ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗ್ತಿಲ್ವ! ದುಡ್ಡು ಬರ್ತಿಲ್ವಾ! ಅಲ್ಲಿಂದಿಲ್ಲಿಗೆ ಅಲೆದಾಡಿಸ್ತಿದ್ದಾರಾ? ಏನು ಮಾಡಬೇಕು ವಿವರ ಇಲ್ಲಿದೆ ಓದಿ!

Is it a problem to apply for Grilahakshmi Yojana! Here is the answer to this question ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಸಮಸ್ಯೆಯಾಗುತ್ತಿದೆಯೇ! ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋಕೆ ಆಗ್ತಿಲ್ವ! ದುಡ್ಡು ಬರ್ತಿಲ್ವಾ!  ಅಲ್ಲಿಂದಿಲ್ಲಿಗೆ ಅಲೆದಾಡಿಸ್ತಿದ್ದಾರಾ? ಏನು ಮಾಡಬೇಕು ವಿವರ ಇಲ್ಲಿದೆ ಓದಿ!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ನಿಮ್ಮ ರೇಷನ್​ ಕಾರ್ಡ್​ನ ಮೂಲಕ ಗೃಹಲಕ್ಷ್ಮೀಗೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ವಾ? ರೇಷನ್​ ಅಂಗಡಿಗೆ ಹೋದರೆ,  ಪುಡ್ ಆಫೀಸ್​ಗೆ ಹೋಗಿ ಎನ್ನುತ್ತಾರೆ? ಪುಡ್​ ಆಫೀಸ್​ಗೆ ಹೋದರೇ ರೇಷನ್​ ಅಂಗಡಿಗೆ ಹೋಗಿ ಅಂತಿದ್ದಾರಾ? ಏನಿದು ಗೊಂದಲ ಎನ್ನುತ್ತೀರಾ ಈ ಗೊಂದಲಗಳಿಗೆ ಕೆಲವು ಉತ್ತರ ಇಲ್ಲಿದೆ. 

ಶಿವಮೊಗ್ಗದಲ್ಲಿ ಈಗಾಗಲೇ ಬಹಳಷ್ಟು ಮಂದಿ ತಮ್ಮ ಮನೆಯ ಗೃಹಲಕ್ಷ್ಮೀಯರಿಗೆ ಗೃಹಲಕ್ಷ್ಮೀ ಯೋಜನೆ ಸಲ್ಲುವಂತೆ ಅರ್ಜಿ ಸಲ್ಲುತ್ತಿದ್ದಾರೆ. ಆದಾಗ್ಯು ರೇಷನ್ ಕಾರ್ಡ್​ ಅಪ್​ಡೇಟ್ ಮಾಡಿಸದವರಿಗೆ ಈ ಅರ್ಜಿ ಸಲ್ಲಿಕೆ ತುಸು ತಡವಾಗುತ್ತಿದೆ. ಹೀಗಾಗಿ ಕಾರ್ಡ್​ ತಿದ್ದುಪಡಿ ಮಾಡಿಸುವುದು, ಯಜಮಾನಿಯ ಎಂದು ಪರಿವರ್ತನೆ ಮಾಡಿಸುವುದು , ಆಧಾರ್ ಅಪ್​ಡೇಟ್ ಮಾಡಿಸುವುದು ಹೀಗೆ ಪಡಿತರ ಕಾರ್ಡ್​ಗೆ ಸಂಬಂಧಿಸಿದ ಕೆಲಸಕ್ಕಾಗಿ ಜನರು ಅಲೆದಾಡುತ್ತಿದ್ದಾರೆ. 

ಆಹಾರ ಇಲಾಖೆಯಲ್ಲಿ ಏನು ಮಾಡಲಾಗತ್ತದೆ

ಗೃಹಲಕ್ಷ್ಮೀ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿಯಲ್ಲಿರುವ ಯೋಜನೆಯಾಗಿದೆ. ಇಲ್ಲಿ ಆಹಾರ ಇಲಾಖೆಯ ಪಾತ್ರ ಅಷ್ಟಕಷ್ಟೆ. ಆಹಾರ ಇಲಾಖೆಯಿಂದ ಬೇಕಿರುವ ಅಗತ್ಯ ಡೇಟಾವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗಾಗಲೇ ಪಡೆದಿದ್ದು, ಅದರಂತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಸಿಕೊಳ್ಳಲಾಗುತ್ತಿದೆ. 

ಯಾರಿಗೆ ಸಮಸ್ಯೆಯಾಗುತ್ತಿದೆ

ಈಗಾಗಲೇ ರೇಷನ್ ಪಡೆಯುತ್ತಿರುವ ಕುಟುಂಬಗಳಿಗೆ ಅರ್ಜಿ ಸಲ್ಲಿಕೆ ಅಷ್ಟೇನು ಕಷ್ಟವಾಗುತ್ತಿಲ್ಲ. ಆದರೆ ಅರ್ಜಿ ಸಲ್ಲಿಕೆಗೆ ರೇಷನ್​ ಕಾರ್ಡ್​ ನಲ್ಲಿ ಯಜಮಾನದ ಫೋಟೋ ಬದಲು ಯಜಮಾನಿಯ ಫೋಟೋ ಮೊದಲು ಇರಬೇಕು ಎಂದು ಜನರು ರೇಷನ್​ ಅಂಗಡಿ, ಸಿಹೆಚ್​ಸಿ ಸೆಂಟರ್​, ಸೈಬರ್ ಸೆಂಟರ್​ಗಳಿಗೆ ಅಲೆದಾಡುತ್ತಿದ್ದಾರೆ. ಸರ್ವರ್​ ಸಮಸ್ಯೆ ಹಾಗೂ ಸಮರ್ಪಕ ಮಾಹಿತಿಯಿಲ್ಲದೆ ಈ ಕೆಲಸ ಪೂರ್ತಿಯಾಗುತ್ತಿಲ್ಲ. 

