ಶಿವಮೊಗ್ಗ ಪೊಲೀಸರ ಕ್ವಿಕ್ ಆ್ಯಕ್ಷನ್​! 50 ಆಟೋಗಳು ವಶಕ್ಕೆ ! 21 ಸಾವಿರ ರೂಪಾಯಿ ದಂಡ! ಕಾರಣವೇನು ಓದಿ

Quick action by Shimoga police! 50 autos seized Rs 21,000 fine! Read the reason

ಶಿವಮೊಗ್ಗ ಪೊಲೀಸರ ಕ್ವಿಕ್ ಆ್ಯಕ್ಷನ್​! 50 ಆಟೋಗಳು ವಶಕ್ಕೆ ! 21 ಸಾವಿರ ರೂಪಾಯಿ ದಂಡ! ಕಾರಣವೇನು ಓದಿ

KARNATAKA NEWS/ ONLINE / Malenadu today/ May 24, 2023 SHIVAMOGGA NEWS

ಶಿವಮೊಗ್ಗ/ ನಗರದ ಟ್ರಾಫಿಕ್​ ಪೊಲೀಸರು ಚುನಾವಣೆ ಮುಗಿಯುತ್ತಲೇ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿರುವ ಆಟೋ ಚಾಲಕರಿಗೆ ದಂಡ ವಿಧಿಸಲು ಆರಂಭಿಸಿದ್ದಾರೆ.  ಈ ಸಂಬಂಧ ನಿನ್ನೆ ಶಿವಮೊಗ್ಗ ಸಂಚಾರ ವೃತ್ತದ ಸಿಪಿಐ  ಜಯಶ್ರೀ ಮಾನೆ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿದೆ. 

ಸಾರ್ವಜನಿಕರಿಗೆ ಸೂಚನೆ ! ಮೇ 24 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ವಿದ್ಯುತ್ ಇರೋದಿಲ್ಲ

ಶಿವಮೊಗ್ಗ ನಗರದಲ್ಲಿ ಮೀಟರ್ ಅಳವಡಿಸಿಕೊಳ್ಳದೇ, ಎಸ್.ಎಮ್.ಜಿ ನಂಬರ್ ಪಡೆಯದೇ  ಮತ್ತು ಸೂಕ್ತ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿದ್ದ ಒಟ್ಟು 50  ಆಟೋಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. 

ಈ  ಪೈಕಿ ದಾಖಲಾತಿಗಳು ಸರಿ ಇದ್ದ ಒಟ್ಟು 08 ಆಟೋಗಳಿಗೆ ಎಸ್.ಎಮ್.ಜಿ ನಂಬರ್  ನೀಡಿದ್ದು, ಸೂಕ್ತ ದಾಖಲಾತಿಗಳು ಇಲ್ಲದ ಒಟ್ಟು 42 ಆಟೋ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 42 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ 21,000/- ದಂಡ ವಿಧಿಸಲಾಗಿದೆ. . 

ಅರಸಾಳು, ಹಾರ್ನಳ್ಳಿಯಲ್ಲಿ ರೈಲು ನಿಲ್ಲಿಸ್ತಾರಾ? ಶಿವಮೊಗ್ಗಕ್ಕೂ ಬರುತ್ತಾ ವಂದೆ ಭಾರತ್ ಟ್ರೈನ್​​ ? ಶಿವಮೊಗ್ಗ -ಬೆಂಗಳೂರು-ಮೈಸೂರು ಟ್ರೈನ್​ ಟೈಮಿಂಗ್ಸ್​ ಬದಲಾಗುತ್ತಾ!?

ಆಟೋ ಮೀಟರ್ ಅಳವಡಿಸಿಕೊಳ್ಳದೇ ಇದ್ದ ಮತ್ತು ಎಸ್.ಎಮ್.ಜಿ ನಂಬರ್ ಪಡೆಯದೇ ಇದ್ದ ಆಟೋ ಚಾಲಕರುಗಳಿಗೆ ಇನ್ನು 01 ವಾರದ ಒಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳುವಂತೆ ಮತ್ತು ಎಸ್.ಎಮ್.ಜಿ ನಂಬರ್ ಅನ್ನು ಪಡೆದು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹಾಗೊಂದು ವೇಳೆ, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ಧಾರೆ. 

ರುಂಡ ಮುಂಡ ಬೇರೆ ಮಾಡಿ ಗೆಳೆಯನನ್ನೆ ಸಾಯಸಿದ್ದ ಕೊಲೆ ಆರೋಪಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತಾ! ಶಿವಮೊಗ್ಗದಲ್ಲಿ ನಡೆದಿದ್ದ ಶುಂಠಿ ವ್ಯಾಪಾರಿ ಮರ್ಡರ್ ಸ್ಟೋರಿ! JP Flash back

ಶಿವಮೊಗ್ಗ/ ಭೂಮಿ ವ್ಯಾಜ್ಯಕ್ಕೆ ಜಗಳ ಮಾಡಿಕೊಂಡು ಸಹೋದರನನ್ನ  ಕೊಲೆ ಮಾಡಿದ ಆರೋಪ ಸಂಬಂಧ, ಶಿವಮೊಗ್ಗ ಜಿಲ್ಲಾ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿವಮೊಗ್ಗದಲ್ಲಿ ಚಿಕ್ಕಬಳ್ಳಾಪುರದ ಕಾರ್ಮಿಕ ಸಾವು! ಲಾರಿಯಿಂದ ರಾಡು ಇಳಿಸುವಾಗ ನಡೆಯಿತು ದುರಂತ

ಏನಿದು ಘಟನೆ? 

