ತುಂಗಾ ನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಸಾಪ್ಟವೇರ್‌ ಉದ್ಯೋಗಿ ಮಹಿಳೆ ಆತ್ಮಹತ್ಯೆ ! ಮೂವರ ವಿರುದ್ಧ ಕೇಸ್‌

A woman software employee committed suicide in Tunga Nagar Police Station Limits! Case against three

ತುಂಗಾ ನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಸಾಪ್ಟವೇರ್‌ ಉದ್ಯೋಗಿ ಮಹಿಳೆ ಆತ್ಮಹತ್ಯೆ ! ಮೂವರ ವಿರುದ್ಧ ಕೇಸ್‌
Tunga Nagar Police Station, software employee

Shivamogga  Mar 30, 2024  ಶಿವಮೊಗ್ಗ ತುಂಗಾನಗರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಸಾಪ್ಟ್‌ವೇರ್‌ ಉದ್ಯೋಗಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ 

ಕಳೆದ 29 ನೇ ತಾರೀಖು ಸಂಜೆ ಹೊತ್ತಿಗೆ ಘಟನೆ ನಡೆದಿದ್ದು ಘಟನೆ ಸಂಬಂಧ ಮಹಿಳೆಯ ಪತಿ ಹಾಗೂ ಅತ್ತೆ ಮಾವನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ 498A3048.342 DOWRY PROHIBITION ACT, 1961 (Ule-3,4) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಹಿಳೆಯು ತನಗಾಗುತ್ತಿರುವ ತೊಂದರೆಯನ್ನು ತನ್ನ ತವರು ಮನೆಯವರ ಬಳಿ ಹೇಳಿಕೊಂಡಿದ್ದಾಳೆ. ಸಾಯುವುದಕ್ಕೂ ಕೆಲಹೊತ್ತಿಗೂ ಮೊದಲೇ ಆಡಿದ ಮಾತುಗಳನ್ನ ಫೋನ್‌ ಕರೆಯಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ ತವರು ಮನೆಯವರು ವಿಚಾರಿಸಲು ಮಹಿಳೆಯ ಗಂಡನ ಮನೆಗೆ ಹೋದಾಗ ಆಕೆ ಬಾಗಿಲು ಹಾಕಿಕೊಂಡು ರೂಮಿನಲ್ಲಿರುವುದು ಗೊತ್ತಾಗಿದೆ. 

ಬಾಗಿಲು ತಟ್ಟಿದರೂ ತೆರೆಯದ ಹಿನ್ನೆಲೆಯಲ್ಲಿ ರೂಮಿನ ಡೋರ್‌ ಒಡೆದು ಒಳಗೆ ನೋಡಿದ್ರೆ ಮಹಿಳೆಯು ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಗಾಡಿಕೊಪ್ಪದಲ್ಲಿ ಈ ಘಟನೆ ನಡೆದಿದ್ದು ಕುಟುಂಬಸ್ಥರು ಮಹಿಳೆಯ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ವರದಕ್ಷಿಣೆಗಾಗಿ ತೊಂದರೆ ಕೊಡುತ್ತಿದ್ದರು ಎಂದು ಆರೋಪಿಸಿದ್ದಾರೆ