ಕುಡಿದು ಸೇತುವೆ ಮೇಲೆ ಮಲಗಿದ ಆಸಾಮಿ! ಪೊಲೀಸರಿಗೆ ಬಂತು ಫೋನ್‌ ಕಾಲ್!‌ ಆಮೇಲೆ ನಡೆದಿದ್ದು ಇದು!

A drunk man who slept on the bridge! The incident took place at Bhadravathi Old town police station limits.

ಕುಡಿದು ಸೇತುವೆ ಮೇಲೆ ಮಲಗಿದ ಆಸಾಮಿ! ಪೊಲೀಸರಿಗೆ ಬಂತು ಫೋನ್‌ ಕಾಲ್!‌ ಆಮೇಲೆ ನಡೆದಿದ್ದು ಇದು!
Bhadravathi Old town police station

Shivamogga  Apr 15, 2024  Bhadravathi Old town police station |  ಶಿವಮೊಗ್ಗ ನಗರದ ತುಂಗಾ ಸೇತುವೆ ಕೆಳಕ್ಕೆ ವ್ಯಕ್ತಿಯೊಬ್ಬ ಮೇಲಿಂದ ಕೆಳಕ್ಕೆ ಬಿದ್ದಿರುವ ಸ್ಥಿತಿಯಲ್ಲಿ  ಪತ್ತೆಯಾಗಿದ್ದ. ಇದೇ ರೀತಿಯ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್‌ ಟೌನ್‌ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ 12 ರಂದು ನಡೆದ ಘಟನೆ ಬಗ್ಗೆ ಇವತ್ತು ವರದಿಯಾಗಿದೆ. 

ಏನಿದು ಪ್ರಕರಣ 

ಇಲ್ಲಿನ ಓಲ್ಡ್‌ ಟೌನ್‌ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಪೊಲೀಸರಿಗೆ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಸೇತುವೆ ಮೇಲೆ ಮಲಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಆತ ಅಪಾಯಕ್ಕೆ ಸಿಲುಕಬಹುದೆಂದು ಭಾವಿಸಿ ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನ ರಕ್ಷಿಸಿದ್ದಾರೆ. ಅಲ್ಲದೆ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಪತ್ನಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಅವರ ಕುಟುಂಬಸ್ಥರ ಸುಪರ್ಧಿಗೆ ವ್ಯಕ್ತಿಯನ್ನು ಒಪ್ಪಿಸಿದ್ದಾರೆ. .