ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಸಮಾವೇಶ | ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದೇನು?

Rahul Gandhi Conference in Shimoga | What did Mallikarjun Kharge say?

ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಸಮಾವೇಶ  | ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದೇನು?
Rahul Gandhi Conference in Shimoga, Mallikarjun Kharge

 

SHIVAMOGGA | MALENADUTODAY NEWS | May 2, 2024    ‌ 

 

ಶಿವಮೊಗ್ಗದ ಅಲ್ಲಮಪ್ರಭು ಕ್ರೀಡಾಂಗಣ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ನ್ಯಾಯ್‌ ಯೋಜನೆಗಳ ಬಗ್ಗೆ ವಿವರಿಸಿದರು. ಮಹಿಳೆಯರ ಅಕೌಂಟ್‌ಗೆ ಒಂದು ಲಕ್ಷ ರೂಪಾಯಿ ನೀಡುವಂತೆ ಯೋಜನೆಯನ್ನು ಕೈಗೊಂಡಿದ್ದೇವೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ ಮಹಾಲಕ್ಷ್ಮೀ ಯೋಜನೆಯನ್ನ ಜಾರಿಗೆ ತರುವ ಭರವಸೆ ನೀಡಿದ್ದೇವೆ. 

 

ಯುವಕರಿಗೆ ನೌಕರರಿಗೆ ಅಗತ್ಯವಾದ ತರಭೇತಿ ನೀಡುವದರ ಜೊತೆ 8500 ರೂಪಾಯಿ ಮಾಸಿಕ ಹಣ ನೀಡುವ ಯೋಜನೆಯನ್ನು ಹೊಂದಿದ್ದೇವೆ. ಅಲ್ಲದೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದ ಖರ್ಗೆಯವರು 72 ಸಾವಿರ ರೂಪಾಯಿ ಕೋಟಿ ಸಾಲಮನ್ನಾವನ್ನು ಈ ಹಿಂದೆ ಮಾಡಿದ್ದೇವೆ. ಈ ಸಲವೂ ಅದೇ ರೀತಿಯಲ್ಲಿ ರೈತರ ನ್ಯಾಯ ಯೋಜನೆ ಅಡಿಯಲ್ಲಿ ಸಾಲಮನ್ನಾ ಮಾಡುತ್ತೇವೆ. 

 

ಕಾರ್ಮಿಕರಾಗಿ ಮೋದಿ ಒಂದೇ ಒಂದು ಯೋಜನೆ ಜಾರಿ ಮಾಡಿಲ್ಲ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಕಾರ್ಮಿಕ ನ್ಯಾಯ ಯೋಜನೆ ತರುತ್ತವೆ. ನರೇಗಾ ಯೋಜನೆಯಡಿಯಲ್ಲಿ ನಾನೂರು ರೂಪಾಯಿವರೆಗೂ ನೀಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು. 

 

ಶಿವಮೊಗ್ಗ ಬುದ್ದಿವಂತರ ಜಿಲ್ಲೆ, ಈ ಜಿಲ್ಲೆಯಲ್ಲಿ  ಹಲವು ಬೆಳವಣಿಗೆಳು ನಡೆದಿವೆ. ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಲಾಭ ಪಡೆದವರು ಬಹಳ ಮಂದಿ ಇದ್ದಾರೆ. ಭೂ ಸುಧಾರಣಾ ಕಾನೂನಿನಿಂದ ಯಾರದ್ದೋ ಭೂಮಿ ಕಸಿದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ  ಜಾತಿ ಗಣತಿ, ಮಂಗಳಸೂತ್ರ ವಿಚಾರದಲ್ಲಿ  ಭುಗಿಲೆಬ್ಬಿಸುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ರಾಹುಲ್‌ ಗಾಂಧಿಯವರ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಹಲವು ಕೇಸ್‌ಗಳನ್ನ ಹಾಕಿದ್ದಾರೆ. ಅಲ್ಲದೆ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ನವರನ್ನ ದಿನನಿತ್ಯ ಬೈಯ್ಯದೇ ಇದ್ದರೇ ತಿಂದ ಅನ್ನ ಜೀರ್ಣವಾಗುವುದಿಲ್ಲವೇನೋ ಅಂತಾ ಮಲ್ಲಿಕಾರ್ಜುನ್‌ ಖರ್ಗೆ ಟೀಕಿಸಿದರು. ಆದರೆ ಕಾಂಗ್ರೆಸ್‌ ಪಕ್ಷ ಯಾವುದೇ ಕಾರಣಕ್ಕೂ ಮೋದಿ ಅಮಿತ್‌ ಶಾರಿಗೆ ಹೆದರೋದಿಲ್ಲ.

ಸಂವಿಧಾನವನ್ನು ರಕ್ಷಣೆ ಮಾಡಬೇಕಿದೆ ಎಂದ ಮಲ್ಲಿಕಾರ್ಜುನ್‌ ಖರ್ಗೆ, ನಮ್ಮೆಲ್ಲಾ ಆಶ್ವಾಸನೆಗಳನ್ನ ಜಾರಿಗೆ ತರಲು ನಿಮ್ಮ ಮತ ಕೇಳುತ್ತಿದ್ದೇವೆ ಎಂದರು. ನಮ್ಮ ಆಶ್ವಾಸನೆ ಗ್ಯಾರಂಟಿ, ಮೋದಿಯವರದ್ದು ಸುಳ್ಳು ಹೇಳುವುದೇ ಗ್ಯಾರಂಟಿ, ನಿಜ ಹೇಳುವುದೇ ಇಲ್ಲ ಅವರು ಎಂದು ಟೀಕಿಸಿದರು. 

ಇದೇ ವೇಳೆ ನಮ್ಮ ಚಿಹ್ನೆಯಾವುದು ಎಂದು ಕೇಳಿದ ಮಲ್ಲಿಕಾರ್ಜುನ್‌ ಖರ್ಗೆ, ಜನರು ಅದಕ್ಕೆ ಪ್ರತಿಕ್ರಿಯಿಸದ ಜನರನ್ನ ನೋಡಿ ಯಾಕ್ರಪ್ಪಾ ಊಟ ಮಾಡಿಲ್ಲವೇನು? ಎಂದು ಪ್ರಶ್ನಿಸಿದ್ರು. ಅಲ್ಲದೆ ಸ್ಲೋಗನ್‌ ಕೂಗುವಾಗಲೂ ಯಾಕ್ರಪ್ಪಾ ಸಪ್ಪಗಿದ್ದೀರಾ ಅಂತಾ ಪ್ರಶ್ನಿಸಿದ್ರು. 


Rahul Gandhi Conference in Shimoga,  Mallikarjun Kharge