲ್ಲಿ ಎಫ್ಐಆರ್ ಆಗಿದೆ. ಪ್ರಕರಣದಲ್ಲಿನ ಸಾಕಷ್ಟು ವಿಚಾರಗಳು ಪೊಲೀಸರ ಗಮನಕ್ಕೂ ಬಂದಿದ್ದು, ಕೇಸ್ ದಾಖಲಾಗುವುದಕ್ಕೂ ಮೊದಲು ನಡೆದಿರುವ ಘಟನೆಗಳನ್ನು ಇಲಾಖೆಯ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದು , ಪ್ರಕರಣ ವಿಚಾರಣ ಹಂತದಲ್ಲಿದೆ.
ಬಿ.ಎಸ್. ಯಡಿಯೂರಪ್ಪರಿಗೆ ಸಿಗಲಿದೆ ಗೌರವ ಪದವಿ! ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ಮಾಜಿ ಸಿಎಂಗೆ ವಿಶೇಷ ಸನ್ಮಾನ!
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸದ್ಯದಲ್ಲಿಯೇ ಡಾ. ಬಿಎಸ್ ಯಡಿಯೂರಪ್ಪ ಎಂದು ಕರೆಸಿಕೊಳ್ಳಲಿದ್ದಾರೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವ ನೀಡಲಾಗುತ್ತಿದೆ. ಈ ಸಂಬಂಧ ಇವತ್ತು ನಡೆದ ಸುದ್ದಿಗೋಷ್ಟಿಯಲ್ಲಿ ವಿವಿಯ ಕುಲಪತಿ ಡಾ.ಜಗದೀಶ್ ಮಾಹಿತಿ ನೀಡಿದರು.
ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಥಾವರ್ ಚಂದ್ ಗೆಲ್ಲೋಟ್ ಪಾಲ್ಗೊಂಡು ಪದವಿ ಪ್ರಧಾನ ಮಾಡಲಿದ್ದಾರೆ. ಇನ್ನೂ ಕೃಷಿ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾಗಿರುವ . ಎಸ್. ಚೆಲುವರಾಯಸ್ವಾಮಿ ಯವರು ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು ರಾಜ್ಯ ಸಭಾಸದಸ್ಯರು, ಧರ್ಮಾಧಿಕಾರಿಗಳು ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ಡಾ. ವಿರೇಂದ್ರ ಹೆಗ್ಗಡೆಯವರು ಎಂಟನೇ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.
Whatsapp ನಲ್ಲಿ ಡೆತ್ ನೋಟ್ ಕಳುಹಿಸಿ NPS ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ MISSING
ಶಿವಮೊಗ್ಗ ನಗರದ ಐಬಿ ಸರ್ಕಲ್ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್ಗೆ ಕಾರು ಡಿಕ್ಕಿ
