ನಾಳೆ ಅಲ್ಲಮಪ್ರಭು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಎಷ್ಟೊತ್ತಿಗೆ ನಡೆಯಲಿದೆ!? ಭದ್ರತೆ ಹೇಗಿದೆ ಗೊತ್ತಾ?

shivamogga Mar 17, 2024  Allamaprabhu Maidan, Narendra Modi ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಅಲ್ಲಮಪ್ರಭು ಮೈದಾನದಲ್ಲಿ ಈ ಸಂಬಂಧ ಬಹೃತ್ ವೇದಿಕೆ ನಿರ್ಮಿಸಲಾಗಿದೆ  

ನಾಳೆ ಅಂದರೆ ಮಾ.18 ರಂದು ಮಧ್ಯಾಹ್ನ ಸರಿಯಾಗಿ 1.15ಕ್ಕೆ ವೇದಿಕೆಗೆ ಬರಲಿದ್ದಾರೆ.  2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.  ಸಾರ್ವಜನಿಕರು ಮಧ್ಯಾಹ್ನ 12.30ರೊಳಗೆ – ವೇದಿಕೆಗೆ ಬರಬೇಕು ಎಂದು ತಿಳಿಸಲಾಗಿದೆ. 

ಬೊಮ್ಮನಕಟ್ಟೆ, ಬಿಎಚ್‌ ರಸ್ತೆಯಲ್ಲಿರುವ ಸೈನ್ಸ್‌ ಮೈದಾನ ಹಾಗೂ ಎಪಿಎಂಸಿ ಯಾರ್ಡ್‌ಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. 3 ಜನ ಎಸ್ಪಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. 

ಕಾರ್ಯಕ್ರಮ ನಡೆಯುವ ಅಲ್ಲಮಪ್ರಭು ಮೈದಾನ ಅಥವಾ ಫ್ರೀಡಂಪಾರ್ಕ್‌ನಲ್ಲಿ  ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.  

ಒಟ್ಟು  3 ಜನ ಎಸ್‌ಪಿ ,5 ಜನ ಎಎಸ್‌ಪಿ  36 ಹಾಗೂ 19 ಜನ ಡಿವೈಎಸ್‌ಪಿ  ಹಾಗೂ  64 ಸಿಪಿಐ 156 ಜನ ಪಿಎಸ್ಐ   ಹಾಗೂ ಒಂದು ಸಾವಿರ ಪೊಲೀಸ್ ಸಿಬ್ಬಂದಿ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು