ಹೇಗೆ ಸಾಗಲಿದೆ ಈದ್ ಮಿಲಾದ್ ಮೆರವಣಿಗೆ! ವಾಹನ ಸವಾರರಿಗೆ ಪರ್ಯಾಯ ಮಾರ್ಗ ಯಾವುದು? ಏನಿದೆ ಜಿಲ್ಲಾಡಳಿತದ ಆದೇಶದಲ್ಲಿ!

The district administration has issued an order to change the vehicular traffic in the wake of the Eid Milad processionಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ

ಹೇಗೆ ಸಾಗಲಿದೆ ಈದ್ ಮಿಲಾದ್  ಮೆರವಣಿಗೆ!  ವಾಹನ ಸವಾರರಿಗೆ ಪರ್ಯಾಯ ಮಾರ್ಗ ಯಾವುದು? ಏನಿದೆ ಜಿಲ್ಲಾಡಳಿತದ ಆದೇಶದಲ್ಲಿ!

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆಯಲ್ಲಿ  ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚನೆ ಮಾಡಿರುವ ಜಿಲ್ಲಾಡಳಿತ ಈದ್ ಮಿಲಾದ್ ಮೆರವಣಿಗೆ ಸಂಬಂಧ ಸಂಚಾರ ಸುಗಮಕ್ಕಾಗಿ ಮಾರ್ಗ ಬದಲಾವಣೆಯ ಪ್ರಕಟಣೆಯನ್ನು ಹೊರಡಿಸಿದೆ. 

ಶಿವಮೊಗ್ಗ ನಗರದಲ್ಲಿ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ವಿವಿಧ ಭಾಗಗಳಲ್ಲಿ ಮೆರಮಣಿಗೆ ಸಾಗುವುದರಿಂದ ಸುಗಮ ವಾಹನ ಸಂಚಾರ ಸಲುವಾಗಿ ಶಿವಮೊಗ್ಗ ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ ಹಾಗೂ ನಿಲುಗಡೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ. 

ದಿನಾಂಕ:01.10.2023ರಂದು ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆಯು ಶಿವಮೊಗ್ಗ ನಗರದ ಗಾಂಧಿಬಜಾರ್ ಜಾಮೀಯ ಮಸೀದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್ 2ನೇ ಕ್ರಾಸ್,ನಾಗಪ್ಪನ ಕೇರಿ,ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಮುಖಾಂತರ ಓಲ್ಡ್ ಬಾರ್ ಲೈನ್ ರಸ್ತೆ, ಪೆನ್ನನ್ ಮೊಹಲ್ಲಾ, ಬಿ.ಹೆಚ್ ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಬಾಂಡ್ ರಸ್ತೆ, ಬಾಪೂಜೆ ನಗರ ಮುಖ್ಯರಸ್ತೆ ಟ್ಯಾಂಕ್ ಮೊಹಲ್ಲಾ,ಬಾಲರಾಜ್ ಅರಸ್ ರಸ್ತೆ, ಮಹಾವೀರ ಸರ್ಕಲ್ ಗೋಪಿ ಸರ್ಕಲ್ ನೆಹರು ರಸ್ತೆ ಮುಖಾಂತರವಾಗಿ ಅಮೀರ್ ಅಹಮ್ಮದ್ ಸರ್ಕಲ್, ಬಿಹೆಚ್ ರಸ್ತೆ ಅಶೋಕ ಸರ್ಕಲ್,ಎನ್ ಟಿ ರಸ್ತೆ ಗುರುದೇವ ರಸ್ತೆ, ರ್ಕ್ಲಾಕ್‌ ಪೇಟೆ, ನೂರಾನಿ ಮಸೀದಿ ,ಕೆಆರ್ ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ ತಲುಪಲಿದೆ. 

1. ಈ ಹಿನ್ನೆಲೆಯಲ್ಲಿ  ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತ-ಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ.

2. ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.

3. ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್ ಗಳು ಎಂ.ಆರ್.ಎಸ್. .ಬೈಪಾಸ್‌ ರಸ್ತೆ ಮುಖಾಂತರ ಹೋಗುವುದು.

4. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ, ಮತ್ತು ಬಸ್ ಗಳು ಹೊಳೆಹೊನ್ನೂರು ಸರ್ಕಲ್,ಎಂ.ಆರ್ ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

5. ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ, ಶಂಕರಮಠ ಸರ್ಕಲ್,ವಿದ್ಯಾನಗರ ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.

6. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ,ದಾವಣಗೆರೆಗೆ ಹೋಗುವ ಎಲ್ಲಾ ಬಸ್ ಗಳು ಮತ್ತು ಭಾರಿ ಸರಕು ವಾಹನಗಳು ಬೈಪಾಸ್ ಮುಖಾಂತರವಾಗಿ ಎಂಆರ್ ಎಸ್ ಸರ್ಕಲ್, ವಿದ್ಯಾನಗರ ಶಂಕರಮಠ ಸರ್ಕಲ್, ಸಂಗೊಳ್ಳಿರಾಯಣ್ಣ ಸರ್ಕಲ್ ಮುಖಾಂತರ ಹೋಗುವುದು

7. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಅರ್.ಎಸ್ ಸರ್ಕಲ್ ಕಡೆಗೆ ಹೋಗುವುದು.

8. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಅಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ.




ಇನ್ನಷ್ಟು ಸುದ್ದಿಗಳು