ಗ್ಯಾಸ್ ಇ–ಕೆವೈಸಿ ಹೆಸರಲ್ಲಿ ವಂಚನೆ : ಅಪರಿಚಿತ ಲಿಂಕ್ ಕ್ಲಿಕ್ ಮಾಡದಂತೆ ಎಚ್ಚರಿಕೆ

ಹಂಚಿಕೊಳ್ಳಿ
WhatsApp Facebook X Telegram
ಗ್ಯಾಸ್ ಇ–ಕೆವೈಸಿ ವಂಚನೆಯ ಕುರಿತು ಜಾಗೃತಿ ಮೂಡಿಸುವ ಎಐ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಎಲ್‌ಪಿಜಿ ಗ್ಯಾಸ್ ಸಂಪರ್ಕದ ಇ–ಕೆವೈಸಿ (LPG Gas e-KYC) ನವೀಕರಣದ ಹೆಸರಿನಲ್ಲಿ ಇದೀಗ ಸೈಬರ್​ ವಂಚಕ ಲಿಂಕ್​ ಗಳು ಮೊಬೈಲ್​ಗೆ ಬರುತ್ತಿವೆ. ಹೀಗೆ ಬರುವ ಅಜ್ಞಾತ ಲಿಂಕ್​ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು.. ಏಕೆಂದರೆ ಇದು ನಿಮ್ಮ ಮೊಬೈಲ್​ನಲ್ಲಿನ ಡೇಟಾಗಳಗೆ ನಿಜಕ್ಕೂ ಅಪಾಯಕಾರಿ. ಈ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಜಾಗೃತಿಯ ಫೋಸ್ಟರ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಜಾಗೃತಿ ಮೂಡಿಸುತ್ತಿದೆ.

ಅಲ್ಲದೆ ಪೊಲೀಸ್​ ಇಲಾಖೆ, ಈ ಮೂಲಕ ನಡೆಯಬಹುದಾದ ಆನ್‌ಲೈನ್ ವಂಚನೆಗಳ ಎಚ್ಚರಿಕೆ ನೀಡುತ್ತಿದೆ. ಅಪರಿಚಿತರು ಕಳುಹಿಸುವ ಇ–ಕೆವೈಸಿ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು ಮತ್ತು ಯಾವುದೇ ವೈಯಕ್ತಿಕ ಅಥವಾ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದೆ.

ಇ–ಕೆವೈಸಿ ಮೂಲಕ ಹೇಗೆಲ್ಲಾ ವಂಚಿಸಬಹುದು

  1. ಇ–ಕೆವೈಸಿ ನವೀಕರಿಸದಿದ್ದರೆ ಎಲ್‌ಪಿಜಿ ಗ್ಯಾಸ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ ಎಂದು ವಂಚಕರು ಫೋನ್​ ಕಾಲ್​ ಮಾಡಬಹುದು
  2. ಎಸ್‌ಎಂಎಸ್ ಅಥವಾ ವಾಟ್ಸ್‌ಆ್ಯಪ್ ಮೂಲಕವೂ ಸಂಪರ್ಕಿಸಿ ಗ್ಯಾಸ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುವ ಸಾಧ್ಯತೆಯಿದೆ.
  3. ಅಥವಾ ಇ-ಕೆವೈಸಿಗಾಗಿ ಒಟಿಪಿ ಸೇರಿದಂಥೆ ನಿಮ್ಮ ​ ಇತರೇ ಖಾಸಗಿ ಮಾಹಿತಿಗಳನ್ನು ಕೇಳುಬಹುದು.
  4. ಹಾಗಾಗಿ, ಇ-ಕೆವೈಸಿ ಮಾಡದಿದ್ದರೆ ಗ್ಯಾಸ್​ ಸಿಗುವುದಿಲ್ಲ ಮತ್ತು ಅದಕ್ಕಾಗಿ ಹೀಗೆ ಮಾಡಿ, ಲಿಂಕ್ ಕ್ಲಿಕ್ ಮಾಡಿ ಎಂಬಂತಹ ವದಂತಿಗಳನ್ನು ನಂಬಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಕಳುಹಿಸುವ ಗ್ಯಾಸ್ ಇ–ಕೆವೈಸಿ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್‌ಗಳ ಮೂಲಕ ಯಾವುದೇ ಅಪ್ಲಿಕೇಷನ್‌ಗಳನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಾರದು

ಶಿವಮೊಗ್ಗ ಪೊಲೀಸ್ ಇಲಾಖೆ

ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ನೆಪದಲ್ಲಿ ವಂಚಕರು ಒಟಿಪಿ, ಆಧಾರ್ ಸಂಖ್ಯೆ, ಯುಪಿಐ ಪಿನ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಕೇಳಬಹುದು. ಈ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಮಾಹಿತಿ ಹಂಚಿಕೊಂಡರೆ ಬ್ಯಾಂಕ್ ಖಾತೆ ಮತ್ತು ಬ್ಯಾಂಕಿಂಗ್ ಮಾಹಿತಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಲ್‌ಪಿಜಿ ಗ್ಯಾಸ್ ಸಂಪರ್ಕದ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾದ ಗ್ರಾಹಕರು ತಮಗೆ ಗ್ಯಾಸ್ ಪೂರೈಸುವ ಅಧಿಕೃತ ಎಲ್‌ಪಿಜಿ ವಿತರಕರನ್ನು ನೇರವಾಗಿ ಭೇಟಿ ಮಾಡಬೇಕು. ಅಧಿಕೃತ ವಿತರಕರ ಮೂಲಕವೇ ಇ–ಕೆವೈಸಿ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸಬೇಕು

ಇಂತಹ ಸೈಬರ್ ವಂಚನೆಗೆ ಒಳಗಾದರೆ ಅಥವಾ ಅನುಮಾನಾಸ್ಪದ ಕರೆ, ಸಂದೇಶ ಮತ್ತು ಲಿಂಕ್‌ಗಳು ಬಂದರೆ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಮಾಹಿತಿ ನೀಡಬಹುದು. ತುರ್ತು ನೆರವಿಗಾಗಿ 112 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಜಾಗೃತಿ ಪೋಸ್ಟರ್‌ನಲ್ಲಿ ತಿಳಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor