ಕೆಎಸ್‌ ಈಶ್ವರಪ್ಪರ ಅಗ್ರೆಸಿವ್ ಮಾತಿನಾಟಕ್ಕೆ ಬಿವೈ ರಾಘವೇಂದ್ರರ ತಾಳ್ಮೆಯ ಕ್ಷೇತ್ರ ರಕ್ಷಣೆ! ಎಲೆಕ್ಷನ್‌ ಮ್ಯಾಚ್‌ನಲ್ಲಿ ಇವತ್ತು ಏನಾಯ್ತು ಓದಿ!

Malenadu Today

Shivamogga  Mar 28, 2024    ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಇದಕ್ಕವರು ನೀಡುತ್ತಿರುವ ಕಾರಣ ಬಿಎಸ್‌ವೈ ಕುಟುಂಬ. ಅಲ್ಲದೆ ಇದೇ ವಿಚಾರದಲ್ಲಿ ಬಿಎಸ್‌ ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರ ವಿರುದ್ಧ ನಡೆಸ್ತಿರುವ ವಾಗ್ದಾಳಿಯನ್ನು ಇವತ್ತು ಕೂಡ ಮುಂದುವರಿಸಿದ್ದಾರೆ. 

ಬಿಎಸ್‌ ಯಡಿಯೂರಪ್ಪರವರು ಆಶ್ವಾಸನೆ ನೀಡುತ್ತಾರೆ ಈಡೇರಿಸುವುದಿಲ್ಲ. ಬಿಎಸ್‌ವೈ ಸೇರಿದಂತೆ ಬಿವೈ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎನ್ನುತ್ತಿದ್ದಾರೆ. ಈ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಂತರ ಸಂಸದ ರಾಘವೇಂದ್ರರಿಗೆ ಸೋಲಾಗುತ್ತದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಯುತ್ತಾರೆ ಎಂದಿದ್ದಾರೆ. 

ಇನ್ನೂ ಇದೇ ವಿಚಾರಕ್ಕೆ ಅತ್ತ ಕೌಂಟರ್‌ ನೀಡಿರುವ ಸಂಸದ ಬಿವೈ ರಾಘವೇಂದ್ರ  ಸೂಕ್ತ ಸಮಯದಲ್ಲಿ ಕೆಎಸ್ ಈಶ್ವರಪ್ಪನವರ ಬಗ್ಗೆ ಪಕ್ಷದ ಹಿರಿಯರು ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಆ ಪ್ರಮೇಯ ಬರಲಾರದು ಎಂಬ ವಿಶ್ವಾಸ ನನಗಿದೆ. ತಾಳ್ಮೆ ಬಹು ಮುಖ್ಯ. ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಪಕ್ಷದ ಹಿರಿಯರು ಅವರ ಚಟುವಟಿಕೆಯನ್ನು ಗಮನಿಸುತ್ತಿದ್ದಾರೆ. ಖಂಡಿತ ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಈಶ್ವರಪ್ಪನವರು ಹಾಗೂ ಅವರ ಹಿಂದುತ್ವದ ಬಗ್ಗೆ ನಮಗೂ ಗೌರವಿದೆ. ಹಿಂದುತ್ವಕ್ಕೆ ಬಿ.ಎಸ್. ಯಡಿಯೂರಪ್ಪನವರ ಕೊಡುಗೆ ಏನು ಇಲ್ಲ ಎಂದು ಅವರು ಹೇಳಿದ್ದಾರೆ. ನಾನು ಕೂಡ ಆ‌ರ್.ಎಸ್‌.ಎಸ್ ಶಾಲೆಯಲ್ಲಿಯೇ ಕಲಿತವನು, ರಾಮಮಂದಿರ, ಈದ್ದಾ ಮೈದಾನ ವಿಷಯ ಬಂದಾಗ, ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಬಿ.ಎಸ್.ಯಡಿಯೂರಪ್ಪನವರು ಏನು ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. 

ನರೇಂದ್ರ ಮೋದಿಗಿಂತ ಹಿಂದುತ್ವ ಬೇಕಾ, ಅವರು ಹೀಗೆ ಮಾತನಾಡಿದ್ದಕ್ಕೆ ಖಂಡಿತ ಬೇಜಾರಿದೆ. ಕಾಲ ಹೀಗೆ ಇರುವುದಿಲ್ಲ. ಆದಷ್ಟು ಬೇಗ ಒಳ್ಳೆಯ ದಿನಗಳು ಬರುತ್ತವೆ. ಬೆಳಗಾವಿ, ದಾವಣಗೆರೆಯಲ್ಲಿ ಭಿನ್ನಮತ ಶಮನವಾಗಿದೆ. ಶಿವಮೊಗ್ಗದಲ್ಲಿಯೂ ಆಗಲಿದೆ ಎಂದರು.

Share This Article