ಲೋಕಸಭೆ ಎಲೆಕ್ಷನ್​ಗೂ ಮೊದಲು ಅಥವಾ ನಂತರ! ಕಾಂಗ್ರೆಸ್​ ಸರ್ಕಾರ ಪತನ! ಏನಿದು ಕೆ.ಎಸ್​.ಈಶ್ವರಪ್ಪನವರು ನುಡಿದ ಭವಿಷ್ಯ!

K. S. Eshwarappa said that the Congress government will fall before or after the Lok Sabha elections.ಲೋಕಸಭೆ ಎಲೆಕ್ಷನ್​ಗೂ ಮೊದಲು ಅಥವಾ ನಂತರ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಕೆ.ಎಸ್​.ಈಶ್ವರಪ್ಪನವರು ಹೇಳಿದ್ದಾರೆ

ಲೋಕಸಭೆ ಎಲೆಕ್ಷನ್​ಗೂ ಮೊದಲು ಅಥವಾ ನಂತರ! ಕಾಂಗ್ರೆಸ್​ ಸರ್ಕಾರ ಪತನ! ಏನಿದು ಕೆ.ಎಸ್​.ಈಶ್ವರಪ್ಪನವರು ನುಡಿದ ಭವಿಷ್ಯ!

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಬೇಗ ಪತನಗೊಳ್ಳುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರರವರು ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೆ ಈ ಮಾತನ್ನು ಮಾಜಿ ಸಚಿವ  ಕೆ.ಎಸ್​. ಈಶ್ವರಪ್ಪ ಪುನರುಚ್ಚರಿಸಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಅಥವಾ ನಂತರ ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂದು ಕೆ.ಎಸ್​.ಈಶ್ವರಪ್ಪನವರು ತಿಳಿಸಿದ್ದಾರೆ. 

ಕಾಂಗ್ರೆಸ್​ ನವರು ಆಪರೇಷನ್​ ಹಸ್ತದ ಮಾತನಾಡುತ್ತಿದ್ದು, ಇವರ ಯೋಗ್ಯತೆಗೆ ಇದುವರೆಗೂ ಬಿಜೆಪಿಯ ಒಬ್ಬ ಶಾಸಕನನ್ನೂ ಕರೆದೊಯ್ಯಲು ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.  ಬಿಜೆಪಿಯಿಂದ ತುಂಬಾ ಜನ ಬರುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಿಮಗೆ ಒಂದು ತಿಂಗಳು ಸಮಯ ಕೊಡುತ್ತೇನೆ ಬಿಜೆಪಿಯಿಂದ ಒಬ್ಬ ಶಾಸಕನನ್ನು ನೀವು ಕರೆದೊಯ್ಯಿರಿ ನೋಡೋಣ ಎಂದು ಕಾಂಗ್ರೆಸ್​​ ನಾಯಕರಿಗೆ ಸವಾಲೆಸೆದಿದ್ದಾರೆ. 

ಇನ್ನೂ ಕಾಂಗ್ರೆಸ್​ ಸರ್ಕಾರ ಬೀಳಿಸುವ ವಿಚಾರದಲ್ಲಿ ಮತ್ತೆ ಆಪರೇಷನ್​ ಕಮಲ ಶುರುವಾಗಲಿದೆ. ಬೇಕಿದ್ದರೆ ಸಚಿವ ಪ್ರಿಯಾಂಕ ಖರ್ಗೆ ಕಾದು ನೋಡಲಿ ಎಂದಿದ್ದಾರೆ.  


ಇನ್ನಷ್ಟು ಸುದ್ದಿಗಳು