ಸೊರಬದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯಿತು ಪರ್ಜನ್ಯ! ಏನಿದು ವಿಶೇಷ ಓದಿ ನೋಡಿ!

Parjanya took place at Chandramouleshwara Temple in Soraba! Read on to see what's special!

ಸೊರಬದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯಿತು ಪರ್ಜನ್ಯ! ಏನಿದು ವಿಶೇಷ ಓದಿ ನೋಡಿ!

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಸೊರಬ/ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಪಟ್ಟಣದ ದಂಡಾವತಿ ನದಿಯ ತಟದಲ್ಲಿರುವ  ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ವರುಣನ ಕೃಪೆಗಾಗಿ ಪ್ರಾರ್ಥಿಸಿ ಪರ್ಜನ್ಯ ಪೂಜೆ ನಡೆಸಲಾಗಿದೆ. 

ಏನಿದು?

ಪರ್ಜನ್ಯ ಪೂಜೆ ಮಳೆಗಾಗಿ ಮಾಡುವ ಒಂದು ವಿಶಿಷ್ಟ ಪೂಜೆ, ಈ ಪೂಜೆಯನ್ನ ಎಲ್ಲ ಈಶ್ವರ ದೇವಸ್ಥಾನದಲ್ಲಿ ನಡೆಸಲು ಬರುವುದಿಲ್ಲ. ದೇವಸ್ಥಾನ ನದಿತಟದಲ್ಲಿ ಇರಬೇಕು, ದೇವಸ್ಥಾನದ ಹೊಸಿಲಿಗಿಂತ ಕೆಳಗೆ ಈಶ್ವರ ಲಿಂಗ ಇರಬೇಕು. ಆಗ ಮಾತ್ರ ಹೊಸ್ತಿಲವರೆಗೆ ನೀರು ನಿಲ್ಲಿಸಿ, ಲಿಂಗವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಆಗ ಪರಮೇಶ್ವರನು ಸಂಪ್ರೀತನಾಗಿ ಜನರ ಅಪೇಕ್ಷೆ ಈಡೇರಿಸುತ್ತಾನೆ ಎಂಬುದು ನಂಬಿಕೆ. 

ರುಂಡ ಮುಂಡ ಬೇರೆ ಮಾಡಿ ಗೆಳೆಯನನ್ನೆ ಸಾಯಸಿದ್ದ ಕೊಲೆ ಆರೋಪಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತಾ! ಶಿವಮೊಗ್ಗದಲ್ಲಿ ನಡೆದಿದ್ದ ಶುಂಠಿ ವ್ಯಾಪಾರಿ ಮರ್ಡರ್ ಸ್ಟೋರಿ! JP Flash back

ಅದರಂತೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪರ್ಜನ್ಯ ಪೂಜೆ ನೆರವೇರಿಸುವ ವಾಡಿಕೆ ಇದೆ ಎಂದು ಪಟ್ಟಣದ ರಾಮಚಂದ್ರ ದೇವಸ್ಥಾನದ ಅರ್ಚಕ ಸತ್ಯನಾರಾಯಣ ತಿಳಿಸಿದ್ದಾರೆ. ಪರ್ಜನ್ಯ ಬ್ರಾಹ್ಮಣ ಸಮಾಜ ಅಧ್ಯಕ್ಷ ಎನ್‌.ಜಿ. ಪದ್ಮನಾಭ ನೇತೃತ್ವದಲ್ಲಿ ಪೂಜೆ ನಡೆಯಿತು. ಉಸ್ತುವಾರಿಯನ್ನು ರಾಮಚಂದ್ರ ಭಟ್, ಸತ್ಯನಾರಾಯಣ, ವೆಂಕಟೇಶ ದಾಮ್ಮೆ (ರಾಜು), ವೆಂಕಟೇಶ ಜೊಯಿಸ್, ಶ್ರೀಕಾಂತ್ ಭಟ್, ಪರಮೇಶ್ವರ ಭಟ್, ಅಕ್ಷಯ ವಹಿಸಿದ್ದರು.

ಶಿವಮೊಗ್ಗ ಪೊಲೀಸರ ಕ್ವಿಕ್ ಆ್ಯಕ್ಷನ್​! 50 ಆಟೋಗಳು ವಶಕ್ಕೆ ! 21 ಸಾವಿರ ರೂಪಾಯಿ ದಂಡ! ಕಾರಣವೇನು ಓದಿ

ಶಿವಮೊಗ್ಗ/ ನಗರದ ಟ್ರಾಫಿಕ್​ ಪೊಲೀಸರು ಚುನಾವಣೆ ಮುಗಿಯುತ್ತಲೇ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿರುವ ಆಟೋ ಚಾಲಕರಿಗೆ ದಂಡ ವಿಧಿಸಲು ಆರಂಭಿಸಿದ್ದಾರೆ.  ಈ ಸಂಬಂಧ ನಿನ್ನೆ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ  ಜಯಶ್ರೀ ಮಾನೆ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ. 

ಸಾರ್ವಜನಿಕರಿಗೆ ಸೂಚನೆ ! ಮೇ 24 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ಶಿವಮೊಗ್ಗ ನಗರದಲ್ಲಿ ಮೀಟರ್ ಅಳವಡಿಸಿಕೊಳ್ಳದೇ, ಎಸ್.ಎಮ್.ಜಿ ನಂಬರ್ ಪಡೆಯದೇ  ಮತ್ತು ಸೂಕ್ತ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿದ್ದ ಒಟ್ಟು 50  ಆಟೋಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. 

ಈ  ಪೈಕಿ ದಾಖಲಾತಿಗಳು ಸರಿ ಇದ್ದ ಒಟ್ಟು 08 ಆಟೋಗಳಿಗೆ ಎಸ್.ಎಮ್.ಜಿ ನಂಬರ್  ನೀಡಿದ್ದು, ಸೂಕ್ತ ದಾಖಲಾತಿಗಳು ಇಲ್ಲದ ಒಟ್ಟು 42 ಆಟೋ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 42 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ 21,000/- ದಂಡ ವಿಧಿಸಲಾಗಿದೆ. . 

ಅರಸಾಳು, ಹಾರ್ನಳ್ಳಿಯಲ್ಲಿ ರೈಲು ನಿಲ್ಲಿಸ್ತಾರಾ? ಶಿವಮೊಗ್ಗಕ್ಕೂ ಬರುತ್ತಾ ವಂದೆ ಭಾರತ್ ಟ್ರೈನ್​​ ? ಶಿವಮೊಗ್ಗ -ಬೆಂಗಳೂರು-ಮೈಸೂರು ಟ್ರೈನ್​ ಟೈಮಿಂಗ್ಸ್​ ಬದಲಾಗುತ್ತಾ!?

ಆಟೋ ಮೀಟರ್ ಅಳವಡಿಸಿಕೊಳ್ಳದೇ ಇದ್ದ ಮತ್ತು ಎಸ್.ಎಮ್.ಜಿ ನಂಬರ್ ಪಡೆಯದೇ ಇದ್ದ ಆಟೋ ಚಾಲಕರುಗಳಿಗೆ ಇನ್ನು 01 ವಾರದ ಒಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳುವಂತೆ ಮತ್ತು ಎಸ್.ಎಮ್.ಜಿ ನಂಬರ್ ಅನ್ನು ಪಡೆದು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹಾಗೊಂದು ವೇಳೆ, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ಧಾರೆ.

ಲಕ್ಕವಳ್ಳಿ ಭದ್ರಾ ಕಾಲುವೆಯಲ್ಲಿ ಮೂವರ ಸಾವು! ಮತ್ತೊಬ್ಬ ಯುವತಿ ಶವ ಪತ್ತೆ!