ಒಂದೆ ಕೆಲಸಕ್ಕೆ ಕೈ ಜೋಡಿಸಿದ ಮೇಸ್ರ್ರಿ, ಡ್ರೈವರ್ ,ಎಲೆಕ್ಟ್ರಿಷಿಯನ್ ಅರೆಸ್ಟ್ ! ನಡೆದಿದ್ದೇನು ಗೊತ್ತಾ?

Hosnagar police have cracked a case of areca nut theft ಹೊಸನಗರ ಪೊಲೀಸರು ಅಡಕೆ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ

ಒಂದೆ ಕೆಲಸಕ್ಕೆ ಕೈ ಜೋಡಿಸಿದ ಮೇಸ್ರ್ರಿ, ಡ್ರೈವರ್ ,ಎಲೆಕ್ಟ್ರಿಷಿಯನ್  ಅರೆಸ್ಟ್ ! ನಡೆದಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |  ಶಿವಮೊಗ್ಗದಲ್ಲಿ ಕೊಯ್ಲು ಸಮಯದಲ್ಲಿ ಅಡಿಕೆಯನ್ನು ಕಾಯುವುದೇ ದೊಡ್ಡ ಹರಸಾಹಸದ ಕೆಲಸ. ಯಾವ ಮಾಯ್ಕ್​ದಲ್ಲಿ ಯಾರು ಅಡಿಕೆ ಕದ್ದೊಯ್ತಾರೆ ಎಂದು ಹೇಳುವುದ ಕಷ್ಟ. ಇಂತಹದ್ದೊಂದು ಪ್ರಕರಣ ಹೊಸನಗರ ತಾಲ್ಲೂಕಿನಲ್ಲಿ ನಡೆದಿತ್ತು. 

ಕಳದೆ ಸೆಪ್ಟೆಂಬರ್​  21 ರಂದು ಹೊಸನಗರ ಟೌನ್ ನ ಐ.ಬಿ. ರಸ್ತೆಯಲ್ಲಿರುವ ಸುಮೇಧಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿದ್ಯಾಸಂಘ (ರಿ) ಗೋದಾಮಿನಲ್ಲಿ ಸಂಗ್ರಹಿಸಿದ್ದ 02 ಕ್ವಿಂಟಾಲ್ 72 ಕೆ.ಜಿ ಅಡಿಕೆಯನ್ನು ಕಳ್ಳತನ ಮಾಡಲಾಗಿತ್ತು. 

READ : ನಿಮ್ಮದೇ ತೋಟದಲ್ಲಿ ನಡೆಯುತ್ತೆ ಈ ಕೆಲಸ! ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ ನೀಡ್ತಿದೆ ತೀರ್ಥಹಳ್ಳಿ ಪ್ರಕರಣ

ಹೊಸನಗರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು ಹೊಸನಗರ ವೃತ್ತ ನಿರೀಕ್ಷಕರಾದ  ಗುರಣ್ಣ ಹಬ್ಬಾಸಿ ಅವರ ಮಾನ ದರ್ಶನದಲ್ಲಿ, ಹೊಸನಗರ ಠಾಣೆಯ ಪಿ.ಎಸ್.ಐ ಶಿವಾನಂದ ಪೈ 6 ರವರ ನೇತೃತ್ವದಲ್ಲಿ ಎಎಸ್‌ ಐ ಸತೀಶ್‌ ರಾಜ್‌, ಸಿಬ್ಬಂದಿಯವರಾದ ಸುನಿಲ್, ರಂಜಿತ್ ಕುಮಾರ್, ಗಂಗಪ್ಪ, ಬಟೋಲಿ, ಸಂದೀಪ, ಮಹೇಶ ತಂಡ ಪ್ರಕರಣದ ತನಿಖೆಯನ್ನ ಕೈಗೊಂಡಿತ್ತು. ಇದೀಗ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. 

READ : ಎಸ್ಟೇಟ್​ ಸೂಪರ್​ವೈಸರ್ & ರೈಟರ್​ರಿಂದ ಸಾಗುವಾನಿ ನಾಟಾ ಕಳ್ಳತನ | ಅರಣ್ಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಆರೋಪಿಗಳು ಆರೋಪಿಗಳು

1) ರವಿರಾಜ ಎಸ್ ಬಿನ್ ಸತ್ಯನಾರಾಯಣ, 32 ವರ್ಷ , ಡ್ರೈವಿಂಗ್ ಕೆಲಸ, ವಾಸ: ಸಾಗರ ರಸ್ತೆ, ಮಾವಿನಕೊಪ್ಪ ಹೊಸನಗರ ತಾಲ್ಲೂಕ್ 

2) ನಾಗರಾಜ.ಪಿ. ಬಿನ್ ಲೇಟ್ ಪುಟ್ಟಯ್ಯಾಚಾರಿ, 31 ವರ್ಷ,  ಎಲೆಕ್ನಿಕಲ್ ಕೆಲಸ, ವಾಸ: ಗ್ಯಾಸ್‌ ಆಫೀಸ್ ಹತ್ತಿರ, ಸಾಗರ ರಸ್ತೆ, ಹೊಸನಗರ ಟೌನ್‌, ಹೊಸನಗರ ತಾಲ್ಲೂಕು 

3) ರಾಜೇಶ ಬಿನ್ ಲೇಟ್ ವಸಂತ, 40 ವರ್ಷ,  ಗಾರೆ ಕೆಲಸ, ವಾಸ: ಎ.ಪಿ.ಎಂ.ಸಿ ಮುಂಭಾಗ, ಮಾವಿನಕೊಪ್ಪ, ಹೊಸನಗರ ತಾಲೂಕು

ಮೂವರನ್ನ ಬಂಧಿಸಿರುವ ಪೊಲೀಸರು  ಆರೋಪಿತರಿಂದ ಕಳ್ಳತನ ಮಾಡಿದ್ದ 133,000/- ರೂ. ಮೌಲ್ಯದ 02 ಕ್ವಿಂಟಾಲ್ 72 ಕೆ.ಜಿ ಅಡಿಕೆಯನ್ನು ಮತ್ತು ಕಳ್ಳತನ ಮಾಡಲು ಬಳಸಿದ 01ಬೈಕ್​ನ್ನ ಜಪ್ತು ಮಾಡಿದ್ದಾರೆ