ರೇವಣಪ್ಪ, 51 ವರ್ಷ, ಶರಾವತಿ ನಗರ ನಿವಾಸಿ ಹಾಗೂ ಇವರ ಸಹೋದರರ ಮದ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿತ್ತು.  ಇದೇ ವಿಚಾರಕ್ಕೆ , ದಿನಾಂಕಃ 26-12-2018 ರಂದು  ಪ್ರಕಾಶ್​ ಹಾಗೂ ಇನ್ನಿತರರು ಸೇರಿಕೊಂಡು,  ರೇವಣ್ಣಪ್ಪರವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದರು. ಈ ಸಂಬಂಧ  ಮೃತನ ಪತ್ನಿ ಕಮಲಮ್ಮ ದೂರು ನೀಡಿದ್ದರು. ಅದರಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಸ್ಟೇಷನ್​  ನಲ್ಲಿ ಐಪಿಸಿ 143, 147, 148, 302, 114 ಸಹಿತ 149 ಅಡಿಯಲ್ಲಿ ಕೇಸ್ ಆಗಿತ್ತು. 

ಮಳೆಗೆ ಗಾಳಿಗೆ ಧರೆಗುರುಳಿದ ಮರ! ಒಮಿನಿ ಜಖಂ!

ಆಗಿನ ತನಿಖಾಧಿಕಾರಿಗಳಾದ  ಜೆ. ಲೋಕೇಶ್ ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ರು, ಶಿವಮೊಗ್ಗ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸುರೇಶ ಕುಮಾರ್ ವಾದ ಮಂಡಿಸಿದ್ದರು. ಇದೀಗ ವಿಚಾರಣೆ ಮುಗಿದು ದಿನಾಂಕ:23-05-2023 ರಂದು ತೀರ್ಪು ಹೊರಬಿದ್ದಿದೆ.

ಲಕ್ಕವಳ್ಳಿ ಭದ್ರಾ ಕಾಲುವೆಯಲ್ಲಿ ಮೂವರ ಸಾವು! ಮತ್ತೊಬ್ಬ ಯುವತಿ ಶವ ಪತ್ತೆ!

ಹೊಳಲೂರಿನ ಆರೋಪಿ ಪ್ರಕಾಶ ಗೆ   ಜೀವಾವಧಿ ಶಿಕ್ಷೆ ಮತ್ತು ರೂ 1,00,000/- ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಸೊರಬ ಮತ್ತು ಶಿವಮೊಗ್ಗ ಗ್ರಾಮಾಂತರ ಶಾಸಕರಿಂದ ಪ್ರಮಾಣವಚನ!

ಶಿವಮೊಗ್ಗ/ ನಗರದ  ನಗರ ಹೊರವಲಯ ಗೋವಿಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಆವರಣದಲ್ಲಿ ಜೆಸಿಬಿಯಿಂದ ಕಬ್ಬಿಣದ ರಾಡುಗಳನ್ನು ಇಳಿಸುವಾಗ, ಕಬ್ಬಿಣ ಮೈಮೇಲೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಅವಧೂತರ ಹೆಸರಲ್ಲಿ ಗಂಡಾಂತರ ಮೆಸೇಜ್​ ಕಳುಹಿಸುತ್ತಿರುವ ಫೇಕ್​ ಅಕೌಂಟ್!

ಮೃತ ಕಾರ್ಮಿಕನನ್ನ  ಚಿಕ್ಕಬಳ್ಳಾಪುರದ ಗುರುಮೂರ್ತಿ (35) ಎಂದು ಗುರುತಿಸಲಾಗಿದೆ. ಈ ಸಂಬಂಧ  ತುಂಗಾನಗರ  ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿಯಿಂದ ರಾಡುಗಳನ್ನ ಇಳಿಸಲು ಜೆಸಿಬಿ ಬಳಲಾಗಿತ್ತು. ಜೆಸಿಬಿ ಚಾಲಕ, ಜೆಸಿಬಿ ಬಕೆಟ್​ ಬಳಸಿ,  ಲಾರಿಯಿಂದ ರಾಡುಗಳನ್ನ ಎಳೆದಿದ್ಧಾನೆ. ಈ ವೇಳೆ ಅಲ್ಲಿಯೆ ಲಾರಿ ಕೆಳಗೆ ನಿಂತಿದ್ದ ಗುರುಮೂರ್ತಿ ಮೈಮೇಲೆ ರಾಡುಗಳು ಬಿದ್ದಿವೆ. ಪರಿಣಾಮ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.