ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಸೆ.23ರವರೆಗೆ ವಿಸ್ತರಣೆ

ಹಂಚಿಕೊಳ್ಳಿ
WhatsApp Facebook X Telegram
ರೈಲು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಸಂದರ್ಭದ ಸಾಂದರ್ಭಿಕ ಚಿತ್ರ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಮತ್ತು ಕುಂಸಿ ರೈಲು ನಿಲ್ದಾಣಗಳಲ್ಲಿ (Arasalu and Kumsi) ಎಕ್ಸ್‌ಪ್ರೆಸ್ ರೈಲುಗಳಿಗೆ ಕಲ್ಪಿಸಲಾಗಿದ್ದ ತಾತ್ಕಾಲಿಕ ನಿಲುಗಡೆ ಅವಧಿಯನ್ನು ಮತ್ತೊಮ್ಮೆ ಮುಂದುವರಿಸಲಾಗಿದೆ. ಈ ಸಂಬಂಧ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮತ್ತೊಂದು ತಿಂಗಳವರೆಗೆ ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಿಸಿ ಆದೇಶಿಸಿದೆ.

ವಿಷಯ ವಿವರ

  1. ರೈಲು ಸಂಖ್ಯೆ 16227/16228 ಮೈಸೂರು–ತಾಳಗುಪ್ಪ–ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ನಿಲ್ದಾಣದಲ್ಲಿ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಿಸಲಾಗಿದೆ.
  2. ರೈಲು ಸಂಖ್ಯೆ 16205/16206 ತಾಳಗುಪ್ಪ–ಮೈಸೂರು–ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಕಲ್ಪಿಸಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನೂ ಮುಂದಿನ ಒಂದು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ.
  3. ವಿಸ್ತರಿಸಲಾದ ತಾತ್ಕಾಲಿಕ ನಿಲುಗಡೆ ವ್ಯವಸ್ಥೆಯು 2026ರ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಜಾರಿಯಲ್ಲಿರಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ವೇಳಾಪಟ್ಟಿಯಂತೆಯೇ ಈ ರೈಲುಗಳು ಸಂಬಂಧಪಟ್ಟ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಈ ಕುರಿತು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಆಗಸ್ಟ್ 22ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಈ ಮಾಹಿತಿ ನೀಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor