ಶಿವಮೊಗ್ಗ ರೈಲ್ವೆ ನಿಲ್ದಾಣ | ಅಸ್ವಸ್ಥ ಮಹಿಳೆಯ ರಕ್ಷಣೆ! ಏನಾಗಿತ್ತು ? ನಡೆದ ಘಟನೆ ವಿವರ ಇಲ್ಲಿದೆ

Woman rescued near Shivamogga railway station What happened? Here's the details of the incident

ಶಿವಮೊಗ್ಗ ರೈಲ್ವೆ ನಿಲ್ದಾಣ |  ಅಸ್ವಸ್ಥ ಮಹಿಳೆಯ ರಕ್ಷಣೆ! ಏನಾಗಿತ್ತು ? ನಡೆದ ಘಟನೆ ವಿವರ ಇಲ್ಲಿದೆ
Woman rescued, near Shivamogga railway station

Shivamogga  Apr 15, 2024   Shivamogga railway station   ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಅಸ್ವಸ್ಥೆಯೊಬ್ಬರನ್ನ ಪೊಲೀಸರು ಹಾಗೂ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆಯೊಂದರ ಬಗ್ಗೆ ವರದಿಯಾಗಿದೆ  ಕಳೆದ 13 ನೇ ತಾರೀಖು ಈ ಘಟನೆ ನಡೆದಿದೆ. 

ಈ ಸಂಬಂಧ ಮೊನ್ನೆ ಶಿವಮೊಗ್ಗದ ಕೋಟೆ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯ 112 ಗೆ ಸ್ಥಳೀಯರು ಕರೆ ಮಾಡಿ ಶಿವಮೊಗ್ಗ ರೈಲ್ವೆ ಸ್ಟೇಷನ್‌ ಸಮೀಪ ಅಸ್ವಸ್ಥರಾಗಿ ಮಹಿಳೆಯೊಬ್ಬರು ಮಲಗಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯ ಪಡೆದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಆಕೆಯ ಮನವೊಲಿಸಿ ರಕ್ಷಣೆ ಮಾಡಿದ ಪೊಲೀಸರು ತುರ್ತು ಅಗತ್ಯದ ಚಿಕಿತ್ಸೆಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಸ್ಥಳೀಯ ಪೊಲೀಸ್‌ ಸ್ಟೇಷನ್‌ ಕೋಟೆ ಪೊಲೀಸ್‌ ಸ್ಠೇಷನ್‌ಗೆ ಮಾಹಿತಿ ನೀಡಿದ್ದಾರೆ.