ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ,ಬೆಂಗಳೂರು ಪಲ್ಲಕ್ಕಿ ಸೇವೆ ಆರಂಭ! ಏನಿದು?

Sagar, Soraba, Shikaripura, Shimoga, Bangalore pallaki bus service has started. ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ,ಬೆಂಗಳೂರು ಪಲ್ಲಕ್ಕಿ (pallaki) ಬಸ್​ ಸೇವೆ ಆರಂಭವಾಗಿದೆ

ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ,ಬೆಂಗಳೂರು ಪಲ್ಲಕ್ಕಿ ಸೇವೆ ಆರಂಭ! ಏನಿದು?

KARNATAKA NEWS/ ONLINE / Malenadu today/ Nov 6, 2023 SHIVAMOGGA NEWS

Shivamogga | ಶಿವಮೊಗ್ಗ ಜಿಲ್ಲೆಯಿಂದ ಬೆಂಗಳೂರು ಜಿಲ್ಲೆಗೆ ಸಾಕಷ್ಟು ಬಸ್​ಗಳಿವೆ. ಈ ಮಧ್ಯೆ ಶಿವಮೊಗ್ಗ-ಬೆಂಗಳೂರು ಮಾರ್ಗಕ್ಕೆ ಸಾಗರ ತಾಲ್ಲೂಕಿನಿಂದ ವಯಾ ಸೊರಬ , ಶಿಕಾರಿಪುರದಿಂದ ವಿಶೇಷ ಬಸ್​ ಸೌಲಭ್ಯ ಒದಗಿಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು. 

ಇದಕ್ಕೆ ಪೂರಕವಾಗಿ ಇದೀಗ ಕೆಎಸ್​ಆರ್​​ಟಿಸಿ ವಿಶೇಷ ಪಲ್ಲಕಿ ಬಸ್​ಗಳ ಸಂಚಾರಕ್ಕೆ ಇಂದಿನಿಂದ ಚಾಲನೆ ನೀಡಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೊರಬ ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ನೂತನ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ 'ಪಲ್ಲಕ್ಕಿ' ಗೆ ಹಸಿರು ನಿಶಾನೆ ತೋರಿಸಿದರು. 

READ : ಇದು ತೀರ್ಥಹಳ್ಳಿ ತೂಗುಸೇತುವೆಯಲ್ಲ! ಹಾಗಾದರೆ ಎಲ್ಲಿಯದು? ಶಿವಮೊಗ್ಗದಲ್ಲಿ ಈ ಸ್ಪಾಟ್ ಎಲ್ಲಿದೆ ಗೆಸ್ ಮಾಡಿ!

ಈ ಬಸ್​ ಸಾಗರದಿಂದ ಹೊರಟು ಸೊರಬ ಮೂಲಕ ಶಿಕಾರಿಪುರದ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದು ಇಲ್ಲಿಂದ ಬೆಂಗಳೂರಿಗೆ ತೆರಳಲಿದೆ. ಈ ಬಸ್​ ಸಂಚಾರದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ .