Shivamogga Feb 12, 2024 | ಮನೆ ಕಾಂಪೌಂಡ್ ಒಳಗಿದ್ದ ಬೈಕ್ ಕಳ್ಳತನ ಮಾಡಿದ ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದೆ. ಕುಟುಂಬದವರು ಮಲಗಿದ್ದಾಗ ಕಿಟಕಿಯಿಂದ ಕೈ ಹಾಕಿ ಮನೆಯ ಬಾಗಿಲು ತೆಗೆದ ಕಳ್ಳರು ನಗದು, ವಾಚ್, ಜರ್ಕಿನ್, ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಕದ್ದ ಘಟನೆ ಇಲ್ಲಿನ ಅಶೋಕ ನಗರದಲ್ಲಿ ನಡೆದಿದೆ.
ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರೂ ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿದ ಕಳ್ಳರು ಕೊಟ್ರಪ್ಪ ಅವರ ಕೊಠಡಿಯಲ್ಲಿದ್ದ ಬೀರುವಿನಿಂದ 43,800 ರೂ. ನಗದು, ಮಗನ ಬೆಡ್ ರೂಂನಲ್ಲಿರುವ ಬೀರುವಿನಿಂದ 4 ವಾಚ್, 2 ಜರ್ಕಿನ್, ಶೋಕೇಸ್‌ನಲ್ಲಿದ್ದ 3 ವಾಚ್, ರಾಯಲ್ ಎನ್ ಫಿಲ್ಡ್ ಬೈಕ್‌ನ ಕೀ ಕದ್ದೊಯ್ದಿದ್ದಾರೆ.
ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳ್ಳರು ಕಿಟಕಿಯಿಂದ ಒಳಗೆ ಕೈ ಹಾಕಿ ಬಾಗಿಲಿನ ಚಿಲಕ ತೆಗೆದು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
