ಮುಂದೆ ನಿಂತು ತಂಗಿ ಮದುವೆ ಮಾಡಿಸ್ತಿದ್ದ ಅಣ್ಣನಿಗೆ ಅಪ್ಪನ ಕಿರಿಕ್!‌ ಪೊಲೀಸರ ಮದ್ಯಸ್ಥಿಕೆಯಲ್ಲಿ ನಡೆಯಿತು ವಿವಾಹ

The incident took place at tunganagar police station limits.

ಮುಂದೆ ನಿಂತು ತಂಗಿ ಮದುವೆ ಮಾಡಿಸ್ತಿದ್ದ ಅಣ್ಣನಿಗೆ ಅಪ್ಪನ ಕಿರಿಕ್!‌ ಪೊಲೀಸರ ಮದ್ಯಸ್ಥಿಕೆಯಲ್ಲಿ ನಡೆಯಿತು ವಿವಾಹ
tunganagar police station

Shivamogga  Apr 15, 2024  tunganagar police station  ಸಾವಿರ ಸುಳ್ಳು ಹೇಳಿ ಮದುವೆ ಮಾಡುವುದಕ್ಕೂ ನೂರು ಸಾವಿರ ಅಡ್ಡಿ ಬರುತ್ತವೆ ಎನ್ನುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಎನ್ನುವಂತಹ ಪ್ರಕರಣವೊಂದು ನಡೆದಿದೆ. ತಂಗಿಯ ಮದುವೆಯನ್ನ ಮಾಡಲು ಮುಂದಾದ ಅಣ್ಣನಿಗೆ ಆತನ ತಂದೆಯೇ ವಿರೋಧ ವ್ಯಕ್ತಪಡಿಸಿದ ಘಟನೆಯೊಂದು ನಡೆದಿದ್ದು, ಈ ಸಂಬಂಧ ಪೊಲೀಸರು ಮದುವೆ ಮನೆಗೆ ಬಂದು ಮಧ್ಯಸ್ಥಿಕೆ ವಹಿಸಿದ ಪ್ರಸಂಗವಾಗಿದೆ. 

ಏನಿದು ಪ್ರಕರಣ

ಶಿವಮೊಗ್ಗ ತುಂಗಾ ನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ನಡೆದ ಘಟನೆಯಿದು. ವೈಯಕ್ತಿಕ ವಿವರ ಬಹಿರಂಗವಿಲ್ಲ. ಉಳಿದಂತೆ ಇಲ್ಲಿನ ನಿವಾಸಿಯೊಬ್ಬರು ತಮ್ಮ ತಂಗಿಯ ಮದುವೆಯನ್ನು ನಡೆಸ್ತಿದ್ದ ವೇಳೆ ಆತನ ತಂದೆಯು ಈ ಮದುವೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದೇ ವಿಚಾರಕ್ಕೆ ಕಿರಿಕ್‌ ಮಾಡಿದ್ದಾನೆ ಎನ್ನಲಾಗಿದೆ. ಈ ಕಾರಣಕ್ಕೆ ಯುವಕ ತನ್ನ ತಂಗಿ ಮದುವೆಗೆ ಅಪ್ಪ ವಿರೋಧ ಮಾಡ್ತಿರುವುದಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮದುವೆ ಸಮಾರಂಭದಲ್ಲಿ ಗಲಾಟೆ ಮಾಡದಂತೆ ಯುವಕನ ತಂದೆಗೆ ತಿಳುವಳಿಕೆ ಹೇಳಿದ್ದಾರೆ. ಬಳಿಕ ಸಮಾರಂಭ ಮುಂದುವರಿದಿದೆ