ನಾಳೆಯಿಂದ ಮೂರು ದಿನ (ಜೂನ್​ 16,17,18) ಮೆಗ್ಗಾನ್, ಗಾಜನೂರು, ಆಯನೂರು ಗೇಟ್ ಸುತ್ತಮುತ್ತ ಸೇರಿದಂತೆ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ಪವರ್ ಕಟ್​!

For three days from tomorrow (June 16, 17, 18), power cuts will be held in various parts of Shivamogga including areas around Meggan, Gajanur, Ayanur Gate!

ನಾಳೆಯಿಂದ ಮೂರು ದಿನ (ಜೂನ್​ 16,17,18) ಮೆಗ್ಗಾನ್, ಗಾಜನೂರು, ಆಯನೂರು ಗೇಟ್ ಸುತ್ತಮುತ್ತ ಸೇರಿದಂತೆ  ಶಿವಮೊಗ್ಗದ ವಿವಿಧ ಭಾಗಗಳಲ್ಲಿ ಪವರ್ ಕಟ್​!

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS

ಶಿವಮೊಗ್ಗ/ ಮೆಸ್ಕಾಂ ವಿಭಾಗ, ಜೂನ್, 16, 17, 18 ರಂದು ಶಿವಮೊಗ್ಗದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೆಸ್ಕಾಂ ಪ್ರಕಟಣೆಯ ವಿವರಗಳು ಇಲ್ಲಿದೆ

ಶಿವಮೊಗ್ಗದ ಇಲಿಯಾಜ್​ ನಗರದಲ್ಲಿ ಯುವಕ ಕಗ್ಗೊಲೆ! ಆರೋಪಿ ಬಂಧನ! ನಡೆದಿದ್ದೇನು?

ಜೂನ್​ 17 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ತಾಲೂಕು ಗಾಜನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.17 ರಂದು ಬೆಳಗ್ಗೆ 10-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ಇರೋದಿಲ್ಲ ಕರೆಂಟ್ 

ಗಾಜನೂರು ಕ್ಯಾಂಪ್ ಮತ್ತು ಡ್ಯಾಂ, ಸಕ್ರೇಬೈಲು, ಹಾಲಲಕ್ಕವಳ್ಳಿ, ಕಡೆಕಲ್, ತಟ್ಟಿಕೆರೆ, ಯರಗನಾಳ್, ಕುಸ್ಕೂರು, ಸಿದ್ಧರಹಳ್ಳಿ, ಮಂಡೇನಕೊಪ್ಪ, ಶ್ರೀಕಂಠಪುರ,  ಇಂದಿರಾನಗರ, ಹೊಸಹಳ್ಳಿ, ಮುಳ್ಕರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಶಿವಮೊಗ್ಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್!ಸಂಸದರ ಮನವಿಗೆ ಅಸ್ತು ಎಂದ ನಿತಿನ್ ಗಡ್ಕರಿ! ಏನದು?|

ಜೂ.16 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ 11 ಕೆ.ವಿ ಮಾರ್ಗದ ಕಾಮಗಾರಿಗಾಗಿ ಮಾರ್ಗ ಮುಕ್ತತೆ ನೀಡುವುದರಿಂದ  ಜೂ.16 ರ ಬೆಳಗ್ಗೆ 10-00 ರಿಂದ ಸಂಜೆ 06-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ?

ಸವಳಂಗ ರಸ್ತೆಯಲ್ಲಿನ ಕುವೆಂಪುನಗರದ ವಿದ್ಯಾಭಾರತಿ ಕಾಲೇಜ್ ಎದುರು, ಕುವೆಂಪುನಗರದ ವಾಟರ್ ಟ್ಯಾಂಕ್ ಹತ್ತಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ಶಿವಮೊಗ್ಗದಲ್ಲಿ ಒಂದೇ ದಿನ 99 ವಾಹನಗಳು ಸೀಜ್! 99 ಕೇಸ್​ ದಾಖಲು! ಕಾರಣವೇನು ಗೊತ್ತಾ?

ಜೂ.18 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎಂ.ಜಿ.ಎಫ್- 1, 2, 4 ಮತ್ತು 5 ರಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.18 ರ ಬೆಳಗ್ಗೆ 10-00 ರಿಂದ ಸಂಜೆ 05-00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಶರಾವತಿ ನಗರ, ಬಿ.ಎಸ್.ಎನ್.ಎಲ್ ಕ್ವಾಟ್ರಸ್, ಸಕ್ರ್ಯೂಟ್ ಹೌಸ್, ಎಸ್.ಪಿ ಕಚೇರಿ, ಪೊಲೀಸ್ ಠಾಣೆ, ಸಾಗರ ಮುಖ್ಯ ರಸ್ತೆ, ಅಶೋಕ್ ನಗರ, ಎ ಆರ್.ಬಿ ಕಾಲೋನಿ, ನಾಗರಾಜಪುರ ಬಡಾವಣೆ, ಹೊಸಮನೆ, ಕುವೆಂಪು ರಸ್ತೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್ ಲೈನ್ ರಸ್ತೆ, ಎಲ್.ಐ.ಸಿ ಕಚೇರಿ, ಮಿಷನ್ ಕಾಂಪೌಂಡ್, ವಿಜಯನಗರ, ಜೆ.ಪಿ ನಗರ, ಪಂಪ ನಗರ, ಶ್ರೀರಾಮನಗರ, ಜೈಲ್ ಸರ್ಕಲ್, ಹಂದಿಗೊಲ್ಲರ ಕೇರಿ, ನರ್ಸ್ ಕ್ವಾಟ್ರಸ್, ಸಾಗರ ರಸ್ತೆ ಸರ್ಕಾರಿ ಆಯುರ್ವೇದಿಕ್ ಕಾಲೇಜು, ಆಯನೂರು ಗೇಟ್, ಛಾನಲ್ ಏರಿಯಾ, ವೀಣಾ ಶಾರದಾ ಶಾಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


   

 

power cut shivamogga, power cut in shimoga today, power cut timings, shimoga power cut, power cut belgaum, shimoga power engineering, how to check power cut in bangalore, power shutdown areas in coimbatore, power cut schedule in jalandhar today, power cuts in india, is there a power cut in stockport, how to check power cut in my area in tamilnadu, power cut in chrompet today, power cuts contact number,