SHIVAMOGGA BIG NEWS | ಶಿವಮೊಗ್ಗ ಲೋಕಾಯುಕ್ತರಿಂದ ಮೇಜರ್‌ ಟ್ರ್ಯಾಪ್‌! AEE ಜೊತೆಗೆ ಅಕೌಂಟ್‌ ಅಸಿಸ್ಟೆಂಟ್‌ ಅರೆಸ್ಟ್‌ !

SHIVAMOGGA BIG NEWS | Major trap from Shimoga Lokayukta Account Assistant arrested along with AEE

SHIVAMOGGA BIG NEWS | ಶಿವಮೊಗ್ಗ ಲೋಕಾಯುಕ್ತರಿಂದ ಮೇಜರ್‌ ಟ್ರ್ಯಾಪ್‌! AEE ಜೊತೆಗೆ  ಅಕೌಂಟ್‌ ಅಸಿಸ್ಟೆಂಟ್‌ ಅರೆಸ್ಟ್‌ !
SHIVAMOGGA BIG NEWS, Shimoga Lokayukta

Shivamogga  Apr 14, 2024  ಲಂಚದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಟ್ರ್ಯಾಪ್‌ ಆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಇಲ್ಲಿನ ಎಇಇ ಲೋಹಿತ್ ಪ್ರಶಾಂತ್ ಕುಮಾರ ಮತ್ತು ಗಿರೀಶ್. ಜಿ.ಆರ್, ಅಕೌಂಟ್ ಅಸಿಸ್ಟೆಂಟ್  ಇವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. 

ಪ್ರಕರಣವೇನು

ಶಿವಮೊಗ್ಗದ ಪ್ರಿಯಾಂಕಾ ಲೇಔಟ್‌ನಲ್ಲಿರುವ ಕ್ಲಾಸ್‌ ಒನ್‌ ಕಾಂಟ್ರಾಕ್ಟರ್‌ ಸತೀಶ್‌ ಚಂದ್ರ ಎಂಬವರು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಡರ್‌ ನಲ್ಲಿ ಬರುವ  ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೆ.ವಿ.ಕೆ ರಬ್ಬರ್ ಫಾರ್ಮ್‌ ಆಡಳಿತ ವಿಭಾಗದ ಕಛೇರಿಯ ಮೇಲ್ಬಾವಣಿಯನ್ನು ನಿರ್ಮಿಸುವ ಟೆಂಡರ್‌ ಪಡೆದಿದ್ದರು. ನಿಗದಿಯಂತೆ ಕಾಮಗಾರಿ ಮುಗಿಸಿ, ಬಿಡ್‌ನ ರಿಫರೆನ್ಸ್‌ ಅಮೌಂಟ್‌ ವಾಪಸ್‌ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಎಇಇ ತಮಗೆ ಕಾಮಗಾರಿಗೆ ಸಂಬಂಧಿಸಿದಂತೆ 40 ಸಾವಿರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದಷ್ಟೆ ಅಲ್ಲದೆ ಡಿಫರೆನ್ಸ್‌ ಹಣ ಬಿಡುಗಡೆ ಮಾಡದೆ ಪೆಂಡಿಂಗ್‌ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಆಡಿಯೋ ವಾಯ್ಸ್‌ ರೆಕಾರ್ಡಿಂಗ್‌ ಇಟ್ಟುಕೊಂಡಿದ್ದ ಕಾಂಟ್ರಾಕ್ಟರ್‌  ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರ ಪ್ರಕಾರ ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಛೇರಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿದ ಲೋಕಾಯುಕ್ತ ಪೊಲೀಸರು ರೇಡ್‌ ನಡೆಸಿ, ಆರೋಪಿಗಳು 30 ಸಾವಿರ ರೂಪಾಯಿ ಲಂಚ ಪಡೆಯುವಾಗಲೇ ಅವರನ್ನ ಬಂಧಿಸಿದ್ದಾರೆ. 

ಈ ರೇಡ್‌ನಲ್ಲಿ  ಪ್ರಕಾಶ್, ಪೊಲೀಸ್ ನಿರೀಕ್ಷಕರು, ಕ.ಲೋ, ಶಿವಮೊಗ್ಗ ಇವರು ಕೈಗೊಂಡಿರುತ್ತಾರೆ. ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಚೇರಿಯ ಪೊಲೀಸ್ ಅಧೀಕ್ಷಕರಾದ    ಮಂಜುನಾಥ ಚೌದರಿ. ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕರಾದ    ಉಮೇಶ್ ಈಶ್ವರನಾಯ್ಕ ಇವರ ಸೂಕ್ತ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ    ಪ್ರಕಾಶ್,    ವೀರಬಸಪ್ಪ ಎಲ್ ಕುಸಲಾಪುರ, ಮತ್ತು ಸಿಬ್ಬಂದಿಯವರಾದ    ಯೋಗೇಶ್ ಸಿ.ಹೆಚ್.ಸಿ,    ಮಹಂತೇಶ್ ವಿ.ಎ. ಸಿ.ಹಚ್.ಸಿ,    ಸುರೇಂದ್ರ ಹೆಚ್.ಜಿ, ಸಿ.ಹೆಚ್.ಸಿ,    ಬಿ.ಟಿ ಚನ್ನೇಶ ಸಿ.ಪಿ.ಸಿ,    ಪ್ರಶಾಂತ್ ಕುಮಾರ್ ಸಿ.ಪಿ.ಸಿ,    ರಘುನಾಯ್ಕ ಸಿ.ಪಿ.ಸಿ,    ಅರುಣ್ ಕುಮಾರ್ ಸಿ.ಪಿ.ಸಿ,   ಮತಿ ಪುಟ್ಟಮ್ಮ, ಮಪಿಸಿ,    ಪ್ರದೀಪ್, ಎ.ಪಿ.ಸಿ,    ಗೋಪಿ ವಿ. ಎ.ಪಿ.ಸಿ,    ಜಯಂತ್ ಎ.ಪಿ.ಸಿ ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಸಲಾಗಿದೆ.