ಹಬ್ಬಗಳ ಎಫೆಕ್ಟ್​! ಪ್ರತಿನಿತ್ಯ ದಾಖಲಾಗ್ತಿದೆ ಪೊಲೀಸ್ ಕೇಸ್! ಕಾರಣ ಕೊಡದಿದ್ದರೇ ಹುಷಾರ್!

Shimoga police has intensified the dominance patrol of the area in the wake of the festivitiesಶಿವಮೊಗ್ಗ ಪೊಲೀಸರು ಹಬ್ಬಗಳ ಹಿನ್ನೆಲೆಯಲ್ಲಿ ಏರಿಯ ಡಾಮಿನೇಷನ್ ಗಸ್ತನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ

ಹಬ್ಬಗಳ ಎಫೆಕ್ಟ್​! ಪ್ರತಿನಿತ್ಯ ದಾಖಲಾಗ್ತಿದೆ ಪೊಲೀಸ್ ಕೇಸ್!  ಕಾರಣ ಕೊಡದಿದ್ದರೇ ಹುಷಾರ್!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS 

 

ಶಿವಮೊಗ್ಗ ಪೊಲೀಸರು ಹಬ್ಬಗಳ ಹಿನ್ನೆಲೆಯಲ್ಲಿ ಏರಿಯಾ ಡಾಮಿನೇಷನ್ ಗಸ್ತನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಇದಕ್ಕೆ ಪೂರಕವಾಗಿ ನಿನ್ನೆ   ದಿನಾಂಕ: 11-09-2023 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಲಷ್ಕರ್ ಮೊಹಲ್ಲಾ, ಬಿ ಹೆಚ್ ರಸ್ತೆ, ಕಾನ್ವೆಂಟ್ ಸರ್ಕಲ್, ಡಿವಿಎಸ್ ಸರ್ಕಲ್, ಅಣ್ಣಾ ನಗರ, ಮಂಜುನಾಥ್ ಬಡಾವಣೆಗಳಲ್ಲಿ ಗಸ್ತು ನಡೆಸಲಾಗಿದೆ. 

 

ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಬೊಮ್ಮನಕಟ್ಟೆ, ಭದ್ರಾ ಕಾಲೋನಿ, ಹುತ್ತಾಕಾಲೋನಿ, ಹೊಳೆಹೊನ್ನೂರಿನ ಹಕ್ಕಿ ಪಿಕ್ಕಿ ಕ್ಯಾಂಪ್, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ  ರಿಪ್ಪನ್ ಪೇಟೆಯ ಕೆಂಚನಾಳ ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್  ನೆಹರು ನಗರ, ಹೆಗ್ಗೋಡು ಯಲಗಳಲೆ, ಶೆಡ್ತಿಕೆರೆ, ಕಾರ್ಗಲ್ ನ ಮಸೀದಿ ಸರ್ಕಲ್ ಮತ್ತು ಆನಂದಪುರದ ದಾಸಕೊಪ್ಪ ಸರ್ಕಲ್ ನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ಮಾಡಿದೆ

 

ಈ ವೇಳೆ  Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 34 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು IMV ಕಾಯ್ದೆ ಅಡಿಯಲ್ಲಿ 5 ಪ್ರಕರಣಗಳನ್ನು  ದಾಖಲಿಸಿರುತ್ತದೆ.


 

ಇನ್ನಷ್ಟು ಸುದ್ದಿಗಳು