Shivamogga Feb 13, 2024 | ಶಿವಮೊಗ್ಗದ ಗೊಂದಿ ಚಟ್ನಹಳ್ಳಿ ಸಮೀಪ ಮರವೊಂದು ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ರಸ್ತೆ ಮೇಲೆ ಹೋಗುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಒಂದು ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಗೊಂದಿ ಚಟ್ನಹಳ್ಳಿ ಸಮೀಪ ಘಟನೆ
ಗೋಂದಿ ಚಟ್ನಳ್ಳಿ ಸಮೀಪ ಮೇನ್ ರೋಡ್ನಲ್ಲಿ ವಾಹನಗಳು ಸಾಗುತ್ತಿದ್ದವು, ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮರವೊಂದು ನೆಲಕ್ಕೆ ಉರುಳಿದೆ. ನೆಲಕ್ಕೆ ಉರುಳಿದ ಮರದ ಕೊಂಬೆಯೊಂದು ನೇರವಾಗಿ ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್ವೊಂದರ ಮೇಲೆ ಬಿದ್ದಿದೆ. ಪರಿಣಾಮ ಬೈಕ್ನಲ್ಲಿದ್ದ ದಂಪತಿ ಹಾಗು ಮಗು ನೆಲಕ್ಕುರುಳಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಘಟನೆ ಸಂದರ್ಭದಲ್ಲಿ ಬೈಕ್ನ ಸಮೀಪದಲ್ಲಿಯೇ ಲಾರಿಯೊಂದು ಸಹ ಬಂದಿದೆ. ಮರ ಬಿದ್ದ ತಕ್ಷಣವೇ ಲಾರಿಯು ಸಹ ಅಲ್ಲಿಯೇ ನಿಂತಿದೆ. ಈ ಎಲ್ಲಾ ದೃಶ್ಯಗಳು ಸ್ಥಳೀಯವಾಗಿ ಹಾಕಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.