ರೈಲು ಪ್ರಯಾಣಿಕರ ಗಮನಕ್ಕೆ: ಮೈಸೂರು–ಶಿವಮೊಗ್ಗ ಸೇರಿ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ; 8 ದಿನಗಳ ಕಾಲ ಬಳ್ಳಾರಿ–ದಾವಣಗೆರೆ ರೈಲು ಭಾಗಶಃ ರದ್ದು

ಹಂಚಿಕೊಳ್ಳಿ
WhatsApp Facebook X Telegram
SWR Train Trains Cancelled Birur-Talguppa Railway Train Servis ChangedChanged Shivamogga-Talaguppa Train train plans affected by the cancellations Marikamba Jatre Special Train Railway Halt Extended Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.
SWR Train Trains Cancelled Birur-Talguppa Railway Train Servis Changed Changed Shivamogga-Talaguppa Train Marikamba Jatre Special Train Railway Halt Extended Special Train to Sagara Marikamba Jathre from Feb 3 Shivamogga Train Timings Change 2026 Dasara Special Trains

ಸುದ್ದಿಯ ಸ್ಥಳ: Davanagere, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರೈಲ್ವೆ ಮಾರ್ಗಗಳಲ್ಲಿ ವಿದ್ಯುತ್ ತಂತಿ ಅಳವಡಿಕೆ ಹಾಗೂ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳ ಹಿನ್ನೆಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವಿವಿಧ ದಿನಾಂಕಗಳಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದು, ಭಾಗಶಃ ರದ್ದು ಹಾಗೂ ನಿಯಂತ್ರಿಸಲು ನಿರ್ಧರಿಸಲಾಗಿದೆ. ಮೈಸೂರು–ಶಿವಮೊಗ್ಗ ಟೌನ್, ಮೈಸೂರು–ತಾಳಗುಪ್ಪ, ಬಳ್ಳಾರಿ–ದಾವಣಗೆರೆ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಸಂಬಂಧ ನೈರುತ್ಯ ಇಲಾಖೆ ನೀಡಿರುವ ಪ್ರಕಟಣೆಯ ವಿವರ ಇಲ್ಲಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ| ಪ್ರಮುಖ ಅಂಶಗಳು

  • ತೆಲಿಗಿ–ಅಮರಾವತಿ ಕಾಲೋನಿ–ಹರಪನಹಳ್ಳಿ ರೈಲು ಮಾರ್ಗದ ನಡುವೆ ಹಳಿಗಳ ಮೇಲ್ಭಾಗದ ವಿದ್ಯುತ್ ತಂತಿ ಹಾಗೂ ಇತರ ಪೂರಕ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ–ದಾವಣಗೆರೆ ನಡುವಿನ ಡೆಮು ರೈಲುಗಳ ಸಂಚಾರವನ್ನು ನವೆಂಬರ್ 20, 23, 24, 26, 27, 30 ಹಾಗೂ ಡಿಸೆಂಬರ್ 1 ಮತ್ತು 3ರಂದು ಭಾಗಶಃ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 76509 ಬಳ್ಳಾರಿ–ದಾವಣಗೆರೆ ಡೆಮು ರೈಲು ನಿಗದಿತ ದಿನಾಂಕಗಳಲ್ಲಿ ಕೊಟ್ಟೂರು ಮತ್ತು ದಾವಣಗೆರೆ ನಡುವೆ ಸಂಚರಿಸುವುದಿಲ್ಲ. ಬಳ್ಳಾರಿಯಿಂದ ಹೊರಡುವ ಈ ರೈಲು ಕೊಟ್ಟೂರು ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
  • ಅದೇ ರೀತಿ ರೈಲು ಸಂಖ್ಯೆ 76510 ದಾವಣಗೆರೆ–ಬಳ್ಳಾರಿ ಡೆಮು ರೈಲು ದಾವಣಗೆರೆ ಮತ್ತು ಕೊಟ್ಟೂರು ನಡುವಿನ ಮಾರ್ಗದಲ್ಲಿ ಭಾಗಶಃ ರದ್ದಾಗಲಿದೆ. ಈ ರೈಲು ದಾವಣಗೆರೆಯ ಬದಲಾಗಿ ಕೊಟ್ಟೂರು ರೈಲು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ. ಈ ಬದಲಾವಣೆಯು ನವೆಂಬರ್ 20, 23, 24, 26, 27, 30 ಹಾಗೂ ಡಿಸೆಂಬರ್ 1 ಮತ್ತು 3ರಂದು ಅನ್ವಯವಾಗಲಿದೆ.

ಮೈಸೂರು–ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಹಾಸನ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೈಸೂರು–ಶಿವಮೊಗ್ಗ ಟೌನ್ ನಡುವಿನ ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿಯೂ ಬದಲಾವಣೆ ಮಾಡಲಾಗಿದೆ.ನವೆಂಬರ್ 23, 26 ಮತ್ತು 30ರಂದು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ದೈನಂದಿನ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಹೀಗಾಗಿ ಈ ದಿನಗಳಲ್ಲಿ ರೈಲು ಮೈಸೂರಿನಿಂದ ಹೊರಡುವುದಿಲ್ಲ. ಬದಲಾಗಿ ಅರಸೀಕೆರೆ ರೈಲು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಶಿವಮೊಗ್ಗದ ಕಡೆಗೆ ಪ್ರಯಾಣ ಆರಂಭಿಸಲಿದೆ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ 25 ನಿಮಿಷ ನಿಯಂತ್ರಣ

ಮೈಸೂರು–ತಾಳಗುಪ್ಪ ಮಾರ್ಗದಲ್ಲಿ ಸಂಚರಿಸುವ ರೈಲು ಸಂಖ್ಯೆ 16206 ಎಕ್ಸ್‌ಪ್ರೆಸ್ ರೈಲಿನ ಸಂಚಾರಕ್ಕೂ ಕಾಮಗಾರಿಗಳ ಪರಿಣಾಮ ಉಂಟಾಗಲಿದೆ.ನವೆಂಬರ್ 23, 26 ಮತ್ತು 30ರಂದು ಮೈಸೂರಿನಿಂದ ಹೊರಡುವ ಈ ರೈಲನ್ನು ಮಾರ್ಗಮಧ್ಯೆ 25 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು. ಇದರಿಂದ ನಿಗದಿತ ದಿನಾಂಕಗಳಲ್ಲಿ ರೈಲಿನ ಸಂಚಾರದಲ್ಲಿ ವಿಳಂಬವಾಗಲಿದೆ.

ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಸಂಪೂರ್ಣ ರದ್ದು

ಹಾಸನ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ನಡೆಯುವ ಸುರಕ್ಷತಾ ಕಾಮಗಾರಿಗಳ ಕಾರಣದಿಂದ ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ದೈನಂದಿನ ಪ್ಯಾಸೆಂಜರ್ ರೈಲಿನ ಸಂಚಾರವನ್ನು ನವೆಂಬರ್ 23, 26 ಮತ್ತು 30ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.ಈ ದಿನಗಳಲ್ಲಿ ಅರಸೀಕೆರೆಯಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಈ ರೈಲು ಸೇವೆ ಲಭ್ಯವಿರುವುದಿಲ್ಲ.

ಯಶವಂತಪುರ–ಹಾಸನ ಇಂಟರ್‌ಸಿಟಿ ರೈಲು ಭಾಗಶಃ ರದ್ದು

ರೈಲು ಸಂಖ್ಯೆ 22679 ಯಶವಂತಪುರ–ಹಾಸನ ದೈನಂದಿನ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ನವೆಂಬರ್ 22, 25 ಮತ್ತು 29ರಂದು ಚನ್ನರಾಯಪಟ್ಟಣ ಮತ್ತು ಹಾಸನ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ದಿನಗಳಲ್ಲಿ ಯಶವಂತಪುರದಿಂದ ಹೊರಡುವ ರೈಲು ಹಾಸನದವರೆಗೆ ಸಂಚರಿಸುವುದಿಲ್ಲ. ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.

ಇದೇ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ರೈಲು ಸಂಖ್ಯೆ 22680 ಹಾಸನ–ಯಶವಂತಪುರ ದೈನಂದಿನ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 23, 26 ಮತ್ತು 30ರಂದು ಹಾಸನ ಮತ್ತು ಚನ್ನರಾಯಪಟ್ಟಣ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಹಾಸನದಿಂದ ಹೊರಡುವ ಬದಲಾಗಿ ಚನ್ನರಾಯಪಟ್ಟಣ ರೈಲು ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಯಶವಂತಪುರದ ಕಡೆಗೆ ಪ್ರಯಾಣ ಆರಂಭಿಸಲಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor