ಎರಡು ದಿನಗಳಿಂದ ಗೊಂದಿ ಚಟ್ನಹಳ್ಳಿಯಿಂದ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಮರದಲ್ಲಿ ಪತ್ತೆ!

The body of a man, who had been missing from Gondi Chattanahalli for two days, was found in a tree.

ಎರಡು ದಿನಗಳಿಂದ ಗೊಂದಿ ಚಟ್ನಹಳ್ಳಿಯಿಂದ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಮರದಲ್ಲಿ ಪತ್ತೆ!
Gondi Chattanahalli

Shivamogga | Feb 9, 2024 |  ಶಿವಮೊಗ್ಗದ ಗೋಂದಿ ಚಟ್ನಹಳ್ಳಿಯಿಂದ ನಾಪತ್ತೆಯಾದ ವ್ಯಕ್ತಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಶವ ತುಂಗಾ ನದಿ ತೀರದಲ್ಲಿ ಮರವೊಂದರಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ ಈ ಘಟನೆ ನಡೆದಿದೆ ನಗರದ ಗೊಂದಿ ಚಟ್ನಹಳ್ಳಿ  ರೈತ 40 ವರ್ಷದ ಮಹೇಶ್ ಮೃತರು. ಎರಡು ದಿನಗಳಿಂದ ಕಾಣದೇ ಹೋಗಿದ್ದ ಇವರಿಗಾಗಿ ಸ್ಥಳೀಯರು ಸೇರಿದಂತೆ ಕುಟುಂಬಸ್ಥರು ಹುಡುಕಾಡುತ್ತಿದ್ದರು. ನಿನ್ನೆ ಇವರ ಮೃತದೇಹ ಪತ್ತೆಯಾಗಿದೆ. ಸುಮಾರು 15 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಇವರು ಅದೇ ಕಾರಣಕ್ಕೆ ನೇಣು ಬಿಗಿದುಕೊಂಡಿರಬಹುದು ಎಂದು ಶಂಕಿಸಲಾಗಿದೆ.