ಕೇವಲ ಕಿವಿ ವೋಲೆ ಕೊಟ್ಟಿದ್ದಕ್ಕೆ ಸಿಕ್ತು ತೂಕದ ಕಾಸಿನ ಸರ! ಆಮೇಲೆ ದಾಖಲಾಯ್ತು ಕೇಸು! ಮಹಿಳೆಯರೆ ಹುಷಾರ್?

A case has been registered at Doddapet police station for allegedly duping people by giving fake gold near Meggan Hospital.

ಕೇವಲ ಕಿವಿ ವೋಲೆ ಕೊಟ್ಟಿದ್ದಕ್ಕೆ  ಸಿಕ್ತು ತೂಕದ ಕಾಸಿನ ಸರ!  ಆಮೇಲೆ ದಾಖಲಾಯ್ತು ಕೇಸು! ಮಹಿಳೆಯರೆ ಹುಷಾರ್?

KARNATAKA NEWS/ ONLINE / Malenadu today/ Jun 30, 2023 SHIVAMOGGA NEWS 

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ನಕಲಿ  ಕಾಸಿನ ಸರ ಕೊಟ್ಟು ಬಂಗಾರದ ಆಭರಣ ಪಡೆದು ಮೋಸ ಮಾಡಿದ ಸಂಬಂಧ ಕೇಸ್​ವೊಂದು ದಾಖಲಾಗಿದೆ. ದಾವಣಗೆರೆಯ ಚೆನ್ನಗಿರಿ ಮೂಲದ ಕಮಲಮ್ಮ ಎಂಬವರು ಈ ಬಗ್ಗೆ ದೂರು ದಾಖಲಿಸಿದ್ದು,  ವಂಚನೆ ಆರೋಪದಡಿಯಲ್ಲಿ IPC 1860 (U/s-420) ಕೇಸ್​ ದಾಖಲಾಗಿದೆ. 

ನಡೆದಿದ್ದೇನು?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಮಲಮ್ಮರವರ ಮಗನನ್ನು ಅಡ್ಮಿಟ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲಮ್ಮ ಅವರನ್ನ ನೋಡಿಕೊಳ್ಳಲು ಮೆಗ್ಗಾನ್ ನಲ್ಲಿದ್ದರು. ಮಗನಿಗೆ ಊಟ ತೆಗೆಎದುಕೊಂಡು ಹೋಗುವಾಗ ಮೆಗ್ಗಾನ್ ಆಸ್ಪತ್ರೆಯ ಎದುರು ಭಾಗದಲ್ಲಿರುವ ಪುಟ್​ ಪಾತ್​ನಲ್ಲಿ ಕಮಲಮ್ಮರಿಗೆ ಇಬ್ಬರು ಅಪರಿಚಿತರು ಎದುರಾಗಿದ್ದಾರೆ .  

ನಮ್ಮ ಮಗಳಿಗೆ ಮೆಗಾನ್‌ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇವೆ.  ಅವಳಿಗೆ ಆಪರೇಷನ್‌ ಮಾಡಿಸಲು ಹೆಚ್ಚಿನ ಹಣ ಬೇಕಾಗಿದೆ. ನಮ್ಮ ಬಳಿ ಹಣವಿಲ್ಲ. ಆದರೆ ಬಂಗಾರದ ಕಾಸಿನ ಸರ ಇದೆ,  ಇದು ಹೆಚ್ಚಿನ ಬೆಲೆ ಬಾಳುತ್ತದೆ. ಇದನ್ನು ನೀವು ತೆಗೆದುಕೊಂಡು ಸ್ವಲ್ಪ ಹಣವನ್ನು ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಕಮಲಮ್ಮ ತಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದಿದ್ಧಾರೆ.  

ಇದಕ್ಕೆ ಆರೋಪಿಗಳು  ಹಣವಿಲ್ಲವೆಂದರೆ ಪರವಾಗಿಲ್ಲ. ಕಿವಿಯಲ್ಲಿರುವ ಓಲೆ ಹಾಗೂ ಡ್ರೈನ್​ ಕೊಡಿ ಅದಕ್ಕೆ ಬದಲಾಗಿ ಈ ಕಾಸಿನ ಸರ ಇಟ್ಟುಕೊಳ್ಳಿ ಎಂದು ನಂಬಿಸಿದ್ದಾರೆ. ಇದನ್ನ ನಂಬಿದ ಕಮಲಮ್ಮ  ತಮ್ಮ  ಕಿವಿಯಲಿದ್ದ ಸುಮಾರು 05 ಗ್ರಾಂ ತೂಕದ ಸುಮಾರು 13000/- ರೂ ಬೆಲೆ ಬಾಳುವ ಒಂದು ಜೊತೆ ಬಂಗಾರದ ಕಿವಿ ಓಲೆ ಮತ್ತು ಸುಮಾರು 03 ಗ್ರಾಂ ತೂಕದ ಸುಮಾರು 9000/- ರೂ ಬೆಲೆ ಬಾಳುವ ಬಂಗಾರದ ಒಂದು ಜೊತೆ ಕಿವಿ ಚೈನ್ ಅವರಿಗೆ ಕೊಟ್ಟಿದ್ದಾರೆ. 

ಯಾವಾಗ ಕಮಲಮ್ಮ ಕಾಸಿನಸರವನ್ನು ಪರೀಕ್ಷೆಗೆ ಒಳಪಡಿಸಿದ್ರೋ ಆಗ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀ್ ಸ್ಟೇಷನ್​ ನಲ್ಲಿ ದೂರು ದಾಖಲಿಸಿದ್ದಾರೆ.