ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಂಡ ದೃಶ್ಯಗಳೇನು? ರಾಗಿಗುಡ್ಡದ ಘಟನೆ ಪರಿಣಾಮ ಬೀರಲಿಲ್ಲವೇಕೆ?

Ragigudda incident in Shimoga and Eid Milad celebration in Shimoga today report.ಶಿವಮೊಗ್ಗದ ರಾಗಿಗುಡ್ಡದ ಘಟನೆ ಮತ್ತು ಶಿವಮೊಗ್ಗದ ಈದ್ ಮಿಲಾದ್ ಸಂಭ್ರಮದ ಟುಡೆ ರಿಪೋರ್ಟ್​

ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಂಡ ದೃಶ್ಯಗಳೇನು? ರಾಗಿಗುಡ್ಡದ ಘಟನೆ ಪರಿಣಾಮ ಬೀರಲಿಲ್ಲವೇಕೆ?

KARNATAKA NEWS/ ONLINE / Malenadu today/ Oct 4, 2023 SHIVAMOGGA NEWS

ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಹಬ್ಬದ ಮೆರಣಿಗೆಯಲ್ಲಿ ನಿಜಕ್ಕೂ ಕಂಡ ದೃಷ್ಯಗಳೇನು ? ರಾಗಿಗುಡ್ಡದಲ್ಲಾದ ಗಲಾಟೆ..ಶಿವಮೊಗ್ಗ ನಗರದಲ್ಲಿ ಸಾಗುತ್ತಿದ್ದ ಬೃಹತ್ ಮೆರವಣಿಗೆಯ ಮೇಲೆ ಪರಿಣಾಮ ಬೀರಲಿಲ್ಲವೇಕೆ..ಇಲ್ಲಿದೆ ಟುಡೆ ಗ್ರೌಂಡ್ ರಿಪೋರ್ಟ್ ?

ಶಿವಮೊಗ್ಗದಲ್ಲಿ ಈ ಬಾರಿ ನಡೆದ ಈದ್ ಮಿಲಾದ್ ಮೆರವಣಿಗೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಬಿಜೆಪಿಯ ಆರೋಪಗಳಿಗೂ ಕಾರಣವಾಗಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಆಕ್ಷೇಪಾರ್ಯ ಕಟೌಟ್, ಡಿಜೆ ಸೌಂಡ್ ಎಫೆಕ್ಟ್, ಕತ್ತಿ ಚಾಕುಗಳೆಲ್ಲಾ ಪ್ರದರ್ಶನಗೊಂಡಿದೆ ಎಂಬುದು ಆರೋಪದ ಭಾಗವಾಗಿದೆ. ತುದಿ ಸೀಳಿದ ಕತ್ತಿಯನ್ನೇ ಪ್ರಧಾನ ಭೂಮಿಕೆಯನ್ನಾಗಿ ಈ ಬಾರಿ ಮುಸ್ಲಿಮರು ಬಳಸಿಕೊಂಡಿದ್ದಾರೆ.

ಮಹಾದ್ವಾರಗಳಲ್ಲಿ, ಸರ್ಕಲ್ ಗಳಲ್ಲಿ ದೊಡ್ಡ ಕತ್ತಿಯನ್ನೇ ಪ್ರತಿಷ್ಠಾಪಿಸಲಾಗಿತ್ತು.  ಇದು ಕೂಡ ಬಿಜೆಪಿ ಮುಖಂಡರ ಆರೋಪಕ್ಕೆ ಕಾರಣವಾಗಿದೆ. ಇವೆಲ್ಲವೂ ಮೇಲ್ನೋಟಕ್ಕೆ ಆಕ್ಷೇಪವಾಗಿ ಕಂಡರೂ, ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಡುಕನ್ನು ಮಾಡಬೇಕೆಂಬ ಉದ್ದೇಶವನ್ನು ಯಾವೊಬ್ಬ ಮುಸ್ಲಿಂ ಕೂಡ ಯೋಚನೆ ಮಾಡಿರಲಿಲ್ಲ ಎಂಬುದಕ್ಕೆ ಮೆರವಣಿಗೆ ಸಂಪೂರ್ಣ ಯಶಸ್ವಿಯಾಗಿರುವುದೇ ಕಾರಣವಾಗಿದೆ.

ಮೆರವಣಿಗೆಯಲ್ಲಿ ಜಗಮಗಿಸಿದ ಡಿಜೆ

01-10-23 ರ ಮದ್ಯಾಹ್ನ 2.30 ಕ್ಕೆ ನಗರದ ಗಲ್ಲಿಗಲ್ಲಿಗಳಿಂದ ಹೊರಟ ಮೆರವಣಿಗೆ ಅಮಿರ್ ಅಹಮ್ಮದ್ ವೃತ್ತ ತಲುಪುವುದರೊಳಗೆ ಹತ್ತತ್ರ ಮೂರು ಗಂಟೆಯಾಗಿತ್ತು. ಆರಂಭದಲ್ಲಿ ಮದರಸದ ಮಕ್ಕಳು ಮೌಲ್ವಿಗಳು ಪ್ರಾರ್ಥನೆ ಮಾಡಿಕೊಂಡು ಮುಂದೆ ಸಾಗಿದರು. ನಂತರ ಸರದಿ ಸಾಲಿನಲ್ಲಿ ವಿವಿಧ ಗಲ್ಲಿಗಳಿಂದ ಮುಸ್ಲಿಂ ಮುಖಂಡರು ಹಾಗು ಯುವಕರು ಹಸಿರು ಬಾವುಟ. ಟಿಪ್ಪು ಸುಲ್ತಾನ್ ಬಾವುಟಗಳನ್ನು ತಿರುಗಿಸುತ್ತಾ ಮುಂದೆ ಸಾಗಿದರು. ವಾಹನಗಳಲ್ಲಿ ಅಳವಡಿಸಿದ್ದ ಸ್ಪೀಕರ್ ಗಳಲ್ಲಿ ಡಿಜೆ ಅಬ್ಬರಕ್ಕೆ ಯುವಕರ ಗುಂಪು ಕುಣಿದು ಹೆಜ್ಜೆ ಹಾಕುತ್ತಿತ್ತು.

ಸಣ್ಣ ಮಕ್ಕಳಿಗೆ ಟಿಪ್ಪುವಿನ ಫೋಷಾಕು ಧರಿಸಿ ಸಿಂಹಾಸನದಲ್ಲಿ ಕೂರಿಸಿದ್ದ ದೃಷ್ಯ ಸಾಮಾನ್ಯವಾಗಿತ್ತು. ಮೆರವಣಿಗೆ ಉಸ್ತುವಾರಿ ವಹಿಸಿದ್ದ ಆಯೋಜಕರು ಎಲ್ಲರನ್ನು ಮುಂದೆ ಸಾಗುವಂತೆ ಮಾಡುತ್ತಿದ್ದರು. ಅಮಿರ್ ಅಹಮ್ಮದ್ ಸರ್ಕಲ್ ನಲ್ಲಿ ಪೊಲೀಸರು ವಿರಳವಾಗಿದ್ರೂ, ಮೆರವಣಿಗೆಯ ಮೇಲೆ ಅದು ಯಾವ ಪರಿಣಾಮ ಬೀರಿರಲಿಲ್ಲ. ಒಟ್ಟಿನಲ್ಲಿ ಮೆರವಣಗೆಯಲ್ಲಿ ಸಾಗುತ್ತಿದ್ದ ಮುಸ್ಲಿಂ ಭಾಂದವರ ಮುಖದಲ್ಲಿ ಜೋಷ್ ಕಳೆಯಿತ್ತು. ಅವರ ಸಂತೋಷ ಹರ್ಷೋದ್ಗಾರಕ್ಕೆ ಪಾರವೇ ಇರಲಿಲ್ಲ. 

ಡಿಜೆ ಸೌಂಡ್, ವೆಸ್ಟ್ರನ್ ಮ್ಯೂಸಿಕ್ ಮೆರವಣಿಗೆಯಲ್ಲಿ ಮೇಳೈಸಿದವು. ಶಿವಮೊಗ್ಗ ನಗರದ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಸಾಗಿದರೂ, ಎಲ್ಲೂ ಕೂಡ ತೊಂದರೆಯಾಗದಂತೆ ಆಯೋಜಕರು ಎಚ್ಚರವಹಿಸಿದ್ದರು. ದಾರಿ ಮದ್ಯೆ ಕುಡಿಯಲು ನೀರು ಪಾನೀಯದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕುದುರೆಗಳ ಮೇಲೆ ಸವಾರಿ, ವಾಹನಗಳ ಮೇಲೆ ಕುಣಿಯುತ್ತಿದ್ದ ಯುವಕರ ಮುಖದಲ್ಲಿ ಎಲ್ಲೂ ಕೆಡುಕನ್ನು ಬಯಸುವ ಉದ್ದೇಶ ಇರಲಿಲ್ಲ. ಕುಣಿ, ಕುಪ್ಪಳಿಸು ,ಮುಂದೆ ಸಾಗು ಎಂಬಂತಿತ್ತು  ಮೆರವಣಿಗೆ. ಪಟಾಕಿಗಳ ಸದ್ದು, ಡಿಜೆ ಅಬ್ಬರ ಮೆರವಣಿಗೆ ಮಂದನ ಮತ್ತು ಹಿಂದಿನ ಸಾಲಿನವರೆಗೂ ಒಂದೇ ರೀತಿಯಲ್ಲಿತ್ತು. ಇಂತಹ ಸಂತೋಷದಾಯಕ ವಾತಾವರಣದ ಮೆರವಣಿಗೆಯಲ್ಲಿ ಆಟಿಕೆಯಂತಿದ್ದ ಮರದ ಕತ್ತಿ ತಲವಾರುಗಳು ಪ್ರದರ್ಶನಗೊಂಡವು.

ನೈಜ ಚಾಕು ಪ್ರದರ್ಶನವಾಗಿದ್ದು ನಿಜ..ಆದರೆ ಅದರ ಸಂಖ್ಯೆ ವಿರಳಾತಿ ವಿರಳ

ಮರದಿಂದ ಮಾಡಿದ ಕತ್ತಿಗೆ ಸಿಲ್ವರ್ ಲೇಪನ ಮಾಡಿದ್ದರಿಂದ ಅದು ನೈಜ ಕತ್ತಿಯನ್ನು ಹೋಲುವಂತಿತ್ತು. ಇನ್ನು  ಅಮಿರ್ ಅಮಹ್ಮದ್ ವೃತ್ತದಿಂದ ಪ್ರದರ್ಶನಗೊಂಡ ಎರಡು ಅಲಗಿನ ಸಿಲ್ವರ್ ತಲವಾರು ಅದು ಬಳಕುತ್ತಿತ್ತು. ನೈಜ ಕತ್ತಿಯ ಸ್ವರೂಪ ಅದು ಹೊಂದಿರಲಿಲ್ಲ. ಬಳುಕುವ ಶೀಟ್ ನಿಂದ ಮಾಡಿದ ಕತ್ತಿಯ ಮಾಡಲ್ ಅದಾಗಿತ್ತು. ಇದರ ನಡುವೆ ಕೆಲವೇ ಕೆಲವು ಯುವಕರು ನೈಜ ಚಾಕುಗಳನ್ನು ಪ್ರದರ್ಶಿಸಿರುವುದು ಕ್ಯಾಮರಗಳಲ್ಲಿ ಸೆರೆಯಾಗಿದೆ.

ಇನ್ನು ಕೆಲವರು ಚಾಕುವನ್ನು ಹಸಿರು ಬಟ್ಟೆಯಲ್ಲಿ ಸುತ್ತಿಕೊಂಡು ಪ್ರದರ್ಶಿಸುತ್ತಿದ್ದರು. ಬಟ್ಟೆಯ ಒಳಗಿದ್ದದ್ದು ನೈಜ ಚಾಕುವೇ ಅಥವಾ ಆಟಿಕೆಯ ಚಾಕುವೆ ಎಂಬುದಕ್ಕೆ ಸ್ಪಷ್ಟತೆ ಸಿಗಲಿಲ್ಲ ಪ್ರದರ್ಶನಗೊಂಡ ಚಾಕು, ಕತ್ತಿ, ತಲವಾರುಗಳಲ್ಲಿ ಶೇಕಡಾ 99 ರಷ್ಟು ಮರದಿಂದ ಹಾಗು ರಟ್ಟಿನಿಂದ ತಯಾರಿಸಿದ ವಸ್ತುಗಳೇ ಆಗಿದ್ದವು. ಉಳಿದ ಒಂದು ಪರ್ಸೆಂಟ್ ಪ್ರದ್ರಶನಗೊಂಡ ಚಾಕುಗಳು ನೈಜವಾಗಿದ್ದವು.. ಇನ್ನು ಡಿಜೆಯಲ್ಲಿ ಮೂಡಿಬಂದ ಉತ್ತರ ಕರ್ನಾಟಕ ಶೈಲಿಯ ಭಾಷಣ ಭಾವನೆ ಕೆರಳಿಸುವಂತಿತ್ತು. ಇವುಗಳನ್ನು ತಡೆಯುವ ಕೆಲಸ ಆಯೋಜಕರು ಮಾಡಬೇಕಿತ್ತು. 

5.30 ಕ್ಕೆ ರಾಗಿಗುಡ್ಡದಲ್ಲಿ ಗಲಾಟೆ ಆರಂಭ

ರಾಗಿಗುಡ್ಡ ಘಟನೆ ಕರಿ ನೆರಳು ಶಿವಮೊಗ್ಗ ನಗರದ ಈದ್ ಮೆರವಣಿಗೆ ಮೇಲೆ ಬೀರಲಿಲ್ಲ, ಮೆರವಣಿಗೆಯ ಮುಂಭಾಗ ಅಮಿರ್ ಅಹಮ್ಮದ್ ವೃತ್ತ ತಲುಪುತ್ತಿದ್ದರೆ, ಇನ್ನು ಮೆರವಣಿಗೆ ಕೊನೆ ಸಾಲು ಅಮಿರ್ ಅಹಮ್ಮದ್ ವೃತ್ತದಲ್ಲೇ ಇತ್ತು. ಶಿವಮೊಗ್ಗ ನಗರದ ಹೃದಯಭಾಗದ ಒಂದು ವೃತ್ತ ಈದ್ ಮೆರವಣಿಗೆಯೇ ಇತ್ತು.

ರಸ್ತೆಗಳ ಇಕ್ಕೆಲಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಮೆರವಣಿಗೆ ಕಣ್ತುಂಬಿಕೊಳ್ಳುತ್ತಿದ್ದರು. ಯಾವುದೇ ದ್ವೇಷದ ಘೋಷಣೆಗಳು ಮೆರವಣಿಗೆಯಲ್ಲಿ ಕೇಳಿ ಬರಲಿಲ್ಲ. ಒಂದು ರೀತಿಯಲ್ಲಿ ಹಬ್ಬದ ಸಂಭ್ರಮವೇ ಅಲ್ಲಿ ಮನೆ ಮಾಡಿತ್ತು. ಇಂತಹ ಸಂದರ್ಭದಲ್ಲಿಯೇ ರಾಗಿಗುಡ್ಡದ ಶಾಂತಿ ನಗರದಲ್ಲಿ ಈದ್ ಮೆರವಣಿಗೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಿದರೆಂಬ ಆಕ್ರೋಶದಿಂದ ಉಂಟಾದ ಗಲಾಟೆ, ಲಾಠಿ ಚಾರ್ಚ್ ವರೆಗೂ ಮುಂದುವರೆಯಿತು. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸ್ ವಾಹನಗಳು ರಾಗಿಗುಡ್ಡದ ಕಡೆ ಮುಖ ಮಾಡಿದವು. 

50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ಮೇಲೆ ಅದು ಯಾವ ವ್ಯತಿರಿಕ್ತ ಪರಿಣಾಮ ಬೀರುತ್ತೋ ಎಂಬ ಆತಂಕ ಎಲ್ಲರಲ್ಲಿತ್ತು. ರಾಗಿಗುಡ್ಡದಲ್ಲಿ ಗಲಾಟೆಯಾಗುತ್ತಿರುವ ವಿಷಯ ಗೊತ್ತಿದ್ದರೂ, ಶಿವಮೊಗ್ಗ ನಗರದ ಮುಸ್ಲಿಮರು  ಶಾಂತಿಯುತವಾಗಿಯೇ ಮರವಣಿಗೆಯಲ್ಲಿ ಸಾಗಿದರು. ಮುಸ್ಲಿಂ ಹೆಣ್ಣು ಮಕ್ಕಳನ್ನು ಬೇಗನೇ ಮನೆ ಸೇರುವಂತೆ ಹೇಳಿದರು. ರಾಗಿಗುಡ್ಡದ ಗಲಾಟೆಯಿಂದ ನಗರದ ಮುಸ್ಲಿಂ ಜನತೆ ವಿಚಲಿತರಾಗದೆ, ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.

ಆಯೋಜಕರು ಪೊಲೀಸರ ಭದ್ರತೆ ಹೊಣೆಯನ್ನು ಕಡಿಮೆ ಮಾಡಿದರು. ರಾಗಿಗುಡ್ಡದ ಘಟನೆಯೊಂದು ನಡೆಯದೆ ಹೋಗಿದ್ದರೆ, ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆ ಸ್ವರೂಪವೇ ಬರೆ ಆಗಿರುತ್ತಿತ್ತು. ಏನೇ ಆಗಲಿ ಶಿವಮೊಗ್ಗ ಶಾಂತವಾಗಿರಬೇಕು. ಹಬ್ಬಗಳು ಪೈಪೋಟಿಯ ಪ್ರತೀಕವಾಗದೆ, ತಮ್ಮ ದಾರ್ಮಿಕ ಸೈದ್ದಾಂತಿಕ ನಿಲುವುಗಳನ್ನು ಪ್ರತಿಪಾಧಿಸುವ ಸಂಕೇತವಾಗಿರಬೇಕು ಎಂಬುದು ಟುಡೆಯ ಆಶಯವಾಗಿದೆ.


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!