ಶಿವಮೊಗ್ಗದ ಇಲಿಯಾಜ್​ ನಗರದಲ್ಲಿ ಯುವಕ ಕಗ್ಗೊಲೆ! ಆರೋಪಿ ಬಂಧನ! ನಡೆದಿದ್ದೇನು?

Shimoga: Youth hacked to death in Ilyaz Nagar The accused has been arrested! What happened?

ಶಿವಮೊಗ್ಗದ ಇಲಿಯಾಜ್​ ನಗರದಲ್ಲಿ ಯುವಕ ಕಗ್ಗೊಲೆ! ಆರೋಪಿ ಬಂಧನ! ನಡೆದಿದ್ದೇನು?

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS

ಶಿವಮೊಗ್ಗ/ ನಗರದ ಇಲಿಯಾಜ್ ನಗರದಲ್ಲಿ ನಿನ್ನೆ ರಾತ್ರಿ ಯುವಕನನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. 100 ಅಡಿ ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಆರೋಪಿಯನ್ನ ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂಧಿಸಿದ್ಧಾರೆ. 

ನಡೆದಿದ್ದೇನು?

ಮಂಡ್ಲಿಯ ನಿವಾಸಿ ಆಸೀಫ್​ ಎಂಬಾತ ಕೊಲೆಯಾದ ಯುವಕ!. 25 ವರ್ಷದ ಆಸೀಪ್​ ಜಬಿ ಎಂಬಾತನ ಸಹೋದರಿಯ ಮಗಳಿಗೆ ತೊಂದರೆ ಕೊಡುತ್ತಿದ್ದ ಎಂಬುದು ಪ್ರಾಥಮಿಕವಾಗಿ ತಿಳಿದಬಂದಿರುವ ಮಾಹಿತಿ. ಇದೇ ಕಾರಣಕ್ಕೆ ಸಿಟ್ಟಾದ ಜಭಿ, ಆಸೀಫ್​ನನ್ನ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ಧಾರೆ. 

 

100 ಅಡಿ ರಸ್ತೆಯಲ್ಲಿ ಆಸೀಫ್​ನನ್ನ ಬೆನ್ನಟ್ಟಿದ ಜಬಿ, ಆತನ ತಲೆ ಹಿಂಬದಿಗೆ ಹಲವು ಸಲ ಹಲ್ಲೆ ಮಾಡಿದ್ದಾನೆ. ಸ್ಥಳದಲ್ಲಿಯೇ ತೀವ್ರ ರಕ್ತ ಸೋರಿಕೆಯಿಂದ ಆಸೀಫ್ ಪ್ರಾಣಬಿಟ್ಟಿದ್ದಾನೆ. ಇನ್ನೂ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. 

 


ಶಿವಮೊಗ್ಗದಲ್ಲಿ ಒಂದೇ ದಿನ 99 ವಾಹನಗಳು ಸೀಜ್! 99 ಕೇಸ್​ ದಾಖಲು! ಕಾರಣವೇನು ಗೊತ್ತಾ?

 

ಶಿವಮೊಗ್ಗ ಸಂಚಾರಿ ವೃತ್ತಕ್ಕೆ ಸರ್ಕಲ್​ ಇನ್​ಸ್ಪೆಕ್ಟರ್ ಸಂತೋಷ್​ ಕುಮಾರ್ ವಾಪಸ್ ಆಗುತ್ತಿದ್ದಂತೆ ಸಾಲು ಸಾಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ಧಾರೆ. ಇದಕ್ಕೆ ಪೂರಕವಾಗಿ ನಿನ್ನೆ  ಶಿವಮೊಗ್ಗ ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್  (Shrill Horns) ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

 

ಈ ಕಾರ್ಯಾಚರಣೆಯಲ್ಲಿ Shrill Horns ಗಳನ್ನು ಅಳವಡಿಸಿದ್ದ ಒಟ್ಟು 39 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 39 ಪ್ರಕರಣಗಳನ್ನು ದಾಖಲಿಸಲಾಗಿದೆ. 

ಸೊರಬದಲ್ಲಿಯು ಟ್ರಾಫಿಕ್​ ಪೊಲೀಸರ ಕಾರ್ಯಾಚರಣೆ

ಇನ್ನೂ ಅತ್ತ ಸೊರಬ ತಾಲ್ಲೂಕಿನಲ್ಲಿ ಸರ್ಕಲ್​ ಇನ್​ಸ್ಪೆಕ್ಟರ್​ ರಾಜಶೇಖರ್​ ನೇತೃತ್ವದಲ್ಲಿ ಆನವಟ್ಟಿಯ ಜೂನಿಯರ್ ಕಾಲೇಜು ಮತ್ತು ಬಸ್ ನಿಲ್ದಾಣದ ಬಳಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ಗಳನ್ನು ಅಳವಡಿಸಿದ್ದ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. 

 

ಅಲ್ಲದೆ  ಚಾಲನಾ ಪರವಾನಿಗೆ ಇಲ್ಲದೇ, ಹೆಲ್ಮೆಟ್ ಧರಿಸದೇ ಮತ್ತು ಅತಿವೇಗ ಹಾಗೂ ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸುತ್ತಿದ್ದ ವಾಹನ ಸವಾರರ ವಿರುದ್ಧ ಕೇಸ್ ದಾಖಲಿಸಲಾಯ್ತು. 

 

ಈ ಕಾರ್ಯಾಚರಣೆಯಲ್ಲಿ ಒಟ್ಟು 60 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಒಟ್ಟು 60 ಪ್ರಕರಣಗಳನ್ನು ದಾಖಲಿಸಲಾಗಿದೆ. 

 

ಎಫ್​ಸಿಐ ಗೋಡೌನ್​ನಲ್ಲಿಯೇ ವಾಹನಗಳನ್ನ ನಿಲ್ಲಿಸಬೇಕು

ಇನ್ನೂ ನಿನ್ನೆ  ಶಿವಮೊಗ್ಗ ಸಂಚಾರ ವೃತ್ತ ಪೊಲೀಸ್​ ಸ್ಟೇಷನ್​ ವ್ಯಾಪ್ತಿಯಲ್ಲಿ ಬರುವ  , ಎಫ್.ಸಿ.ಐ ಡಿವಿಷನಲ್ ಕಛೇರಿ ಶಿವಮೊಗ್ಗದಲ್ಲಿ  ಎಫ್.ಸಿ.ಐ ನ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತಂತೆ ಜಾಗೃತಿ ಮೂಡಿಸಲಾಗಿದೆ. 

 

ಇದೇ ವೆಳೇ,  ಎಫ್.ಸಿ.ಐ ನ ಲಾರಿ ಮತ್ತು ಗೂಡ್ಸ್ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸದೇ ಎಫ್.ಸಿ.ಐ ಗೋಡೌನ್ ನ ಆವರಣದ ಒಳಗೆ  ಸಂಚಾರಕ್ಕೆ ಅಡ್ಡಿಯಾಗದ ರೀತಿ ನಿಲುಗಡೆ ಮಾಡುಬೇಕು ಎಂದು ಸೂಚಿಸಲಾಯ್ತು. 

 


ಕಣ್ಣಮುಂದೆಯೇ ಕುಸಿದು ಬಿತ್ತು ಸೂರು! ತೀರ್ಥಹಳ್ಳಿಯಲ್ಲಿ ಎರಡು ದಲಿತ ಕುಟುಂಬಗಳ ಮನೆ ತೆರವು ! ಕಾರಣವೇನು?

 

ತೀರ್ಥಹಳ್ಳಿ/ ತಾಲ್ಲೂಕಿನ ಮೇಗರವಳ್ಳಿಯಲ್ಲಿ ನಿನ್ನೆ ಬುಧವಾರ ಎರಡು ದಲಿತ ಕುಟುಂಬಗಳ ಮನೆಗಳನ್ನ ಒಡೆದುಹಾಕಲಾಗಿದೆ. ಪರಿಣಾಮ, ಮನೆ ಕಳೆದುಕೊಂಡ 2 ಕುಟುಂಬಗಳ ಬದುಕಿನಲ್ಲಿಗ ಕತ್ತಲೆ ಆವರಿಸಿದೆ.

 

ಖಾಸಗಿ ಒಡೆತನಕ್ಕೆ ಸೇರಿದ ಜಾಗದ ಸಂಬಂಧ ಉದ್ಭವವಾಗಿದ್ದ ವಿವಾಧ ಕೋರ್ಟ್​ ಮೆಟ್ಟಿಲೇರಿತ್ತು. ಕೋರ್ಟ್​ ನಲ್ಲಿ ಸ್ವತ್ತು ತೆರವಿಗೆ ಆದೇಶ ಹೊರಬಿದ್ದಿದೆ. 

 

ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮೇಗರವಳ್ಳಿ ಗ್ರಾಮದ ಸ.ನಂ. 1ರ 10 ಗುಂಟೆ ಜಾಗದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರಾಧ, ಲಕ್ಷ್ಮೀ ಎಂಬ ಹೆಸರಿನ ದಲಿತ ಕುಟುಂಬಕ್ಕೆ ಸೇರಿದ ಮನೆಗಳು ಇದಾಗಿದ್ದು, ಮಹಿಳೆಯರ ಬದಕು ಬೀದಿಪಾಲಾಗಿದೆ.

ಇನ್ನೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಮನೆ ತೆರವುಗೊಳಿಸಲಾಗಿದ್ದರೂ, ನಡೆದ ಘಟನೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ವ್ಯಕ್ತವಾಗಿದೆ. ಕನಿಷ್ಟ ಪಕ್ಷ ಜನಪ್ರತಿನಿಧಿಗಳು ದಲಿತ ಕುಟುಂಬಗಳನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.