ಆಧಾರ್ ಅಪ್​ಡೇಟ್ 

ಇನ್ನೊಂದೆಡೆ ಹಳೆಯ ಎಸ್​ಹೆಚ್​ಐ ಸೀರಿಸ್ ಕಾರ್ಡ್​ನಂತರ ಸಾಕಷ್ಟು ಬದಲಾವಣೆಯಾಗಿದ್ದು ಸದ್ಯ ಹೊಸ ಮಾದರಿಯ ಕಾರ್ಡ್​ಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ಈ ಕಾರ್ಡ್​ಗಳಿಗೆ ಆಧಾರ್ ಲಿಂಕ್ ಮಾಡಿಕೊಂಡು ಈ ಕವೈಸಿ ಮಾಡಿಸಿಕೊಳ್ಳಲಾಗುತ್ತಿದೆ. ಭವಿಷ್ಯದ ಯೋಜನೆಗಳಿಗೆ ಇದು ಅನುಕೂಲಕಾರಿ. ಆದರೆ ಬಹಳಷ್ಟು ಮಂದಿಗೆ ಈ ವಿಚಾರದ ಮಾಹಿತಿಯಲ್ಲಿ ಅದರಲ್ಲಿಯು ಎಪಿಎಲ್ ಕಾರ್ಡ್​ಧಾರರ ಪೈಕಿ ಕೆಲವರು ಲೆಕ್ಕಕ್ಕಷ್ಟೆ ಕಾರ್ಡ್ ಇಟ್ಟುಕೊಂಡು, ಅದರ ನಿರ್ವಹಣೆ ಮರೆತಿದ್ದರು. ಇದೀಗ ಗೃಹಲಕ್ಷ್ಮೀಗಾಗಿ ಕಾರ್ಡ್​ ಹಿಡಿದು ಅರ್ಜಿ ಸಲ್ಲಿಸಲು ಹೋದರೆ, ಅಲ್ಲಿ ನಿಮ್ಮ ಕಾರ್ಡ್​ ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶ ಬರುತ್ತಿದೆ. ಮತ್ತೆ ಕೆಲವರಿಗೆ ನಿಮ್ಮ ಕಾರ್ಡ್ ಆಕ್ಟೀವ್ ಇಲ್ಲ ಎನ್ನಲಾಗುತ್ತಿದೆ. 

ಏನು ಮಾಡಬೇಕು

ನಿಮ್ಮ ಬಳಿಯಲ್ಲಿ ರೇಷನ್​ ಕಾರ್ಡ್​ ಇದ್ದಲ್ಲಿ ಮೊದಲು ಅದು ಆಕ್ಟೀವ್ ಆಗಿದೆಯೆ? ಎಂದು ಪರೀಕ್ಷಿಸಿ! ನಂಬರ್​ ಒನ್ ಸೆಂಟರ್ ಅಥವಾ ಆನ್​ಲೈನ್ ವೆಬ್​ಸೈಟ್​ನಲ್ಲಿ ರೇಷನ್​ ಕಾರ್ಡ್​ನ ಸ್ಥಿತಿಗತಿ ತಿಳಿದು ಬರುತ್ತದೆ. ಆಕ್ಟೀವ್ ಇದ್ದಲ್ಲಿ ಆಹಾರ ಇಲಾಖೆಗೆ ಭೇಟಿಕೊಟ್ಟು ಆಧಾರ್ ಅಪ್​ಡೇಟ್ ಮಾಡಿಸಿ. ಈ ವೇಳೆ ಕಾರ್ಡ್​ನಲ್ಲಿ ಹೆಸರಿರುವ ಪ್ರತಿಯೊಬ್ಬರ ಆಧಾರ್ ಕಾರ್ಡ್​ ಜೆರಾಕ್ಸ್ ಕೊಂಡೊಯ್ದು ನೀಡಿದರೆ, ಆಧಾರ್​ ಅಪಡೇಟ್ ಮಾಡಿಕೊಡುತ್ತಾರೆ. ಈ ಆಧಾರ್​​ ಅಪ್​ಡೇಟ್ ಬಳಿಕ ರೇಷನ್​ ಅಂಗಡಿಗೆ ಹೋದರೆ, ಅಲ್ಲಿ ಈ KYC  ಮಾಡಿಕೊಡುತ್ತಾರೆ. ಬಳಿಕ ಹೊಸ ಕಾರ್ಡ್​ ಪಡೆದರೇ ನಿಮ್ಮ ಕಾರ್ಡ್​ ಸುಸ್ಥಿತಿಗೆ ಬರುತ್ತದೆ. ಹೀಗೆ ಡೇಟಾ ಅಪ್​ಡೇಟ್ ಮಾಡಿ, ಅದು ಸರ್ಕಾರಿ ಆನ್​ಲೈನ್​ ಕಡತಗಳಲ್ಲಿ ಅಪಡೇಟ್ ಆದನಂತರ ಗೃಹಲಕ್ಷ್ಮೀ ಅರ್ಜಿ ಸಲ್ಲಿಸಬಹುದು. 


ಇನ್ನಷ್ಟು ಸುದ್ದಿಗಳು