ಸಂಸದ ರಾಘವೇಂದ್ರರವರು ಟೈಂ ಫಿಕ್ಸ್‌ ಮಾಡಲಿ! ಘಂಟೆ ಹೊಡೆಯಲು ರೆಡಿ ಎಂದ ಕೆಎಸ್‌ ಈಶ್ವರಪ್ಪ! ಉತ್ತರಪ್ರದೇಶದಿಂದ ಬಂತಂತೆ ಫೋನ್‌ ಕಾಲ್‌!?

Let MP Raghavendra fix the time! KS Eshwarappa said he is ready to ring the bell! A phone call from Uttar Pradesh!?

ಸಂಸದ ರಾಘವೇಂದ್ರರವರು ಟೈಂ ಫಿಕ್ಸ್‌ ಮಾಡಲಿ! ಘಂಟೆ ಹೊಡೆಯಲು ರೆಡಿ ಎಂದ ಕೆಎಸ್‌ ಈಶ್ವರಪ್ಪ! ಉತ್ತರಪ್ರದೇಶದಿಂದ ಬಂತಂತೆ ಫೋನ್‌ ಕಾಲ್‌!?
KS Eshwarappa , MP Raghavendra

Shivamogga  Mar 30, 2024   ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಇವತ್ತು ಸಹ ಬಿಎಸ್‌ವೈ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಎಂಪಿಯಾಗಬೇಕು ಎಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ನನ್ನ ತಾಯಿಯನ್ನು ಉಳಿಸಬೇಕು ಎಂದು ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಪ್ರಧಾನಿ ನರೇಂದ್ರ ಮೋದಿಯಾಗಲಿ, ಗೃಹಸಚಿವ ಅಮಿತ್‌ ಶಾ ರಾಗಲಿ ಫೋನ್‌ ಮಾಡಿಲ್ಲ. ಆದರೆ ಉತ್ತರ ಪ್ರದೇಶದ ಪ್ರಭಾವಿ ಅಖಿಲೇಶ್‌ ಯಾದವ್‌ ನನಗೆ ಕರೆ ಮಾಡಿದ್ದರು. ಆದರೆ ನಾನು ಕರೆ ಸ್ವೀಕರಿಸಲಿಲ್ಲ. ತಕ್ಷಣವೇ ಮೆಸೇಜ್‌ ಹಾಕಿದ್ದರು ಕಾಲ್‌ ಮಿ ಅರ್ಜೆಂಟ್‌ ಅಖಿಲೇಶ್‌ ಯಾದವ್‌ ಎಂದು. ಆದರೆ ಅದಕ್ಕೂ ಉತ್ತರಿಸಲಿಲ್ಲ. ಇಲ್ಲಿ ನಾನು ಎಂಪಿಯಾಗುವುದು ಮುಖ್ಯವಲ್ಲ. ಪಕ್ಷ ಉಳಿಸುವುದಷ್ಟೆ ನನ್ನ ಉದ್ದೇಶ ಎಂದರು. 

ಇನ್ನೂ ಇದೇ ವೇಳೆ ಬಿಎಸ್‌ ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ನನ್ನ ಹತ್ತಿರ ಬರುತ್ತಾರೆ. ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದರು. ಅವರ ಶಕ್ತಿ 6 ಸೀಟು ಅಷ್ಟೇ. ಕೆಜೆಪಿ ಕಟ್ಟಿದ್ದಾಗ ಎಷ್ಟು ಸೀಟು ತಗೊಂಡರು ಯಡಿಯೂರಪ್ಪ ಅಂತಾ ಈಶ್ವರಪ್ಪ ಪ್ರಶ್ನಿಸಿದ್ರುಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋದವರನ್ನ ಕರೆದುಕೊಂಡು ಬಂದು ಟಿಕೆಟ್ ನೀಡಿದ್ದಾರೆ. ಬಿಎಸ್‌ವೈ ಕಾಂಗ್ರೆಸ್ ನವರ ಹತ್ತಿರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಕುಟುಂಬಸ್ಥರು ದುಡ್ಡು ಸುರಿದು ಶಿಕಾರಿಪುರದಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪನವರು ರಾಘವೇಂದ್ರ ಮತ್ತು ಅವರ ಕಂಪನಿ ನನ್ನ ಜೊತೆಗೆ ಬಂದವರಿಗೆ ಕಾಲ್ ಮಾಡ್ತಿದ್ದಾರೆ ಎಂದು ಮತ್ತೆ ಆರೋಪಿಸಿದರು. 

ದೇವರಿಗೂ ನಾನು ಚುನಾವಣೆ ನಿಲ್ಲೋದು ಅನುಮಾನ ಇತ್ತು, ಆದರೆ ಚುನಾವಣೆ ನಿಲ್ಲೋದು ನೂರಕ್ಕೆ ನೂರು ಸತ್ಯ.  ಏ‌.12 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದ ಈಶ್ವರಪ್ಪ ಸಂಸದ ರಾಘವೇಂದ್ರರವರ ಸವಾಲಿಗೂ ಉತ್ತರಿಸಿದ್ದಾರೆ.  ದೇವರ ಹತ್ರ ಹೋಗಿ ಘಂಟೆ  ಬಾರಿಸೋದು ನನ್ನ ಜೀವನದಲ್ಲಿ ಮಾಡಿಲ್ಲ. ಸಂಸದ ಬಿವೈ ರಾಘವೇಂದ್ರರಿಗೆ  ಸುಳ್ಳು ಹೇಳಿ ಅಭ್ಯಾಸವಾಗಿದೆ. ಅವರು ಟಿಕೆಟ್ ಕೊಡಿಸುತ್ತೇವೆ ಎಂದಿಲ್ಲ ಎಂದು ಘಂಟೆ ಹೊಡೆಯುತ್ತಾರಾ? ಎಂದು ಪ್ರಶ್ನಿಸಿದ್ರು. 

ಘಂಟೆ ಸವಾಲು ಶುರುವಾಗಿದ್ದು ಇಲ್ಲಿಂದ  : ಸ್ವಾಮೀಜಿಗಳಿಗೆ ಬೆದರಿಕೆ ಆರೋಪ ! ದೇವಸ್ಥಾನದಲ್ಲಿ ಘಂಟೆ ಹೊಡೆಯುತ್ತೇನೆ ಎಂದ ಸಂಸದ ರಾಘವೇಂದ್ರ

ಸ್ವಾಮೀಜಿಗಳಿಗೆ ನೋವು ಆಗುವ ರೀತಿ ರಾಘವೇಂದ್ರ ಮತ್ತು ಅವರ ಕಡೆಯವರು ಮಾಡಿದ್ದಾರೆ. ಸಾಧು ಸಂತರಿಗೆ ನೋವು ಮಾಡಿಲ್ಲ ಎಂದರೆ, ಎಲ್ಲಿ ಬೇಕಾದರೂ ಹೇಳಲಿ ನಾನು ಬಂದು ಘಂಟೆ ಬಾರಿಸುತ್ತೇನೆ ಎಂದು ಈಶ್ವರಪ್ಪ ರಾಘವೇಂದ್ರರವರ ಸವಾಲನ್ನ ಸ್ವೀಕರಿಸಿದ್ದಾರೆ.  ಸ್ವಾಮೀಜಿಗಳಿಗೆ ನೋವು ಮಾಡಿಲ್ಲ ಅಂತ ಘಂಟೆ ಬಾರಿಸಲಿ ನಾನು ತಯಾರಿದ್ದೇನೆ ಎಂದ ಅವರು ಸಮಯ, ದಿನಾಂಕ ನಿಗದಿ ಪಡಿಸಲಿ ಎಂದರು. 

ಕ್ಲಿನ್ ಚಿಟ್ ಸಿಕ್ಕರೂ ನನಗೆ ಮಂತ್ರಿ ಸ್ಥಾನ ಕೊಡಲಿಲ್ಲ. ಅಪ್ಪ ಮಕ್ಕಳು ಬರೇ ಸುಳ್ಳು ಹೇಳುತ್ತಾರೆ .ರಾಘವೇಂದ್ರ ಅಪೇಕ್ಷೆ ಪಟ್ಟರೇ ಅವರು ಎಲ್ಲಿ ಹೇಳಿದರು ನಾನು ಘಂಟೆ ಹೊಡೆಯಲು ರೆಡಿ, ಬೇಕಾದರೆ ಅಯೋಧ್ಯೆಯಗೆ ಬೇಕಾದರೂ ಬಂದು ಘಂಟೆ ಹೊಡೆಯುತ್ತೇನೆ, ಆದರೆ ಘಂಟೆ ಹೊಡೆಯುವ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದರು

ಮುಂದಿನ ಭಾರಿ ಬಿಜೆಪಿ ಟಿಕೆಟ್ ನಾನೇ ಕೊಡೋದು, ಇದನ್ನು  ಬರೆದು ಇಟ್ಟುಕೊಳ್ಳಿ, ನನ್ನ ಹೃದಯದಲ್ಲಿ ಒಂದು ಕಡೆ ರಾಮ ಇನ್ನೊಂದು ಕಡೆ ಮೋದಿ ಇದ್ದಾರೆ. ಬಿಜೆಪಿ ಯವರು ಇನ್ನೂ ನನ್ನ ಯಾಕೇ ತಗೆದಿಲ್ಲ ಅಂತ ಗೊತ್ತಿಲ್ಲ ಎಂದಿದ್ದಾರೆ