ಕಾಡಿನ ಶಿಕಾರಿ | ಕೋಣ ಕಡಿದು ಮಾಂಸ ಹಂಚಿದ ಆರೋಪಿ ಅರೆಸ್ಟ್! ಅಪರೂಪದ ಕಾರ್ಯಾಚರಣೆ

Forest department has conducted operations in Soraba taluk ಸೊರಬ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ

ಕಾಡಿನ ಶಿಕಾರಿ | ಕೋಣ ಕಡಿದು ಮಾಂಸ ಹಂಚಿದ ಆರೋಪಿ ಅರೆಸ್ಟ್! ಅಪರೂಪದ ಕಾರ್ಯಾಚರಣೆ

KARNATAKA NEWS/ ONLINE / Malenadu today/ Nov 1, 2023 SHIVAMOGGA NEWS

SORABA | ಶಿವಮೊಗ್ಗ ಜಿಲ್ಲೆ  ಸೊರಬ:ತಾಲೂಕಿನ ಉಳವಿಗ್ರಾಮದ ಮನೆಯೊಂದರಲ್ಲಿ  ಕಾಡುಕೋಣದ ಮಾಂಸ ಸಂಗ್ರಹಿಸಿದ ಆರೋಪ ಕೇಳಿಬಂದಿದ್ದು, ಮಾಲು ಸಮೇತ  ಸೊರಬ ವಲಯ ಅರಣ್ಯಾಧಿಕಾರಿಗಳು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

ಮಲೆನಾಡಿ ಕಾಟಿ ಶಿಕಾರಿಯ ಬಗ್ಗೆ ಈ ಹಿಂದೆಯೇ ಮಲೆನಾಡು ಟುಡೆ ಸುದ್ದಿ ಪ್ರಸಾರ ಮಾಡಿತ್ತು. ಅರಣ್ಯ ಇಲಾಖೆಯ ಅಂತಾರಾಳದ ಮೌನದಿಂದಾಗಿ ಪ್ರಕರಣಗಳು ಹೊರಕ್ಕೆ ಬಂದಿರಲಿಲ್ಲ. ಇದೀಗ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅಂಗಾಂಗಗಳ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಾಡು ಕೋಣದ ಮಾಂಸ ಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. 

READ: JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2

ಉಳವಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡು ಕೋಣವನ್ನು ಬೇಟೆಯಾಡಿ, ಮಾಂಸವನ್ನು ಸಂಗ್ರಹಿಸಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಪ್ರಕರಣ ಸಂಬಂಧ ಗ್ರಾಮದ ವಿವಿಧೆಡೆ ಸುಮಾರು 23 ಕೆಜಿ ಕಾಡುಕೋಣದ ಮಾಂಸ ವಶಕ್ಕೆ ಪಡೆದಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಉಳವಿ ಗ್ರಾಮದ ಇಬ್ರಾಹಿಂ ಸಾಬ್ ಮುನೀರ್‌ಸಾಬ್‌ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ಆರೋಪಿಗಳಾದ ತಸ್ವಿರ್‌ಅಹ್ಮದ್

 ಸೈಫುಲ್ಲಾ ನವೀದ್ ಶೇಖ್ ಅಹ್ಮದ್, ಫಾರೂಕ್ ಇಸ್ಮಾಯಿಲ್ ಎಂಬವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ.

ಸಾಗರದ ಡಿಸಿಎಫ್ ಸಂತೋಷ ಕೆಂಚಪ್ಪನವರ ಹಾಗೂ ಸೊರಬ ಎಸಿಎಫ್ ಸಿ.ಕೆ. ಯೋಗೀಶ್ ಮಾರ್ಗದರ್ಶನದಲ್ಲಿ ಸೊರಬ ವಲಯದ ವಲಯ ಅರಣ್ಯಾಧಿಕಾರಿ ಜಾವೇದ್ ಭಾಷಾ ಅಂಗಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ರೈಡ್​ ನಲ್ಲಿ ಉಪ ವಲಯ ಅರಣ್ಯಧಿಕಾರಿಗಳಾದ ಮುತ್ತಣ್ಣ, ರಾಮಪ್ಪ, ಮೋಹನ್‌, ಯೋಗರಾಜ್, ಪರಶುರಾಮ್, ಶರಣಪ್ಪ ಹಾಗೂ ಅರಣ್ಯ ರಕ್ಷಕರಾದ ಮಂಜು ದೇವರಾಜ್, ಕಸ್ತೂರಮ್ಮ, ಆನಂದ್, ಹರಿ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.