ದನ ಕರು ಕಳವು ಪ್ರಕರಣ: ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ, ₹1.50 ಲಕ್ಷ ದಂಡ!

ಹಂಚಿಕೊಳ್ಳಿ
WhatsApp Facebook X Telegram
digital Ban Bike Owner Jailed & Fined for Minor's Accident in Tumakuru | Karnataka Court Verdict
Bike Owner Jailed & Fined for Minor's Accident in Tumakuru | Karnataka Court Verdict

ಸುದ್ದಿಯ ಸ್ಥಳ: Chikkamagaluru, Karnataka

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಜಾನುವಾರು ಕಳವು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳಿಗೆ ತಲಾ 3 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ₹1.50 ಲಕ್ಷ ಪರಿಹಾರದ ದಂಡ ವಿಧಿಸಿ ಚಿಕ್ಕಮಗಳೂರಿನ 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಿಕ್ಕರೆಣೆ ಗ್ರಾಮದಲ್ಲಿ 2022ರಲ್ಲಿ ನಡೆದಿದ್ದ ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗುಂಡಿ ಗ್ರಾಮದ ಜಬ್ಬರ್ (42) ಹಾಗೂ ಹುಯಿಗೆರೆ ಗ್ರಾಮದ ಶಿವಣ್ಣ (43) ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ದನ ಕರು ಕಳವು ಪ್ರಕರಣ

2022ರಲ್ಲಿ ಬಿಕ್ಕರೆಣೆ ಗ್ರಾಮದ ರಸ್ತೆಯಲ್ಲಿ ಮಲಗಿದ್ದ ಒಂದು ಹಸು ಹಾಗೂ ಎರಡು ಕರುಗಳನ್ನು ಜಬ್ಬರ್ ಮತ್ತು ಶಿವಣ್ಣ ವಾಹನದಲ್ಲಿ ಕೊಂಡೊಯ್ದಿದ್ದರು. ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ವಾಹನ ಅಪಘಾತಕ್ಕೀಡಾಗಿತ್ತು. ಈ ಘಟನೆಯನ್ನು ಗಮನಿಸಿದ ಗ್ರಾಮದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು.ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಅಲ್ಲದೆ, ಕಳವು ಮಾಡಲಾಗಿದ್ದ ಒಂದು ಹಸು, ಎರಡು ಕರುಗಳು ಹಾಗೂ ಅವುಗಳನ್ನು ಸಾಗಿಸಲು ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಬಳಿಕ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕಮಗಳೂರಿನ 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಇಬ್ಬರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದೆ. ನ್ಯಾಯಾಧೀಶರಾದ ಎಚ್.ಟಿ.ಅನುರಾಧ ಅವರು ಮಾಗುಂಡಿ ಗ್ರಾಮದ ಜಬ್ಬರ್ ಹಾಗೂ ಹುಯಿಗೆರೆ ಗ್ರಾಮದ ಶಿವಣ್ಣ ಅವರಿಗೆ ತಲಾ 3 ವರ್ಷಗಳ ಸಾಧಾರಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಜತೆಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದ 3 ಜಾನುವಾರುಗಳಿಗೆ ತಲಾ ₹50 ಸಾವಿರದಂತೆ ಒಟ್ಟು ₹1.50 ಲಕ್ಷ ಪರಿಹಾರದ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ದಯಾನಂದ ಶಿರೋಳ ವಾದ ಮಂಡಿಸಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor