ಭದ್ರಾವತಿಗೆ ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

Yaduvira Krishnadatta Chamaraja Wodeyar who came to Bhadravati ಭದ್ರಾವತಿಗೆ ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಭದ್ರಾವತಿಗೆ ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

BHADRAVATI | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ VISL  ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಶತಮಾನೋತ್ಸವ ಹಿನ್ನೆಲೆಯಲ್ಲಿ ಭದ್ರಾವತಿಗೆ ಮೈಸೂರು ಒಡೆಯರ್ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​​ ರವರು ಆಗಮಿಸಿದ್ದಾರೆ. 

ಇಂದು ಮತ್ತು ನಾಳೆ ನಡೆಯಲಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವದಲ್ಲಿ ಒಡೆಯರ್ ಪಾಲ್ಗೊಳ್ಳಲಿದ್ದಾರೆ. 

READ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ | ಸಂದರ್ಶನ ಯಾವಾಗ ಗೊತ್ತಾ?

ನಿನ್ನೆ ಭದ್ರಾವತಿಗೆ ಅವರು ಆಗಮಿಸುತ್ತಲೇ ಹಲವು ಅಭಿಮಾನಿಗಳು ಅವರನ್ನ ಭೇಟಿಯಾದರು, ಭದ್ರಾ ಜಲಾಶಯ ಸಮೀಪದ ಜಂಗಲ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಅವರನ್ನು  ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬಸ್ಥರು ಹಾಗು ಅಭಿಮಾನಿಗಳು ಸ್ವಾಗತಿಸಿದರು. ಬಳಿಕ ಅವರನ್ನ ಹಲವು ಸಂಘಟನೆಗಳು ಭೇಟಿಯಾಗಿ ಕಾರ್ಖಾನೆಯ ಉಳಿವಿಗಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಮನವಿ ಮಾಡಿದರು. 

ಇವತ್ತು ಯದುವೀರ್​ ರವರು  ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ.