ಶಿವಮೊಗ್ಗದ 5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಹೋಗುತ್ತೆ ಈ ಬಸ್​! ಟೈಮಿಂಗ್ಸ್​ ವಿವರ ಇಲ್ಲಿದೆ

This bus goes to Bangalore through 5 taluks of Shimoga! ಶಿವಮೊಗ್ಗದ 5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಹೋಗುತ್ತೆ ಈ ಬಸ್​!

ಶಿವಮೊಗ್ಗದ  5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ  ಹೋಗುತ್ತೆ ಈ ಬಸ್​! ಟೈಮಿಂಗ್ಸ್​ ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga  |  ಶಿವಮೊಗ್ಗ ಜನರಿಗೆ ಕೆಎಸ್​​ಆರ್​ಟಿಸಿ ಮತ್ತೊಂದು ಗುಡ್ ನ್ಯೂಸ್​ ಕೊಟ್ಟಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ಬಸ್​ ಸೌಲಭ್ಯವನ್ನು ಕಲ್ಪಿಸಿದ್ದು, ಈ ಬಗ್ಗೆ ಮಲೆನಾಡು ಟುಡೆ ಈಗಾಗಲೇ ವರದಿ ಮಾಡಿತ್ತು. ಇದೀಗ ಸ್ಪೆಷಲ್​ ಬಸ್​ನ ಟೈಮಿಂಗ್ಸ್​ ಅಥವಾ ವೇಳಾಪಟ್ಟಿಯನ್ನು ನೀಡಿದೆ. 

 

ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ ಬಸ್ ಕಾರ್ಯಾಚರಣೆ

ಕೆಎಸ್‍ಆರ್‍ಟಿಸಿ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ-ಸೊರಬ-ಬೆಂಗಳೂರು ಮಾರ್ಗದಲ್ಲಿ(ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ನ.5 ರಿಂದ ನೂತನವಾಗಿ 2 ನಾನ್ ಎಸಿ ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

READ : ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ,ಬೆಂಗಳೂರು ಪಲ್ಲಕ್ಕಿ ಸೇವೆ ಆರಂಭ! ಏನಿದು?

ಈ ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ವೆಬ್‍ಸೈಟ್ ವಿಳಾಸ www.ksrtc.in ಸದರಿ ಸಾರಿಗೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಲ್ಳಬಹುದು.

ವೇಳಾಪಟ್ಟಿ : 

ಸಾಗರ-ಸೊರಬ-ಬೆಂಗಳೂರು ಮಾರ್ಗ- ಸಾಗರ ಹೊರಡುವ ಸಮಯ ರಾತ್ರಿ 9 ಕ್ಕೆ, ಸೊರಬ ರಾತ್ರಿ 10, ಶಿಕಾರಿಪುರ ರಾತ್ರಿ 11, ಶಿವಮೊಗ್ಗ ರಾತ್ರಿ 12, ಭದ್ರಾವತಿ ರಾತ್ರಿ 12.30 ಬೆಂಗಳೂರು ಬೆಳಿಗ್ಗೆ 6.30 ಕ್ಕೆ ತಲುಪುವುದು. 

ಬೆಂಗಳೂರು-ಸೊರಬ-ಸಾಗರ ಮಾರ್ಗ- ಬೆಂಗಳೂರು ಹೊರಡುವ ಸಮಯ ರಾತ್ರಿ 9.25, ಭದ್ರಾವತಿ ರಾತ್ರಿ 1.50, ಶಿವಮೊಗ್ಗ ರಾತ್ರಿ 2.20, ಶಿಕಾರಿಪುರ ಬೆಳಗಿನ ಜಾವ 3.20, ಸೊರಬ 5.40, ಸಾಗರವನ್ನು ಬೆಳಿಗ್ಗೆ 6.40 ತಲುಪುವುದು ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.