ಗಮನಿಸಿ, ಶಿವರಾತ್ರಿ ಪ್ರಯುಕ್ತ ಸರ್ಕಾರದ ಈ ಆದೇಶದ ಬಗ್ಗೆ ಗಮನವಿರಲಿ, ಏನದು.

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಗಮನಿಸಿ, ಶಿವರಾತ್ರಿ ಪ್ರಯುಕ್ತ ಸರ್ಕಾರದ ಈ ಆದೇಶದ ಬಗ್ಗೆ ಗಮನವಿರಲಿ, ಏನದು.

ಫೆಬ್ರವರಿ 15 ರಂದು ಶಿವರಾತ್ರಿ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗಳು ಕೆಲವೊಂದು ನಿಯಮಗಳನ್ನು ಹೊರಡಿಸಿದ್ದು, ಸಾರ್ವಜನಿರು ಈ ಕುರಿತು ಗಮನ ಹರಿಸಬೇಕೆಂದು ಮನವಿ ಮಾಡಿವೆ.  ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗಳು  ಹೊರಡಿಸಿರುವ ನಿಯಮಗಳು ಈ ಕೆಳಗಿನಂತಿವೆ.

ಶಿವಮೊಗ್ಗ, ಸಾಗರ, ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಕೆ ದರ ಪಟ್ಟಿ ಇಲ್ಲಿದೆ

ಶಿವಮೊಗ್ಗ ತೀರ್ಥಹಳ್ಳಿ ಮಾರ್ಗ ಬದಲಾವಣೆ  

ಶಿವಮೊಗ್ಗ ನಗರದ ಹರಕೆರೆ ಶ್ರೀ ರಾಮೇಶ್ವರ ಸ್ವಾಮಿ ಮತ್ತು ಸೂಳೆಬೈಲ್ ಬೆಟ್ಟದ ಮಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಹೋಗುವುದರಿಂದ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಫೆ. 15 ರ ಬೆಳಗ್ಗಿನ 4.00 ರಿಂದ ಫೆ. 16 ರ ಬೆಳಗ್ಗಿನ ಜಾವದವರೆಗೆ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ನೀಡಿದ್ದಾರೆ.

ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್.ಹೆಚ್. ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು. ಹಾಗೂ ತೀರ್ಥಹಳ್ಳಿಯಿಂದ ಬರುವ ಎಲ್ಲಾ ವಾಹನಗಳು ಎನ್.ಹೆಚ್.ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನ ಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರುವಂತೆ ಆದೇಶದಲ್ಲಿ ತಿಳಿಸಿರುತ್ತಾರೆ.

ಮಾಂಸ ಮಾರಾಟ ನಿಷೇಧ

ಶಿವಮೊಗ್ಗ ಫೆ.15 ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಫೆ.15 ರಂದು ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

Shivamogga Shivaratri Rules

Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Shivamogga Shivaratri Rules
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor